Uncategorized

ಗುಂಡೂರಿ ಶ್ರೀಗುರುಚೈತನ್ಯ ಸೇವಾಶ್ರಮದಲ್ಲಿ ದಿ. ಡೊಂಬಯ್ಯ ಮೂಲ್ಯರ ನುಡಿನಮನ, ಅನ್ನದಾನ, ಸಹಾಯಧನ ಹಸ್ತಾಂತರ

ಆರಂಬೋಡಿ, ಮೇ 2: ದಿ.ಡೊಂಬಯ್ಯ ಮೂಲ್ಯರ ಸ್ಮರಣಾರ್ಥ ಅವರ ಆತ್ಮಸದ್ಗತಿಗಾಗಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಒಕ್ಕೂಟ (ರಿ.) ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ನುಡಿ ನಮನ ಮತ್ತು ಅನ್ನದಾನ ಕಾರ್ಯಕ್ರಮವು ವೇಣೂರು ಸನಿಹದ ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಸುಕುಮಾರ್ ಬಂಟ್ವಾಳ, ಶೇಸಪ್ಪ ಮಾಸ್ತರ್, ವಿಠಲ ಪಲ್ಲಿಕಂಡ, ಕಿಶೋರ್ ಬಂಗೇರ, ಪುನೀತ್ ಕಾಮಾಜೆ, ಕಾರ್ತಿಕ್ ಮಯ್ಯರಬೈಲು, ಸಂತೋಷ್ ಭಂಡಾರಿಬೆಟ್ಟು, ಪ್ರದೀಪ್ ಪಲ್ಲಮಜಲು, ನಿಶಾಲ್ ಕುಲಾಲ್, ಸೌಮ್ಯ ಸುಕುಮಾರ್, ಪದ್ಮನಾಭ ನಾವೂರ ಹಾಗೂ …

Read More »

ಬಿಲ್ಲವ ಮುಖಂಡ, ನಾರಾಯಣಗುರು ವಿಚಾರ ವೇದಿಕೆಯ ರಾಜಾಧ್ಯಕ್ಷ ಸತ್ಯಜಿತ್ ಸುರತ್ಕಲ್‌ರವರ ತೇಜೋವಧೆ ಮಾಡಿದರೆ ಉಗ್ರ ಪ್ರತಿಭಟನೆ: ಬಿಲ್ಲವ ಸಂಘಟನೆಗಳಿಂದ ಎಚ್ಚರಿಕೆ

ಬೆಳ್ತಂಗಡಿ, ಮೇ 1: ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಮುಖಂಡ, ಶೋಷಿತರ ಧ್ವನಿ ಸತ್ಯಜಿತ್ ಸುರತ್ಕಲ್‌ರನ್ನು ಬೆಳ್ತಂಗಡಿ ಶಾಸಕರು ಹಾಗೂ ಇವರ ಬೆಂಬಲಿಗರು ತೇಜೋವಧೆ ಮಾಡುತ್ತಿದ್ದು, ಇದು ಮುಂದುವರಿದರೆ ಸೂಕ್ತ ಕಾನೂನು ಕ್ರಮಗಳ ಉತ್ತರದ ಜತೆ ಬಿಲ್ಲವ ಸಮಾಜದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಘಟಕ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಸಂಘಟನೆಗಳ ಪರವಾಗಿ ಯುವವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರಸಾದ್ ಎಂ.ಕೆ. ಮಾತನಾಡಿ, ಹರೀಶ್ …

Read More »

ಬಜಿರೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಯುವಪಡೆ ಫೀಲ್ಡ್‌ಗೆ

ವೇಣೂರು, ಎ. 30: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್ ಪರ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದಲ್ಲಿ ಕೈ ಕಾರ್ಯಕರ್ತರು ಪ್ರಚಾರದ ಫೀಲ್ಡ್‌ಗೆ ಇಳಿದಿದ್ದಾರೆ. ಮುದ್ದಾಡಿ ದೈವಸ್ಥಾನದ ಬಳಿ ಒಟ್ಟು ಸೇರಿರುವ ಕೈ ಕಾಯಕರ್ತರ ಪಡೆ ಬಜಿರೆ ಗ್ರಾಮದ ವಿವಿಧ ಬ್ಲಾಕ್‌ಗಳಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಅಭ್ಯರ್ಥಿ ಸೇವಾ ಕಾರ್ಯ ಮತ್ತು ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳ ಬಗ್ಗೆ ಮನೆಮನೆಗೆ ತೆರಳಿ ತಿಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿದೆ.

Read More »

ವೇಣೂರು ಚರ್ಚ್ ಬಳಿ ಅಪಾಯಕಾರಿ ಮರಗಳ ತೆರವಿಗೆ ಶೀಘ್ರ ಕ್ರಮ ವೇಣೂರು ವಲಯ ಅರಣ್ಯಾಧಿಕಾರಿ ಭರವಸೆ

ವೇಣೂರು, ಎ. 29: ವೇಣೂರು ಚರ್ಚ್ ಬಳಿಯ ಹೆದ್ದಾರಿಯಿಂದ ಸುಮಾರು 15 ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅನುಮತಿ ಬಂದಿದ್ದು, ಮಳೆಗಾಲದ ಮುಂಚೆ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ವೇಣೂರು ವಲಯ ಅರಣ್ಯಾಧಿಕಾರಿ ಮಹೀಮ್ ಎಂ. ಜನ್ನು ಅವರು ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದಾರೆ. ವೇಣೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯ ವೇಣೂರು ಚರ್ಚ್ ಬಳಿಯ ತಿರುವಿನಲ್ಲಿ ಸರಣಿ ರಸ್ತೆ ಅಪಘಾತಗಳು ನಡೆಯುತ್ತಲೇ ಇದ್ದು, ಇಂದು ಶನಿವಾರ ಸಂಜೆ ಕೂಡಾ ಈ ತಿರುವಿನಲ್ಲಿ ಟಿಪ್ಪರ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಜಖಂಗೊಂಡಿತ್ತು. …

Read More »

ಅಪಘಾತದ ಹಾಟ್‌ಸ್ಪಾಟ್ ಆಗುತ್ತಿದೆಯೇ ವೇಣೂರು ಚರ್ಚ್ ಬಳಿಯ ಕ್ರಾಸ್!

ವೇಣೂರು, ಎ. 29: ವೇಣೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯ ವೇಣೂರು ಚರ್ಚ್ ಬಳಿಯ ತಿರುವಿನಲ್ಲಿ ಸರಣಿ ರಸ್ತೆ ಅಪಘಾತಗಳು ನಡೆಯುತ್ತಲೇ ಇದ್ದು, ಅಪಘಾತದ ಹಾಟ್‌ಸ್ಪಾಟ್ ಆಗಲಿದೆಯೇ ಅನ್ನುವ ಆತಂಕ ಮೂಡಿದೆ.ಇಂದು ಶನಿವಾರ ಸಂಜೆ ಈ ತಿರುವಿನಲ್ಲಿ ಟಿಪ್ಪರ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಜಖಂಗೊಂಡಿದೆ. ಅಪಾಯಕಾರಿ ತಿರುವುಇದೊಂದು ಅಪಾಯಕಾರಿ ತಿರುವು ಆಗಿದ್ದು, ಬಹಳ ಹಿಂದಿನಿಂದಲೂ ಇಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ಹೆದ್ದಾರಿ ಅಗಲೀಕರಣದ ವೇಳೆಯೂ ಈ ತಿರುವಿಗೆ ಮುಕ್ತಿ ದೊರೆತ್ತಿಲ್ಲ. ತಿರುವಿನಲ್ಲೇ ಅಡ್ಡವಾಗಿ ಎರಡು ಬೃಹತ್ ಮರಗಳಿದ್ದು, …

Read More »

ಬಡಕೋಡಿ-ಕಾಶಿಪಟ್ಣ ರಸ್ತೆಅಪಾಯಕಾರಿ ವಿದ್ಯುತ್ ಕಂಬದ ಸ್ಥಳಾಂತರಕ್ಕೆ ಆಗ್ರಹ

ಹೊಸಂಗಡಿ, ಎ. 28: ಇಲ್ಲಿಯ ಬಡಕೋಡಿಯಿಂದ ಕಾಶಿಪಟ್ಣ ಸಂಪರ್ಕ ರಸ್ತೆಯ ಬದಿಯಲ್ಲಿ ಅಪಾಯಕಾರಿ ವಿದ್ಯುತ್ ಕಂಬವೊಂದು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಸ್ಥಳಾಂತರಿಸುವ ಅಗತ್ಯವಿದೆ. ರಸ್ತೆ ಅಗಲೀಕರಣದ ವೇಳೆ ವಿದ್ಯುತ್ ಕಂಬ ಸ್ಥಳಾಂತರ ಮಾಡಿಲ್ಲ. ಈಗಾಗಿ ರಸ್ತೆಯ ಡಾಮಾರಿಗೆ ತಾಗಿಕೊಂಡೇ ಕಂಬ ಇದ್ದು, ರಾತ್ರಿವೇಳೆಯಲ್ಲಂತೂ ತುಂಬಾ ಅಪಾಯ ತದ್ದೊಡ್ಡಿದೆ. ಅಲ್ಲದೆ ಬುಡದಲ್ಲಿ ಪೊದೆ ಆವರಿಸಿ ಸುಗಮ ಸಂಚಾರಕ್ಕೆ ಅಡಚಣೆ ಆಗಿದ್ದು, ಮೆಸ್ಕಾಂ ಇಲಾಖೆ ಶೀಘ್ರ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೇಣೂರು ಮೆಸ್ಕಾಂ ಜೆ.ಇ. ಗಣೇಶ್ ನಾಯ್ಕ್ ಅವರನ್ನು ಮಾತನಾಡಿಸಿದ್ದು, ಸ್ಥಳಪರಿಶೀಲಿಸಿ …

Read More »

ವಾಹನ ಸವಾರರೇ ಎಚ್ಚರ…! ಇಲ್ಲಿ ಹಗಲೊತ್ತಲ್ಲೂ ರಸ್ತೆಗೆ ಅಡ್ಡಬರುತ್ತೆ ಕಾಡಾನೆ! ಚಾರ್ಮಾಡಿ ಘಾಟಿಯಲ್ಲಿ ಮುಂಜಾಗ್ರತೆಯಿಂದ ಸಂಚರಿಸುವಂತೆ ಸೂಚನೆ

ಬೆಳ್ತಂಗಡಿ, ಎ. 27: ಇಂದು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಚಾರ್ಮಾಡಿ ಘಾಟಿಯ 7ನೇ ತಿರುವಿನ ಬಳಿ ಕಾಡಾನೆ ವಾಹನ ಸವಾರರಿಗೆ ಕಂಡು ಬಂದಿದೆ. ಒಂಟಿಸಲಗವು ರಸ್ತೆ ದಾಟುತ್ತಿದ್ದ ಕಾರಣ ಎರಡು ಕಡೆ ಸ್ವಲ್ಪ ಹೊತ್ತು ವಾಹನಗಳು ಸಾಲುಗಟ್ಟಿ ನಿಂತವು. ಈ ವೇಳೆ ವಾಹನ ಸವಾರರು ನಿರಂತರ ಹಾರ್ನ್ ಬಾರಿಸಿ ಕೆಲವರು ಫೋಟೋ ತೆಗೆಯಲು ಮುಂದಾದಾಗ ಆನೆ ಒಂದಿಷ್ಟು ಆಕ್ರೋಶಗೊಂಡ ಘಟನೆ ನಡೆದಿರುವ ಕುರಿತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಗಲೊತ್ತಲ್ಲೂ ಘಾಟಿ ರಸ್ತೆ ಬದಿ ಒಂಟಿ ಸಲಗ ಕಂಡುಬಂದಿರುವುದು ವಾಹನ ಸವಾರರಲ್ಲಿ ಭೀತಿ ಮೂಡಿಸಿದೆ.ಮಾಹಿತಿ ತಿಳಿದು …

Read More »

ತುಂಬೆದಲೆಕ್ಕಿ: ಸುತ್ತಮುತ್ತ ಟವರ್‌ಗಳಿದ್ದರೂ ತುಂಬೆದಲೆಕ್ಕಿಗೆ ನೆಟ್‌ವರ್ಕೆ ಇಲ್ಲ!

ಆರಂಬೋಡಿ, ಎ. 27: ಸುತ್ತಮುತ್ತ ಮೂರ್‍ನಾಲ್ಕು ಕಿ.ಮೀ. ಅಂತರದಲ್ಲಿ ಟವರ್‌ಗಳಿದ್ದರೂ ಇಲ್ಲಿಗೆ ಮಾತ್ರ ನೆಟ್‌ವರ್ಕೇ ಇಲ್ಲ! ಆರಂಬೋಡಿ ಗ್ರಾ.ಪಂ. ವ್ಯಾಪ್ತಿಯ ಗುಂಡೂರಿ ಗ್ರಾಮದ ತುಂಬೆದಲೆಕ್ಕಿ ಅನ್ನುವ ಗ್ರಾಮೀಣ ಭಾಗ ಹೆಚ್ಚು ಆರ್ಥಿಕ ವ್ಯವಹಾರ ಕೂಡಿರುವ ಪ್ರದೇಶ. ತಾಲೂಕಿನ ಮುಂಚೂಣೆಯಲ್ಲಿರುವ ಹಾಲಿನ ಸೊಸೈಟಿ, ಭಜನ ಮಂದಿರ, ಸಭಾಂಗಣ, ವೇಣೂರು ಪ್ರಾ.ಕೃ.ಪ.ಸ. ಸಂಘದ ಶಾಖೆ, ಪಡಿತರ ಕೇಂದ್ರ, ಅಂಗಡಿಗಳು ಇಲ್ಲಿವೆ.ಸರಿಸುಮಾರು ಕಳೆದೆರಡು ವರ್ಷಗಳ ಹಿಂದೆ ಇಲ್ಲಿ ಮೊಬೈಲ್ ರಿಂಗಾಗುತ್ತಿತ್ತು. ವಾಮದಪದವಿನ ಬಿಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲಿಗೆ ಸಿಗುತ್ತಿತ್ತು. ಆದರೆ ಈಗ ಸುತ್ತಮುತ್ತ ಹಲವು ಕಂಪೆನಿಗಳ ಟವರ್ ನಿರ್ಮಾಣ ಆಗಿದ್ದರೂ …

Read More »

ಮೇ ನಲ್ಲಿ 4 ಗ್ರಹಗಳ ಸಂಚಾರ : ಯಾವ ರಾಶಿಯವರಿಗೆ ಆರ್ಥಿಕ ಲಾಭ?

ಪ್ರತಿ ತಿಂಗಳು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತದೆ. ಗ್ರಹಗಳ ರಾಶಿ ಬದಲಾವಣೆಯಾದಂತೆ ಅದು ನಮ್ಮ ಮೇಲೆ ಖಂಡಿತ ಪರಿಣಾಮವನ್ನು ಬೀರುತ್ತದೆ. ಕೆಲವೊಂದು ಸಲ ಧನಾತ್ಮಕ ಪರಿಣಾಮ ಬೀರಿದರೆ ಇನ್ನೂ ಕೆಲವು ಸಲ ಋಣಾತ್ಮಕ ಪರಿಣಾಮ ಬೀರುತ್ತದೆ. ಇನ್ನೂ ಮೇ ತಿಂಗಳಿನಲ್ಲಿ ನಾಲ್ಕು ಗ್ರಹಗಳು ತಮ್ಮ ರಾಶಿಯನ್ನು ಬದಲಾವಣೆ ಮಾಡಲಿದ್ದು, ಇದರಿಂದ ಕೆಲ ರಾಶಿಗಳು ಆರ್ಥಿಕ ಲಾಭವನ್ನು ಪಡೆಯಲಿದೆ. ಹಾಗಾದ್ರೆ ಆ ರಾಶಿಗಳು ಯಾವುದು ಅನ್ನೋದನ್ನು ನೋಡೋಣ. ಮೇನಲ್ಲಿ ನಾಲ್ಕು ಗ್ರಹಗಳ ಸಂಚಾರ  : ಮೇ 15, 2023 ರಂದು ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ …

Read More »

ಬಡಕೋಡಿ ದಂದ್ಯೊಟ್ಟು ಬ್ರಹ್ಮಶ್ರೀ ಮುಗೇರ ದೈವಸ್ಥಾನದ ಜೀರ್ಣೋದ್ಧಾರ ಮೇ 20-23: ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ

ಹೊಸಂಗಡಿ, ಎ. 26: ಸರಿಸುಮಾರು 200 ವರ್ಷಗಳ ಇತಿಹಾಸ ಇರುವ ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಬಡಕೋಡಿ ಗ್ರಾಮದ ದಂದ್ಯೊಟ್ಟು ಬ್ರಹ್ಮಶ್ರೀ ಮುಗೇರ ದೈವಸ್ಥಾನಕ್ಕೆ ಜೀರ್ಣೋದ್ಧಾರದ ಪರ್ವಕಾಲ ಕೂಡಿಬಂದಿದ್ದು, ಬ್ರಹ್ಮಕಲಶೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಾತಿ, ಮತ ಬೇಧವೆನ್ನದೆ ಎಲ್ಲರ ಕೂಡುವಿಕೆಯಿಂದ ಇದೀಗ ಜೀಣೋದ್ಧಾರ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು, ಮೇ 20ರಿಂದ 23ರವರೆಗೆ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ವಿಜ್ರಂಭನೆಯಿಂದ ಜರಗಲಿದೆ. ಕ್ಷೇತ್ರದ ಇತಿಹಾಸಬಡಕೋಡಿ ಗ್ರಾಮದ ದಂಡ್ಯೊಟ್ಟು ಎಂಬಲ್ಲಿ ಬಡಕೋಡಿ, ಹೊಸಂಗಡಿ, ಕರಿಮಣೇಲು ಗ್ರಾಮದ ಹಿರಿಯರು, ಗುತ್ತು ಬರ್ಕೆಯವರು ಮತ್ತು ಮುಗೇರ ಸಮುದಾಯದವರು ಸುಮಾರು …

Read More »

You cannot copy content of this page.