

ಸ್ಯಾಂಡಲ್ವುಡ್ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಕೈಗೆ ಗಾಯಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಹ ನಟಿ ರಾಗಿಣಿ ಇನ್ ಸ್ಟಾಗ್ರಾಮ್ ನಲ್ಲಿ ಕೈಗೆ ಗಾಯವಾಗಿರುವ 2 ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ನಟಿ ವೈದ್ಯರ ಸಲಹೆ ಮೇಲೆ ಬೆಡ್ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ರಾಗಿಣಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ʼನಾನು ಒಬ್ಬ ಭಾರತೀಯʼ ಚಿತ್ರದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ತಮ್ಮ ಅಭಿಮಾನಿಗಳಿಗೆ ಫೋಟೋ ಹಂಚಿಕೊಂಡು, ಆದಷ್ಟು ಬೇಗ ರಿಕವರ್ ಆಗುತ್ತೇನೆ ಅಂತ ರಾಗಿಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಾಬು ಗಣೇಶ್ ನಿರ್ದೇಶನ ʼನಾನು ಒಬ್ಬ ಭಾರತೀಯʼ ಸಿನಿಮಾದಲ್ಲಿ ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಆರ್ಮಿ ಕಮಾಂಡೊ ಆಫೀಸರ್ ಪಾತ್ರದಲ್ಲಿ ರಾಗಿಣಿ ಅಭಿನಯಿಸುತ್ತಿದ್ದಾರೆ.