ವಿಶೇಷ ವರದಿ

ಬಿಸಿಲಿನ ಧಗೆಗೆ ಸಾಯುತ್ತಿವೆ ಅಡಿಕೆ ಗಿಡಗಳು! ಇಂದು ವೇಣೂರು, ನಾರಾವಿ, ಅಳದಂಗಡಿ ಪರಿಸರದಲ್ಲಿ ಮೋಡದ ವಾತಾವರಣ, ವರುಣ ಕೃಪೆ ತೋರಿದರಷ್ಟೇ ರೈತರಿಗೆ ನೆಮ್ಮದಿಯ ಉಸಿರು

ವೇಣೂರು, ಎ. 25: ಇದುವರೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕಂಡು ಬರುತ್ತಿತ್ತು. ಆದರೆ ಈ ಬಾರಿ ಅನಾವೃಷ್ಟಿ ಕಾಡಿದ್ದು, ಪರಿಣಾಮ ಬೇಸಿಗೆಯ ಬಿರುಬಿಸಿಲಿಗೆ ಸಿಲುಕಿ ಅಡಿಕೆ, ಕರಿಮೆಣಸು ಗಿಡಗಳು ಒಣಗುತ್ತಿವೆ.ಇಂದು ಇದೀಗ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಪುತ್ತೂರು ಪರಿಸರದಲ್ಲಿ ಬರ್ಜರಿ ಸುರಿಯುತ್ತಿದೆ. ನೀರಿಲ್ಲದೆ ಒಣಗಿದ ಅಡಿಕೆ ತೋಟಇಷ್ಟರಲ್ಲೇ ದ.ಕ. ಜಿಲ್ಲೆಯಲ್ಲಿ ಒಂದೆರಡು ಬಾರಿಮಳೆ ಸುರಿಯಬೇಕಾಗಿತ್ತು. ಆದರೆ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆ ಬಾರದ ಕಾರಣದಿಂದಾಗಿ ಜಲಮೂಲಗಳು ಬತ್ತಿಹೋಗುತ್ತಿದ್ದು, ಅಲ್ಲಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. …

Read More »

ಹಿರಿಯ ಸಾಹಿತಿ ಪ.ರಾ. ಶಾಸ್ತ್ರಿ ಅಭಿನಂದನಾ ಸಮಿತಿಯಿಂದ ಡಾ| ಹೆಗ್ಗಡೆಯವರ ಭೇಟಿ

ಅಳದಂಗಡಿ, ಎ. 25: ಹಿರಿಯ ಸಾಹಿತಿ ಪ.ರಾ. ಶಾಸ್ತ್ರಿ ಅಭಿನಂದನಾ ಸಮಿತಿ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಸಾಹಿತಿ ಪ.ರಾ. ಶಾಸ್ತ್ರಿಯವರ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಲು ಖಾವಂದರು ಪೂರ್ಣಮನಸ್ಸಿನಿಂದ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಪೂಜ್ಯ ಖಾವಂದರರನ್ನು ಭೇಟಿಯಾದ ಅಭಿನಂದನಾ ಸಮಿತಿಯ ನಿಯೋಗದಲ್ಲಿ ಅಶೋಕ್ ಭಟ್ ಉಜಿರೆ, ಭುಜಬಲಿ ಧರ್ಮಸ್ಥಳ, ಡಾ. ಭಾಸ್ಕರ ಹೆಗಡೆ, ಡಾ. ಶ್ರೀನಾಥ್ ಎಂ.ಪಿ., ಜಯಶಂಕರ ಶರ್ಮ, ಪ್ರಶಾಂತ್ ಬಳಂಜ, ಲಕ್ಷ್ಮೀ ಮಚ್ಚಿನ ಉಪಸ್ಥಿತರಿದ್ದರು.

Read More »

ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಒಡಂಬಡಿಕೆ ಆನ್‌ಜಾಬ್ ಟ್ರೈನಿಂಗ್‌ನಲ್ಲಿ ರಾಜ್ಯದ ಗಮನ ಸೆಳೆಯುತ್ತಿರುವ ವೇಣೂರು SDM ಐಟಿಐ !

ವೇಣೂರು, ಎ. 25: ದೊಡ್ಡ ದೊಡ್ಡ ಕೈಗಾರಿಕಾ ಯಂತ್ರಗಳ ಕೆಲಸ ಕಾರ್ಯವನ್ನು ನೋಡಿ ತಮಗೂ ಮುಂದಿನ ದಿನಗಳಲ್ಲಿ ಇಂತಹ ಕೈಗಾರಿಕೋದ್ಯಮಗಳಲ್ಲಿ ನೌಕರಿ ಗಿಟ್ಟಿಸಬೇಕೆಂಬ ಹಂಬಲ ಮೂಡುವುದು ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಮಾಮೂಲಿ. ಇದಕ್ಕೆ ಪೂರಕ ಎಂಬಂತೆ ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಆನ್‌ಜಾಬ್ ಟ್ರೈನಿಂಗ್ ಎನ್ನುವ ಯೋಜನೆಯನ್ನು ಸರಕಾರ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆನ್‌ಜಾಬ್ ಟ್ರೈನಿಂಗ್ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ ಎಷ್ಟು ಐಟಿಐಗಳು ನಿಯಮನುಸಾರ ಕಡ್ಡಾಯವಾಗಿ ಆನ್‌ಜಾಬ್ ಟ್ರೈನಿಂಗ್‌ಗಾಗಿ ವಿದ್ಯಾರ್ಥಿಗಳನ್ನು ಕಂಪೆನಿ, ವರ್ಕ್‌ಶಾಪ್‌ಗಳಿಗೆ …

Read More »

67 ವರ್ಷಗಳ ಪುರಾತನದ ವೇಣೂರು ಸರಕಾರಿ ಪ್ರೌಢಶಾಲೆ ಕಟ್ಟಡ ಇತಿಹಾಸದ ಪುಟಕ್ಕೆ?! ವೇಣೂರು ಸರಕಾರಿ ಪ್ರೌಢಶಾಲೆಗೆ ಹೊಸ ಬಿಲ್ಡಿಂಗ್! ಪೂರ್ಣ ಸ್ಥಳಾಂತರಿಸಲು ಬೇಕಿವೆ ಇನ್ನಷ್ಟು ಮೂಲಸೌಲಭ್ಯ

ವೇಣೂರು, ಎ. 22: ಎತ್ತರದ ಪ್ರದೇಶ…. ಮೆಟ್ಟಿಲುಗಳಲ್ಲಿ ಹೆಜ್ಜೆ ಇಡುತ್ತಾ ಹೋದಂತೆ ದೇಗುಲಕ್ಕೆ ಪ್ರವೇಶಿಸಿದ ಅನುಭವ.. ಒಳಗೆ ಮೂರು ಸುತ್ತಲು ಕಟ್ಟಡ… ಅರ್ಥವಾಗುವ ರೀತಿಯಲ್ಲಿ ಹೇಳಬೇಕಾದರೆ ಸ್ಮಾಲ್ ಲೆಟರ್ m ವಿನ್ಯಾಸದಲ್ಲಿರುವ 67 ವರ್ಷಗಳ ಪುರಾತನದ ಅತ್ಯಂತ ಆಕರ್ಷಣೀಯ ವೇಣೂರು ಸರಕಾರಿ ಪ್ರೌಢಶಾಲೆ ಕಟ್ಟಡ ಇತಿಹಾಸದ ಪುಟಕ್ಕೆ ಸೇರಲಿವೆಯೇ? ಹೌದು ಎನ್ನುತ್ತಿದೆ ಪ್ರೌಢಶಾಲೆಗೆ ನಿರ್ಮಾಣವಾದ ಹೊಸ ಕಟ್ಟಡ. ವೇಣೂರು ಸರಕಾರಿ ಪ್ರೌಢಶಾಲೆಗೆ ನೂತನ ಕಟ್ಟಡ ಮಂಜೂರುಗೊಂಡು ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಆದರೆ ಈಗ ಇಲ್ಲಿ ನಿರ್ಮಿಸಿದ ನೂತನ ಕಟ್ಟಡದಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಕೊಠಡಿಗಳು ಸಾಕಾಗುವುದಿಲ್ಲ. …

Read More »

ಆಳ್ವಾಸ್‌ನಿಂದ ರೂ. 3 ಲಕ್ಷ, ಉಚಿತ ಶಿಕ್ಷಣದ ಘೋಷಣೆರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದ ಕು| ಅನನ್ಯಾಗೆ ಬಂಪರ್ ಕೊಡುಗೆ!

ಮೂಡಬಿದಿರೆ, ಎ. 23: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು| ಅನನ್ಯಾ 600ರಲ್ಲಿ 600 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದ್ದು, ಈಕೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ರೂ. 3 ಲಕ್ಷ ನಗದು ಬಹುಮಾನ ನೀಡಲಾಗುವುದು ಮತ್ತು ಆಕೆಯ ಮುಂದಿನ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ತಿಳಿಸಿರುವುದಾಗಿ ವರದಿಯಾಗಿದೆ. ಅಲ್ಲದೆ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿರುವ ಕು| ದಿಶಾ ರಾವ್ ಅವರಿಗೆ ರೂ. …

Read More »

2024ರ ಫೆಬ್ರವರಿ ತಿಂಗಳಲ್ಲಿ ವೇಣೂರು ಭಗವಾನ್ ಬಾಹುಬಲಿ ಮೂರ್ತಿಗೆ ಮಹಾಮಜ್ಜನ ಚುನಾವಣೆ ಬಳಿಕ ದಿನ ಘೋಷಣೆ, ಪತ್ರಿಕಾಗೋಷ್ಠಿಯಲ್ಲಿ ಡಾ. ಹೆಗ್ಗಡೆಯವರಿಂದ ಮಾಹಿತಿ

ಉಜಿರೆ, ಎ. 19: ಸುಮಾರು 400 ವರ್ಷಗಳ ಹಿಂದೆ ಸ್ಥಾಪನೆಯಾದ ವೇಣೂರು ಭಗವಾನ್ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು 2024ರ ಫೆಬ್ರವರಿಯಲ್ಲಿ ನಡೆಯಲಿದ್ದು, 10 ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಈ ಕಾರ್ಯಕ್ರಮದ ದಿನಾಂಕವನ್ನು ಚುನಾವಣೆ ಬಳಿಕ ನಿಗದಿಪಡಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಇಂದು ಸಂಜೆ ಉಜಿರೆಯ ಸಿದ್ದವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸರಕಾರ ರಚನೆಯಾದ ಬಳಿಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುವುದು, ಸರಕಾರದ ಅನುದಾನವನ್ನು ಪಡೆಯಲಾಗುವುದು. ಪೂರ್ವತಯಾರಿಯಾಗಿ ಕೆಲವು ಅಭಿವೃದ್ಧಿ ಕಾರ್ಯಗಳು ವೇಣೂರಿನಲ್ಲಿ ನಡೆಯಲಿದೆ ಎಂದು …

Read More »

ಪೋಷಕರೇ ಎಚ್ಚರ..! ಮಕ್ಕಳನ್ನು ದಾಖಲಾತಿ ಮಾಡಲು ಯೋಚಿಸಿದ್ದೀರಾ..?! ರಾಜ್ಯದಲ್ಲಿವೆ 1316 ಅನಧಿಕೃತ ಶಾಲೆಗಳು! ಮುಚ್ಚಲು ಮೇ 25ರವರೆಗೆ ಗಡುವು

ಬೆಂಗಳೂರು, ಎ. 19: ಶಿಕ್ಷಣ ಇಲಾಖೆಯು ರಾಜ್ಯದಲ್ಲಿ 1316 ಅನಧಿಕೃತ ಶಾಲೆಗಳನ್ನು ಗುರುತಿಸಿದ್ದು, ಇನ್ನಷ್ಟು ಶಾಲೆಗಳ ತಪಾಸಣೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿ ಮೇ 25 ರೊಳಗೆ ಶಾಲೆಗಳನ್ನು ಮುಚ್ಚಲು ಸೂಚಿಸಿದ್ದು, ಅನಧಿಕೃತ ಶಾಲೆಗಳ ಆಡಳಿತ ಮಂಡಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. `ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಬೇಕು, ದೂರುಗಳು ಬಂದರೂ, ಕ್ರಮ ಕೈಗೊಳ್ಳದೆ ಸಮಯ ವ್ಯರ್ಥ ಮಾಡಬಾರದು. ಪಟ್ಟಿಯನ್ನು ಒದಗಿಸಿದರೆ ಪೋಷಕರಿಗೂ ಅನುಕೂಲವಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸುವ ಮೊದಲು …

Read More »

ನೀವು ಪಂಚಾಯತ್ ತೆರಿಗೆದಾರರೇ? ಎಟಿಎಂ ಮಾಡಿಸಿಕೊಳ್ಳಿ! ಪಂಚಾಯತ್‌ಗಳಲ್ಲಿನ್ನು Android POS Machine ಮೂಲಕ ತೆರಿಗೆ ಸಂಗ್ರಹ..!

Special Report by Padmanabha Venur Chief Editor, ruralnewsxpress Team Chief Editor, ruralnewsxpress Team ವೇಣೂರು, ಎ. 18: ಮನೆ ತೆರಿಗೆ, ಕಟ್ಟಡ ತೆರಿಗೆ, ನೀರಿನ ಬಿಲ್, ಅಂಗಡಿ ಲೈಸನ್ಸ್ ಮುಂತಾದವುಗಳಿಗೆ ಪಂಚಾಯತ್‌ಗಳಲ್ಲಿ ಹಣನೀಡಿ ರಶೀದಿ ಪಡೆದುಕೊಳ್ಳುವ ವಾಡಿಕೆಯಾಗಿತ್ತು. ಆದರೆ ಇನ್ನು ಹಣದ ಬದಲು ಪಂಚಾಯತ್‌ಗೆ ಎಟಿಎಂ ಕಾರ್ಡ್ ಕೊಂಡೊಯ್ಯಬೇಕು.ಹೌದು, ಗ್ರಾಮ ಪಂಚಾಯತ್‌ಗಳಲ್ಲಿ ತೆರಿಗೆ ವಸೂಲಾತಿಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹಾಗೂ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ತೆರಿಗೆ ದರ ಮತ್ತು ಇತರ ಫೀಜುಗಳನ್ನು ವಸೂಲಾತಿ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು …

Read More »

ಕುಡಿಯುವ ನೀರು ಬಳಕೆದಾರರೇ ಹುಷಾರ್! ಅನ್ಯ ಕಾರ್ಯಕ್ಕೆ ನೀರು ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೆ ವೇಣೂರು ಪಂ.!

ವೇಣೂರು, ಎ. 18: ಪಂಚಾಯತ್ ವತಿಯಿಂದ ಕುಡಿಯುವ ನೀರು ಸಂಪರ್ಕ ಪಡೆದುಕೊಂಡಿರುವ ಬಳಕೆದಾರರು ನೀರನ್ನು ಕಟ್ಟಡ ಕಾಮಗಾರಿಗೆ, ತೋಟಕ್ಕೆ ಹಾಗೂ ಇನ್ನಿತ್ತರ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ನೀರು ಸಂಪರ್ಕವನ್ನು ಕಡಿತಗೊಳಿಸಿ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವೇಣೂರು ಗ್ರಾ.ಪಂ. ಎಚ್ಚರಿಕೆ ನೀಡಿದೆ.ಬೇಸಿಗೆಯ ಕೊನೆಯ ಹಂತದ ಈ ಸಮಯದಲ್ಲಿ ನೀರನ್ನು ಬಹಳಷ್ಟು ಎಚ್ಚರಿಕೆಯಿಂದ ಬಳಕೆ ಮಾಡಬೇಕಾಗುತ್ತದೆ. ಕುಡಿಯುವ ನೀರು ಇನ್ನಿತ್ತರ ಉದ್ದೇಶಕ್ಕೆ ಬಳಸುವುದರಿಂದ ಎತ್ತರದ ಪ್ರದೇಶದ ಗ್ರಾಮಸ್ಥ ಬಳಕೆದಾರರಿಗೆ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ. ಕೊಳವೆ ಬಾವಿಯಲ್ಲೂ ಅಂತರ್ಜಲ ಮಟ್ಟ …

Read More »

ಮೆಸ್ಕಾಂ ವೇಣೂರು: ವಿದ್ಯುತ್ ಬಿಲ್ ಸ್ವೀಕಾರದ ಮಾಹಿತಿ ತಿಳಿಯಿರಿ

ವೇಣೂರು, ಎ. 18: ಇಂದು ವಿದ್ಯುತ್ ಬಿಲ್ ಪಾವತಿಗೆ ಅನೇಕ ವಿದಾನಗಳಿವೆ. ವಿವಿಧ ಆಪ್‌ಗಳ ಮೂಲಕ ಮೊಬೈಲ್‌ನಲ್ಲೇ ಪಾವತಿಗೂ ಅವಕಾಶ ಇದೆ. ವೇಣೂರು ಮೆಸ್ಕಾಂ ಕಚೇರಿಯಲ್ಲಿ ಪ್ರತೀ ತಿಂಗಳ 10, 14, 21 ಮತ್ತು 25ನೇ ತಾರೀಕಿನಂದು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ವಿದ್ಯುತ್ ಬಿಲ್ ಸ್ವೀಕರಿಸುತ್ತಾರೆ. ಪಂಚಾಯತ್‌ನಲ್ಲಿ ಯಾವಾಗೆಲ್ಲ ವಿದ್ಯುತ್ ಬಿಲ್ ಸ್ವೀಕರಿಸುತ್ತಾರೆ ಇನ್ನಷ್ಟು ಮಾಹಿತಿತಿಳಿಯಿರಿ ಪ್ರತೀ ತಿಂಗಳ ಒಂದನೇ ತಾರೀಕಿನಂದು ಆರಂಬೋಡಿ ಗ್ರಾ.ಪಂ. ಕಚೇರಿಯಲ್ಲಿ, ನಾಲ್ಕನೇ ತಾರೀಕಿನಂದು ಕಾಶಿಪಟ್ಣ ಗ್ರಾ.ಪಂ. ಕಚೇರಿಯಲ್ಲಿ, ಐದು ಮತ್ತು ಇಪ್ಪತೈದನೇ ತಾರೀಕಿನಂದು ಪೆರಿಂಜೆ ಗ್ರಾ.ಪಂ. …

Read More »

You cannot copy content of this page.