ವಿಜಯೋತ್ಸವಕ್ಕೆ ಬರುವಂತೆ ಒತ್ತಡ? ಪೆರಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಐವರಿಂದ ಹಲ್ಲೆ

ಮರೋಡಿ, ಮೇ 15: ವಿಜಯೋತ್ಸವಕ್ಕೆ ಬರುವಂತೆ ಒತ್ತಡ ಹಾಕಿ ಬರಲು ನಿರಾಕರಿಸಿದಾಗ ಕಾಂಗ್ರೆಸ್ ಕಾರ್ಯಕರ್ತನ ಹಲ್ಲೆ ನಡೆಸಿರುವ ಘಟನೆ ರವಿವಾರ ರಾತ್ರಿ ಮರೋಡಿ ಗ್ರಾ.ಪಂ. ವ್ಯಾಪ್ತಿಯ ಪೆರಾಡಿ ಬಿಜೆಪಿಯ ವಿಜಯೋತ್ಸವದ ವೇಳೆ ನಡೆದಿದೆ.

ಹಲ್ಲೆಗೊಳಗಾದವರು ಕಾಂಗ್ರೆಸ್ ಕಾರ್ಯಕರ್ತ ದಯಾನಂದ ಪೂಜಾರಿ ಎಂಬವರಾಗಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ವಿಜಯೋತ್ಸವ ಮೆರವಣಿಗೆಯ ವೇಳೆ ಇವರನ್ನು ಎಳೆದುಕೊಂಡು ಹೋಗಿ ರಾಡ್‌ನಿಂದ ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಕೆ. ವಸಂತ ಬಂಗೇರ, ರಕ್ಷಿತ್ ಶಿವರಾಂ ಸೇರಿದಂತೆ ಹಲವರು ಮುಖಂಡರುಗಳು, ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯ ಎದುರು ಜಮಾಯಿಸಿದ್ದರು.

Check Also

ಹನುಮ ಜಯಂತಿಯಂದು ಉಗ್ರ ರೂಪ ತಾಳಿದ ಆಂಜನೇಯ ಗುಡಿ ಪೂಜಾರಿ-ಮುಸ್ಲಿಂ ಯುವಕನ ಬರ್ಬರ ಹತ್ಯೆ

ರಾಯಚೂರು : ಪತ್ನಿಗೆ ಮೆಸೇಜ್ ಮಾಡಿದ ಕಾರಣಕ್ಕೆ ಹನುಮ ಜಯಂತಿಯಂದು ಉಗ್ರ ರೂಪ ತಾಳಿದ ಆಂಜನೇಯ ಗುಡಿ ಪೂಜಾರಿ ಆ …

Leave a Reply

Your email address will not be published. Required fields are marked *

You cannot copy content of this page.