Uncategorized

 ಪಂಚಭೂತಗಳಲ್ಲಿ ಲೀನವಾದ ಸ್ಪಂದನಾ..!

ಬೆಂಗಳೂರು : ಸಂಬಂಧಿಕರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತಪಟ್ಟ ಸ್ಪಂದನ ಅವರ ಮೃತ ದೇಹವನ್ನ ನಿನ್ನೆ ಬೆಂಗಳೂರಿಗೆ ತರಲಾಗಿತ್ತು. ಇಂದು ಬೆಂಗಳೂರಿನ ಶ್ರೀರಾಂಪುರದ ಹರೀಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅವರು ಪಂಚಭೂತಗಳಲ್ಲಿ ಲೀನವಾದರು.   ಶ್ರೀರಾಮಪುರದ ಹರೀಶ್ಚಂದ್ರ ಘಾಟ್ ವರೆಗೆ ಸ್ಪಂದನ ಅವರ ಅಂತಿಮ ಯಾತ್ರೆ ಆಗಮಿಸಿದ ನಂತರ ಈ ವೇಳೆ ಪುತ್ರ ಶೌರ್ಯ ವಿಧಿ ವಿಧಾನಗಳ ಪ್ರಕಾರ ಮಡಿಕೆಯನ್ನು ಹೊತ್ತು ಅವರ ತಾಯಿಯ ಮೃತದೇಹದ ಸುತ್ತ ಮೂರು ಸುತ್ತು ಹಾಕಿದ. …

Read More »

ಕುಂದಾಪುರ: ನಾಪತ್ತೆಯಾಗಿದ್ದ ಜಡ್ಕಲ್ ಯುವಕ ವಾರದ ಬಳಿಕ ಶವವಾಗಿ ಪತ್ತೆ

ಕುಂದಾಪುರ: ಕಳೆದ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಕೊಳಕೆಹೊಳೆ ಮೆಕ್ಕೆ ನಿವಾಸಿ ಮಂಜ ಎಂಬುವರ ಮಗ ಸುರೇಶ (28) ಶವವಾಗಿ ಪತ್ತೆಯಾಗಿದ್ದಾನೆ. ಶನಿವಾರ ಸಂಜೆ ಜಡ್ಕಲ್ ಸಮೀಪದ ಹಯ್ಯಂಗಾರ್ ಎಂಬಲ್ಲಿ ಹಾಸ್ಕಲ್ ಸಮೀಪದ ಹೊಳೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ಸುರೇಶನಿಗೆ ಆಗಾಗ ಮನೆ ಸಮೀಪವೇ ಹರಿಯುವ ಹೊಳೆ ಬದಿಯಲ್ಲಿ ಬಂದು ಗಂಟೆಗಟ್ಟಲೆ ಕುಳಿತುಕೊಂಡು ಹೊಳೆಯನ್ನೇ ದಿಟ್ಟಿಸಿ ನೋಡುವ ಕೆಟ್ಟ ಅಭ್ಯಾಸವಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆಯೂ ಎದ್ದು ಹಾಗೇ ಕುಳಿತಿರಬಹುದು ಎನ್ನಲಾಗಿದ್ದು, ವಿಪರೀತ ಮಳೆಯೂ ಇದ್ದಿದ್ದರಿಂದ ಹೊಳೆಗೆ …

Read More »

ಅಣ್ಣನನ್ನು ಕೊಂದವರ ಜೈಲಿಗಟ್ಟಲು ಕಷ್ಟಪಟ್ಟು ಓದಿ ವಕೀಲನಾಗಿ ಕೇಸ್ ಗೆದ್ದ ಸಹೋದರ

ಮುಂಬೈ : ತನ್ನ ಅಣ್ಣನನ್ನು ಕೊಂದವರನ್ನು ಜೈಲಿಗಟ್ಟಲು, ನ್ಯಾಯದ ಪರವಾಗಿ ಹೋರಾಟ ಮಾಡಲು ತನ್ನ ಜೀವನವನ್ನೇ ಮುಡುಪಾಗಿಟ್ಟ ಯುಕನೊಬ್ಬನ ಕಥೆ ವೈರಲ್ ಆಗಿದೆ. ಜೊತೆಗೆ ಅಣ್ಣನ ಕೊಂದವರ ಜೈಲಿಗಟ್ಟಲು ವಕೀಲನಾಗಿ, ಕೇಸ್ ಕೂಡ ಆ ಸಹೋದರ ಗೆದ್ದಿದ್ದಾನೆ. 2011ರಲ್ಲಿ ಮುಂಬೈನ ಅಂಧೇರಿಯ ಅಂಬೋಲಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕೀನನ್ ಮತ್ತು ರುಬೆನ್ ಎಂಬ ಯುವಕರು ಪಾರ್ಟಿ ಮಾಡಿ, ಮನೆಗೆ ತೆರಳುವಾಗ ಕೆಲವು ಮಂದಿ ಕಿಚಾಯಿಸಿದ್ದರು. ಇದು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿದ್ದರು. ಈ ವೇಳೆ ಹಲ್ಲೆ ನಡೆದು ಕೀನನ್ ಮತ್ತು ರುಬೆನ್ ಮೃತಪಟ್ಟಿದ್ದರು. …

Read More »

ಟ್ರಕ್ಕಿಂಗ್ ಗೆ ತೆರಳಿದ್ದ 27 ವರ್ಷದ ಯುವಕ ದಾರಿ ಮಧ್ಯೆ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು: ಟ್ರಕ್ಕಿಂಗ್ ಗೆ ಹೋಗಿದ್ದ 27 ವರ್ಷದ ಯುವಕನೋರ್ವ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 27 ವರ್ಷ ವಯಸ್ಸಿನ ರಕ್ಷಿತ್ ಎಂಬ ಯುವಕ ಸಾವನ್ನಪ್ಪಿದ ಯುವಕನಾಗಿದ್ದಾನೆ. ಮೈಸೂರು ಮೂಲದ ಏಳು ಯುವಕರ ತಂಡ ಟ್ರಕ್ಕಿಂಗ್ ಆಗಮಿಸಿದ್ದರು. ಗೆಳೆಯರ ಜೊತೆಗೆ ಟ್ರಕ್ಕಿಂಗ್ ನಲ್ಲಿ ಲವಲವಿಕೆಯಿಂದ ತೆರಳಿದ್ದ ರಕ್ಷಿತ್ ಕುದುರೆಮುಖದಿಂದ–ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳಿದ್ದ. ಆದ್ರೆ ಚಿಕ್ಕಮಗಳೂರು—ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ …

Read More »

ಬಜಿರೆ ಶಾಲೆ: ಕೇಂದ್ರದ ಪಿಎಂಶ್ರೀ ಯೋಜನೆಯ ಅನುಷ್ಠಾನಕ್ಕೆ ಚಾಲನೆ, ಎಲ್‌ಕೆಜಿ ತರಗತಿ ಉದ್ಘಾಟನೆ. ಗುಣಮಟ್ಟದ ಶಿಕ್ಷಣದಿಂದ ಇಲ್ಲಿಯ ಮಕ್ಕಳು ಆದರ್ಶ ಪುರುಷರಾಗಿ ಬೆಳೆಯಲಿ: ಶಾಸಕ ಹರೀಶ್ ಪೂಂಜ

ವೇಣೂರು, ಜೂ. 10: ಶೈಕ್ಷಣಿಕ ಕ್ಷೇತ್ರಕ್ಕೆ ಅತ್ಯಾಧುನಿಕ ಸವಲತ್ತುಗಳ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಿಎಂಶ್ರೀ ಯೋಜನೆ ಜಾರಿಗೆ ತಂದರು. ಅವರು ನೀಡಿರುವ ಕನಸಿನ ಯೋಜನೆ ಅಚ್ಚುಕಟ್ಟಾಗಿ ಅನುಷ್ಠಾನದ ವಿಶ್ವಾಸದಿಂದ ಬಜಿರೆಯನ್ನು ಆಯ್ಕೆ ಮಾಡಿದ್ದೇವೆ. ಇಲ್ಲಿಯ ಪೋಷಕರೆಲ್ಲರು ಸೇರಿ ನರೇಂದ್ರಮೋದಿಯವರಿಗೆ ಶಕ್ತಿ ತುಂಬುತ್ತೀರಿ ಎಂಬ ವಿಶ್ವಾಸವಿದೆ. ಗುಣಮಟ್ಟದ ಶಿಕ್ಷಣದಿಂದ ಇಲ್ಲಿಯ ಮಕ್ಕಳು ಆದರ್ಶ ಪುರುಷರಾಗಿ ಬೆಳೆಯಲಿ, ಪೋಷಕರಿಲ್ಲದ ಮಗುವನ್ನು ದತ್ತು ಪಡೆದ ತಾಯಂದಿರ ಸಮಿತಿ ಅದರ್ಶರು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಇಂದು ಕೇಂದ್ರ ಸರಕಾರದ ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ …

Read More »

ನಾಳೆ ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿ ವತಿಯಿಂದ ಉಚಿತ ಬರವಣಿಗೆ ಪುಸ್ತಕದ ವಿತರಣೆ

ಕುಕ್ಕೇಡಿ, ಜೂ. 10: ಇಲ್ಲಿಯ ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿ ಇದರ ವತಿಯಿಂದ ಎಂಟರಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನೀಡಲಾಗುವ ಉಚಿತ ಪುಸ್ತಕ ವಿತರಣಾ ಸಮಾರಂಭವು ಜೂ. 11ರಂದು ಬೆಳಿಗ್ಗೆ ಗಂಟೆ 9-30ರಿಂದ ಮಂಜುಶ್ರೀ ಭಜನಾ ಮಂದಿರದಲ್ಲಿ ಜರಗಲಿದೆ ಎಂದು ಭಜನ ಮಂಡಳಿ ಅಧ್ಯಕ್ಷರಾದ ಜಗನ್ನಾಥ ದೇವಾಡಿಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ವೈ. ಈಶ್ವರ ಭಟ್ ಮಂಜನಕ್ಕಿ ಗೌರವಾಧ್ಯಕ್ಷರು ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೇಣೂರು ಎಸ್‌ಡಿಎಂ ಐಟಿಐನ ಕಿರಿಯ ತರಬೇತಿ ಅಧಿಕಾರಿ ನಾಗೇಶ್ ಉಡುಪ, …

Read More »

ಕುಲಶೇಖರ: ನಿರೀಕ್ಷೆಗೂ ಮೀರಿ ಯಶಸ್ವಿಯಾದ ಬ್ರಹ್ಮಕಲಶಸಹಕರಿಸಿದ ಮಹನೀಯರಿಗೆ ನಾಳೆ ಅಭಿನಂದನೆ ಕಾರ್ಯಕ್ರಮ

ಕುಲಶೇಖರ, ಜೂ. 10: ಇತಿಹಾಸ ಪ್ರಸಿದ್ಧವಾದ ಇಲ್ಲಿಯ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರಗೈದು ಪುನರ್ ಪ್ರತಿಷ್ಠೆ ಮತ್ತು ಸಂಭ್ರಮದ ಬ್ರಹ್ಮಕಲಶ ನೆರವೇರಿದ್ದು, ನಿರೀಕ್ಷೆಗೂ ಮೀರಿ ಯಶಸ್ವಿಯಾದ ಕಾರ್ಯಕ್ರಮದ ಅಂಗವಾಗಿ ವಿಶೇಷ ಅಭಿನಂದನಾ ಸಭೆಯು ನಾಳೆ ಜೂ. 11ರಂದು ಬೆಳಿಗ್ಗೆ 10 ಗಂಟೆಯಿಂದ ದೇವಸ್ಥಾನದ ಸಭಾಂಗಣದಲ್ಲಿ ಜರಗಲಿದೆ ಎಂದು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಲಿದ್ದು, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯವರು ಹಾಗೂ ಭಕ್ತಾಧಿಗಗಳೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

Read More »

ಗ್ರಾಮ ಸುಭಿಕ್ಷೆಗಾಗಿ ಅಳದಂಗಡಿ ಸೋಮನಾಥೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನಡೆಯಿತು ಸೀಯಾಳ ಅಭಿಷೇಕ

ಅಳದಂಗಡಿ, ಜೂ. 9: ಅಳದಂಗಡಿ ಶ್ರೀ ಸೋಮನಾಥೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಉಪಸ್ಥಿತಿಯಲ್ಲಿ ಗ್ರಾಮ ಸುಭಿಕ್ಷೆಗಾಗಿ ಸೀಯಾಳ ಅಭಿಷೇಕವು ಇಂದು ನೆರವೇರಿತು. ದೇವಳದ ಅರ್ಚಕರಾದ ಪ್ರಕಾಶ್ ಹೊಳ್ಳ, ಕಿರಣ್ ಭಟ್ ಹಾಗೂ ಮುರಳಿ ಭಟ್ ಅವರು ಶಾಸ್ತೋಕ್ತವಾಗಿ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯ, ಜನ ಜಾಗೃತಿ ವೇದಿಕೆ ಅಳದಂಗಡಿ ಹಾಗೂ ವಲಯ ವಿಪತ್ತು ನಿರ್ವಹಣಾ ಘಟಕ ಅಳದಂಗಡಿ ಸಹಯೋಗದೊಂದಿಗೆ ಸೇವಾ ಕಾರ್ಯಕ್ರಮವನ್ನು ಮಾಡಲಾಯಿತು. ವಲಯ ಮೇಲ್ವಿಚಾರಕಿ ಶ್ರೀಮತಿ ಸುಮಂಗಲ, …

Read More »

ವೇಣೂರು ಠಾಣೆ: ಚುನಾವಣೆ ನಿಮಿತ್ತ ನಿಯೋಜನೆಗೊಂಡಿದ್ದ ಪೊಲೀಸ್ ಉಪನಿರೀಕ್ಷಕ ಶ್ರೀಶೈಲಾ ಡಿ. ಮುರುಗೋಡು ವರ್ಗಾವಣೆ

ವೇಣೂರು, ಜೂ. 9: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಉಪನಿರೀಕ್ಷಕ ಶ್ರೀಶೈಲಾ ಡಿ. ಮುರುಗೋಡು ಅವರು ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಕಾಪು ಠಾಣೆಗೆ ವರ್ಗಾವಣೆಗೊಂಡಿದ್ದಾರೆ.ಶ್ರೀಶೈಲ ಅವರು ಸಹಾಯಕ ಪೊಲೀಸ್ ಉಪನಿರೀಕ್ಷಕ ವೆಂಕಟೇಶ್ ನಾಯ್ಕ್ ಅವರಿಗೆ ಅಧಿಕಾರ ಹಸ್ತಾಂತರಿಸಿ ನಿರ್ಗಮಿಸಿದರು. ಶ್ರೀಶೈಲಾ ಡಿ. ಮುರುಗೋಡು ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಸಿಬ್ಬಂದಿಗಳಾದ ರವೀಂದ್ರ, ಪ್ರಶಾಂತ್ ಕುಮಾರ್, ಅಭಿಜಿತ್, ಸತ್ಯಪ್ರಕಾಶ್ ಮತ್ತು ಶ್ರೀನಿವಾಸ್ ಉಪಸ್ಥಿತರಿದ್ದರು.

Read More »

ಪುತ್ತೂರು ಬಸ್ ನಿಲ್ದಾಣದಲ್ಲಿ ಅಪ್ರಾಪ್ತ ಬಾಲಕನಿಂದ ಅಪ್ರಾಪ್ತೆಗೆ ಕಿರುಕುಳ

ಪುತ್ತೂರು: ಬಸ್ ನಿಲ್ದಾಣದಲ್ಲಿ ಅಪ್ರಾಪ್ತ ಬಾಲಕ ಅಪ್ರಾಪ್ತೆಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.ಅಪ್ರಾಪ್ತ ಬಾಲಕಿಯ ಹೆಗಲ ಮೇಲೆ ಕೈ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಕೆಲಕಾಲ ಬಸ್ ನಿಲ್ದಾಣದಲ್ಲಿ ಗೊದಂಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಬಾಲಕನನ್ನು ಠಾಣೆಗೆ ಕರೆದೊಯ್ದರು ಎನ್ನಲಾಗಿದೆ.

Read More »

You cannot copy content of this page.