Uncategorized

ನಂದಿನಿ ನಮ್ಮದು, ಕನ್ನಡಿಗರದ್ದು, ಹಿಂದಿ ಹೇರಿಗೆ ನಿಲ್ಲಿಸಿ – ಹೆಚ್ ಡಿ ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸುವುದನ್ನು ಕೆಎಂಎಫ್ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಂದಿನಿಯನ್ನು ಬ್ರಾಂಡ್ ಅನ್ನು ಹಳ್ಳ ಹಿಡಿಸಲು ವ್ಯವಸ್ಥಿತ ಸಂಚು ಹೂಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ನಂದಿನಿಯು ಅಮುಲ್ ಅಡಿಯಾಳು ಅಲ್ಲ, ಕರ್ನಾಟಕವು ಗುಜರಾತಿನ ವಸಾಹತು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ …

Read More »

ಎ. 1ರಿಂದ‌ ಔಷಧಿಗಳ ಬೆಲೆ ದುಬಾರಿ! ಸತತ ಮೂರನೇ ವರ್ಷವೂ ದರ ಏರಿಕೆ

ಸಾರ್ವಜನಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಏಪ್ರಿಲ್ 1ರಿಂದ 384 ರೀತಿಯ ಅಗತ್ಯ ಔಷಧಿಗಳ ಬೆಲೆಗಳು ರಿಂದ ಹೆಚ್ಚಾಗಲಿವೆ. ಇದರಲ್ಲಿ ನೋವು ನಿವಾರಕ ಮಾತ್ರೆಗಳು, ಹೃದ್ರೋಗಗಳಿಗೆ ಸಂಬಂಧಿಸಿದ ಮಾತ್ರೆಗಳು, ಪ್ರತಿಜೀವಕಗಳು, ಗ್ಯಾಸ್ ಟ್ರಬಲ್, ಕ್ಷಯ ತಡೆಗಟ್ಟುವ ಮಾತ್ರೆಗಳು ಸೇರಿವೆ. ರಾಷ್ಟ್ರೀಯ ಸಗಟು ಬೆಲೆ ಸೂಚ್ಯಂಕದ ಪ್ರಕಾರ ಪ್ರತಿ ವರ್ಷ ಔಷಧಿಗಳ ಬೆಲೆ ಏರಿಕೆಯನ್ನ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಪ್ರಸ್ತಾಪಿಸುತ್ತದೆ. ಈ ವರ್ಷ ಶೇಕಡಾ 12.2 ರಷ್ಟು ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಔಷಧೀಯ ಕಂಪನಿಗಳು ಜನವರಿಯಿಂದ ಔಷಧಿಗಳ ಬೆಲೆಯನ್ನ ಹೆಚ್ಚಿಸಲು ಒತ್ತಾಯಿಸುತ್ತಿವೆ. ಕಂಪನಿಗಳ …

Read More »

ಅಸೆಂಬ್ಲಿಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ತ್ರಿಪುರಾ ಬಿಜೆಪಿ ಶಾಸಕ

ಗುವಾಹಟಿ: ರಾಜ್ಯ ವಿಧಾನಸಭೆಯ ಅಧಿವೇಶನದ ವೇಳೆ ತ್ರಿಪುರಾದ ಬಿಜೆಪಿ ಶಾಸಕರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಪೋರ್ನ್ ವೀಕ್ಷಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಕ್ರೋಶ ಮತ್ತು ಟೀಕೆಗೆ ಕಾರಣವಾಗಿದೆ. ಶಾಸಕ ಜಾದವ್ ಲಾಲ್ ನಾಥ್ ಅವರು ಈಶಾನ್ಯ ರಾಜ್ಯದ ಬಾಗ್ಬಸ್ಸಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಶ್ರೀ ನಾಥ್ ಅವರ ಹಿಂದೆ ಕುಳಿತಿದ್ದ ಯಾರೋ ಸೆರೆಹಿಡಿದಿರುವ ವೀಡಿಯೊ, ಸ್ಪೀಕರ್ ಮತ್ತು ಇತರ ಶಾಸಕರು ಮಾತನಾಡುತ್ತಿರುವಾಗ ಅವರ …

Read More »

ಕಡಬ: ನದಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ..!

ಕಡಬ: ಕುಮಾರಧಾರಾ ನದಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಕೋಡಿಂಬಾಳ ಗುಂಡಿಮಜಲ್ ನಿವಾಸಿ ಮಂಜುನಾಥ್ ಎಂಬವರ ಮಗ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ (15). ನಿನ್ನೆ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ಅದ್ವೈತ್ ನನ್ನು ರಾತ್ರಿಯಿಡೀ ಮನೆಯವರು ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆವರೆಗೂ ಬಾಲಕ ಪತ್ತೆಯಾಗಿರಲಿಲ್ಲ, ಇಂದು ಬೆಳಗ್ಗೆ ಕುಮಾರಧಾರಾ ನದಿಯ ನಾಕೂರು ಗಯ ಎಂಬಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಪುತ್ತೂರು ಅಗ್ನಿಶಾಮಕ ದಳದಿಂದ ನದಿಯಲ್ಲಿ ಶೋಧ ಕಾರ್ಯಚರಣೆ ನಡೆಸಿದ್ದು, ಈ ವೇಳೆ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ದೊರೆತಿಲ್ಲ, ಕಡಬ,ಬೆಳ್ಳಾರೆ ಪೋಲೀಸರಿಂದ …

Read More »

ಮಂಗಳೂರು: 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕ ದಾರುಣ ಸಾವು

ಮಂಗಳೂರು: ಹೊಸತಾಗಿ ಎಸಿ ಮೆಷಿನ್ ಕನೆಕ್ಟ್ ಮಾಡುತ್ತಿದ್ದ ವೇಳೆ ಬಹುಮಹಡಿ ಕಟ್ಟಡದ 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕನೋರ್ವನು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಜೆ 6 ಗಂಟೆ ನಗರದ ನಂತೂರಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವೋ(23) ಮೃತಪಟ್ಟ ದುರ್ದೈವಿ. ವಿನಯ್ ತಾವ್ರೋ ನಂತೂರಿನ ಹಮಾರಾ ರೆಫ್ರಿಜರೇಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಇಂದು ನಂತೂರಿನಲ್ಲಿರುವ ಮೌಂಟ್ ಟಿಯಾರಾ ಅಪಾರ್ಟೆಂಟ್ ನಲ್ಲಿ ಹೊಸದಾಗಿ ಎಸಿ ಮೆಷಿನ್ ಕನೆಕ್ಟ್ ಮಾಡಲು ತೆರಳಿದ್ದರು. ಈ ಅಪಾರ್ಟ್ ಮೆಂಟ್ ನ 9ನೇ ಮಹಡಿಯ ಮನೆಯ ಆವರಣ …

Read More »

ಕುಂಭಶ್ರೀ ವಿದ್ಯಾಸಂಸ್ಥೆಯಿಂದ ಶಾಸಕ ಹರೀಶ್ ಪೂಂಜರಿಗೆ ಗೌರವಾರ್ಪಣೆ

ಬೆಳ್ತಂಗಡಿ: ತಾಲೂಕಿನ ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರಿಗೆ ಇಂದು ಗೌರವಾರ್ಪಣೆ ಸಲ್ಲಿಸಲಾಯಿತು.ವೇಣೂರು ಮುಖ್ಯಪೇಟೆಯಲ್ಲಿ ಜರಗಿದ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನ ಸಮಾರಂಭದಲ್ಲಿ ರಾಷ್ಟ್ರೀಯ ವಿದ್ಯಾಗೌರವ್ ಪ್ರಶಸ್ತಿ ಪುರಸ್ಕೃತ ಕುಂಭಶ್ರೀ ವಿದ್ಯಾಸಂಸ್ಥೆಯ ಸಂಚಾಲಕರಾದ ಗಿರೀಶ್ ಕೆ.ಎಚ್. ಹಾಗೂ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಅಶ್ವಿತ್ ಕುಲಾಲ್ ಅವರು ಜೊತೆಯಾಗಿ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಅನುದಾನ ಒದಗಿಸಿದ್ದಕ್ಕಾಗಿ ಶಾಸಕರಿಗೆ ಗೌರವಾರ್ಪಣೆ ಸಲ್ಲಿಸಿದರು.ಗುರುಕುಲ ಪದ್ದತಿ ಶಿಕ್ಷಣ ಮತ್ತು ಮಾತಾ-ಪಿತಾ ಗುರುದೇವೋಭವ ಕಾರ್ಯಕ್ರಮದ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ನಮ್ಮ ಸಮುದಾಯದ ಹೆಮ್ಮೆಯ …

Read More »

Hello world!

Welcome to WordPress. This is your first post. Edit or delete it, then start writing!

Read More »

ಉಡುಪಿ: ಅವಧಿ ಮೀರಿ ಡಿಜೆ ಸೌಂಡ್ – ಮೆಹಂದಿ ಕಾರ್ಯಕ್ರಮದ ಮನೆಗೆ ಪೊಲೀಸ್ ದಾಳಿ

ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಅತೀ ಕರ್ಕಶವಾದ ಡಿ.ಜೆ ಸೌಂಡ್‌ ಹಾಕಿದ್ದ ಮನೆಗೆ ಪೊಲೀಸರು ದಾಳಿ ಮಾಡಿದ ಘಟನೆ ಕುಂಜಿಬೆಟ್ಟು ಪರಿಸರದಲ್ಲಿ ನಡೆದಿದೆ. ಕುಂಜಿಬೆಟ್ಟು ಪರಿಸರದಲ್ಲಿ ಫೆ.26ರಂದು ತಡರಾತ್ರಿ 1.30ರ ಸುಮಾರಿಗೆ ಮೆಹಂದಿ ಕಾರ್ಯಕ್ರಮದಲ್ಲಿ ಅತೀ ಕರ್ಕಶವಾದ ಡಿಜೆ ಸೌಂಡ್‌ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ 76 ಬಡಗಬೆಟ್ಟು ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ಬಳಿ ಆರೋಪಿ ಶರತ್‌ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಯಾವುದೇ ಪರವಾನಿಗೆ …

Read More »

ಕಾರ್ಕಳ: ಯಕ್ಷಗಾನ ಪ್ರಸಂಗಕರ್ತ, ನಾಟಕಕಾರ, ಸಾಹಿತಿ ಅಂಬಾತನಯ ಮುದ್ರಾಡಿ ನಿಧನ

ಕಾರ್ಕಳ: ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷ ಗಾನ ಅರ್ಥಧಾರಿ, ಹರಿದಾಸ, ಜಿನದಾಸ, ವಿಡಂಬನಕಾರ, ವಾಗ್ಮಿ, ಚಿಂತನ ಅಂಕಣಕಾರ, ಸದಾಸ್ನೇಹಮಯಿ ಅಪರೂಪದ ವ್ಯಕ್ತಿತ್ವದ ಅಂಬಾತನಯ ಮುದ್ರಾಡಿ(85) ನಿಧನರಾಗಿದ್ದಾರೆ. ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುದ್ರಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂರು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಂಬಾತನಯ ಮುದ್ರಾಡಿ ಅವರು 1935ರ ಜೂನ್ 4ರಂದು ಜನಿಸಿದರು. ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಆದರೂ ಅವರ ಲೋಕಜ್ಞಾನ ವಿಶೇಷವಾದುದು. ಸ್ವಂತ ಆಸಕ್ತಿಯಿಂದ ಅಧ್ಯಯನ …

Read More »

ಮಹಿಳೆಯ ವಿಡಿಯೋ ಕಾಲ್ ಇಟ್ಟುಕೊಂಡು ಬ್ಲಾಕ್ ಮೇಲ್‌: ಯುವಕನ ಬಂಧನ

ಮಹಿಳೆಯೊಬ್ಬರ ವೀಡಿಯೋ ಕಾಲ್(Video Call) ರೆಕಾರ್ಡ್ ಮಾಡಿಕೊಂಡು  ಬ್ಲಾಕ್‌ ಮೇಲ್ ಮಾಡುತ್ತಿದ್ದ ಯುವಕನನ್ನು ಚಾಮರಾಜನಗರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಮೂಲದ ಅಜಿತ್ ಬಂಧಿತ ಆರೋಪಿ. ಜಿಲ್ಲೆಯ ಮಹಿಳೆಯೊಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡ ಈತ ಆಕೆಯೊಟ್ಟಿಗೆ ಸಲುಗೆ ಬೆಳೆಸಿಕೊಂಡು ಆಪ್ತವಾಗಿ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುವ ಜೊತೆಗೆ ಬೆದರಿಕೆ ಒಡ್ಡುತ್ತಿದ್ದ. ಈ ಸಂಬಂಧ ನೊಂದ ಮಹಿಳೆ ಚಾಮರಾಜನಗರ ಸಿಒಎನ್ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಠಾಣೆ ಪಿಐ ಆನಂದ್ ಹಾಗೂ ತಂಡ‌ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ  …

Read More »

You cannot copy content of this page.