ಬಾಲಿವುಡ್‌ನ ಜನಪ್ರಿಯ ಯುವನಟಿ ಜಾನ್ಹವಿ ಕಪೂರ್ ಅವರು ತಮ್ಮ ಚೆನ್ನೈ ಮನೆಯ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಜಾನ್ಹವಿ ತಮ್ಮ ಚೆನ್ನೈ ಮನೆಯ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ.
ಅಲ್ಲಿನ ಚಿತ್ರಗಳನ್ನು ತೋರಿಸಿದ್ದಾರೆ. ವಿವಿಧ ಕೋಣೆಗಳು, ಮನೆಯೊಂದಿಗಿನ ತಮ್ಮ ನಂಟು ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕೆಲವು ಸಂಬಂಧಿಗಳ ಪರಿಚಯವನ್ನೂ ಮಾಡಿದ್ದಾರೆ.
ಆದರೆ ವಿಡಿಯೋದಲ್ಲಿ ಜಾನ್ಹವಿ ಹೇಳಿರುವ ವಿಷಯವೊಂದು ಆಸಕ್ತಿಕರವಾಗಿದೆ. ಚೆನ್ನೈನ ಮನೆಯಲ್ಲಿ ಜಾನ್ಹವಿ ಕಪೂರ್ ಬಳಸುವ ಸ್ನಾನದ ಕೋಣೆಯ ಬಾಗಿಲಿಗೆ ಚಿಲಕವೇ ಇಲ್ಲವಂತೆ! ಹೌದು, ಮನೆಯ ಯಾವುದಾದರೊಂದು ಕೋಣೆಗೆ ಚಿಲಕ ಅತ್ಯಂತ ಅಗತ್ಯವೆಂದರೆ ಅದುವೇ ಸ್ನಾನದ ಕೋಣೆ ಅಥವಾ ಬಾತ್ ರೂಂ. ಆದರೆ ಜಾನ್ಹವಿಯ ಸ್ನಾನದ ಕೋಣೆಗೆ ಚಿಲಕ ಇಲ್ಲವಂತೆ. ವಿಡಿಯೋದಲ್ಲಿ ಅವರೇ ವಿವರಿಸಿದ್ದಾರೆ.