ಭೋಪಾಲ್: ಹಿಂದೂ ಯುವತಿಯರೇ ನಿಮ್ಮ ಪರ್ಸ್‌ನಲ್ಲಿ ಲಿಪ್‌ಸ್ಟಿಕ್, ಬಾಚಣಿಗೆ ಇಟ್ಟುಕೊಳ್ಳೋದನ್ನ ಬಿಡಿ. ಅದರ ಬದಲು ಚಾಕು ಇಟ್ಟುಕೊಳ್ಳಿ ಎಂದು ವಿಶ್ವ ಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಾಚಿ ಕರೆಕೊಟ್ಟಿದ್ದಾರೆ.
ಭೋಪಾಲ್‌ನಲ್ಲಿ ಮಾತನಾಡಿದ ಅವರು, ಮುಸ್ಲಿಂ ಹೆಣ್ಣುಮಕ್ಕಳಂತೆ ಹಿಂದೂ ಹೆಣ್ಣುಮಕ್ಕಳು ತಮ್ಮ ಸಂಪ್ರದಾಯವನ್ನು ಬಿಡಬಾರದು. ಪ್ರೀತಿಯ ನಾಟಕವಾಡಿ ಜಿಹಾದಿಗಳು ನಿಮ್ಮ ಕುತ್ತಿಗೆ ಹಿಸುಕಲು ಮುಂದಾದ್ರೆ ಅದಕ್ಕೂ ಮೊದಲೇ ನೀವು ಅವರ ಕುತ್ತಿಗೆ ಹಿಸುಕಿ ಎಂದು ಸಾಧ್ವಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.