BIGG NEWS : ಭಜನಾ ಕಾರ್ಯಕ್ರಮ ರದ್ದುಗೊಳಿಸಿ, ಇಲ್ಲ ಪರಿಣಾಮಗಳ ಎದುರಿಸಿ- ಹಿಂದೂ ದೇಗುಲಕ್ಕೆ ಬೆದರಿಕೆ ಕರೆ

ಸ್ಟ್ರೇಲಿಯಾ : ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಹಿಂದೂ ದೇವಾಲಯವೊಂದಕ್ಕೆ ಬೆಕರಿಕೆ ಕರೆ ಬಂಬಿದ್ದು,ಧಾರ್ಮಿಕ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಲ್ಲದೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ.

 

ಮೆಲ್ಬೋರ್ನ್‌ನ ಉತ್ತರ ಉಪನಗರ ಕ್ರೇಗಿಬರ್ನ್‌ನಲ್ಲಿರುವ ಕಾಳಿ ಮಾತಾ ಮಂದಿರದ ಅರ್ಚಕರಿಗೆ ಮಂಗಳವಾರ ಪಂಜಾಬಿ ಭಾಷೆಯಲ್ಲಿ ಮಾತನಾಡುವ ವ್ಯಕ್ತಿಯಿಂದ ಕರೆ ಬಂದಿದೆ ಎಂದು ಆಸ್ಟ್ರೇಲಿಯಾ ಟುಡೇ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ನೋ ಕಾಲರ್ ಐಡಿ’ (ಕಾಲ್ ರಿಸೀವರ್‌ಗೆ ಫೋನ್ ಸಂಖ್ಯೆಯನ್ನು ತೋರಿಸುತ್ತಿಲ್ಲ) ನಿಂದ ತನಗೆ ಕರೆ ಬಂದಿದೆ. ‘ಅಮೃತಸರ-ಜಲಂಧರ್’ ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ, ಮಾರ್ಚ್ 4 ರಂದು ಭಜನ್ (ಆಧ್ಯಾತ್ಮಿಕ) ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಬೆದರಿಕೆ ಹಾಕಿದ್ದಾನೆ ಎಂದು ಎಂದು ಅರ್ಚಕ ಭಾವನಾ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗೆ, ಖಲಿಸ್ತಾನಿ ಚಳವಳಿಯನ್ನು ಬೆಂಬಲಿಸುವ ಜನರು ಆಸ್ಟ್ರೇಲಿಯಾ ಮತ್ತು ಇತರ ರಾಷ್ಟ್ರಗಳಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

ಜನವರಿಯಲ್ಲಿ, ತೈ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಕ್ಯಾರಮ್ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು. ಅದರಂತೆ ಜ. 12 ರಂದು, ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಭಾರತ ವಿರೋಧಿ ಗೀಚುಬರಹದೊಂದಿಗೆ ‘ಸಮಾಜ ವಿರೋಧಿಗಳು’ ವಿರೂಪಗೊಳಿಸಿದ್ದ ಘಟನೆ

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.