ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆ. 11ರಂದು ಪುತ್ತೂರಿಗೆ ಆಗಮಿಸಲಿದ್ದಾರೆ. ಇಲ್ಲಿ ನಡೆಯಲಿರುವ ಸಹಕಾರಿ ಸಮಾವೇಶದಲ್ಲಿ ಭಾಗವಹಿಸಲು ಅವರು ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯ 50ನೇ ವರ್ಷಾ ಚರಣೆಯ ಹಿನ್ನೆಲೆಯಲ್ಲಿ ತೆಂಕಿಲದಲ್ಲಿರುವ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಅಪರಾಹ್ನ 3 ಗಂಟೆಗೆ ಬೃಹತ್ ಸಹಕಾರಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಇದರಲ್ಲಿ ಶಾ ಭಾಗಿಯಾಗಲಿದ್ದಾರೆ. ಅಲ್ಲದೇ ಅಮಿತಾ ಶಾ ಅವರು ಕ್ಯಾಂಪ್ಕೋ ಫ್ಯಾಕ್ಟರಿಗೂ ಭೇಟಿ ನೀಡಲಿದ್ದಾರೆ. ಫೆ. 10ರಿಂದ 12ರ ವರೆಗೆ ನೆಹರೂ ನಗರದಲ್ಲಿರುವ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ ಆಶ್ರಯದಲ್ಲಿ ಬೃಹತ್ ಕೃಷಿಯಂತ್ರ ಮೇಳವೂ ನಡೆಯಲಿದೆ. ಕೃಷಿ ಯಂತ್ರ ಮೇಳದ ಸ್ಥಳದಲ್ಲಿ ಸಾರ್ವಜನಿಕ ಸಮಾರಂಭ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಸಮಾರಂಭವನ್ನು ತೆಂಕಿಲದಲ್ಲಿ ನಿಗದಿ ಮಾಡಲಾಗಿದೆ. ಸದ್ಯ ಅಮಿತಾ ಶಾ ಪುತ್ತೂರು ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.