ನೀವು ಪಂಚಾಯತ್ ತೆರಿಗೆದಾರರೇ? ಎಟಿಎಂ ಮಾಡಿಸಿಕೊಳ್ಳಿ! ಪಂಚಾಯತ್‌ಗಳಲ್ಲಿನ್ನು Android POS Machine ಮೂಲಕ ತೆರಿಗೆ ಸಂಗ್ರಹ..!

Special Report by Padmanabha Venur Chief Editor, ruralnewsxpress Team

Chief Editor, ruralnewsxpress Team

ವೇಣೂರು, ಎ. 18: ಮನೆ ತೆರಿಗೆ, ಕಟ್ಟಡ ತೆರಿಗೆ, ನೀರಿನ ಬಿಲ್, ಅಂಗಡಿ ಲೈಸನ್ಸ್ ಮುಂತಾದವುಗಳಿಗೆ ಪಂಚಾಯತ್‌ಗಳಲ್ಲಿ ಹಣನೀಡಿ ರಶೀದಿ ಪಡೆದುಕೊಳ್ಳುವ ವಾಡಿಕೆಯಾಗಿತ್ತು. ಆದರೆ ಇನ್ನು ಹಣದ ಬದಲು ಪಂಚಾಯತ್‌ಗೆ ಎಟಿಎಂ ಕಾರ್ಡ್ ಕೊಂಡೊಯ್ಯಬೇಕು.
ಹೌದು, ಗ್ರಾಮ ಪಂಚಾಯತ್‌ಗಳಲ್ಲಿ ತೆರಿಗೆ ವಸೂಲಾತಿಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹಾಗೂ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ತೆರಿಗೆ ದರ ಮತ್ತು ಇತರ ಫೀಜುಗಳನ್ನು ವಸೂಲಾತಿ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ Android POS Machine   ಗಳನ್ನು ಮೊದಲ ಹಂತದಲ್ಲಿ ರಾಜ್ಯದ 2000 ಗ್ರಾ.ಪಂ.ಗಳಿಗೆ ಒದಗಿಸಿದೆ. ಪ್ರಾಯೋಗಿಕವಾಗಿ ಇಲಾಖೆ ಕೈಗೊಂಡಿರುವ ಈ ಯೋಜನೆ ಯಶಸ್ವಿಯಾದರೆ ಎಲ್ಲಾ ಗ್ರಾ.ಪಂ.ಗಳಿಗೆ ವಿಸ್ತರಿಸಲು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆಯ್ಕೆಗೊಂಡ ಪಂಚಾಯತ್‌ಗಳ ಬಿಲ್ ವಸೂಲಿಗ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ. ಈ ಮೂಲಕ ಪಂಚಾಯತ್‌ಗಳ ಆಡಳಿತ ಮತ್ತಷ್ಟು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಇಲಾಖೆ ಮುಂದಾಗಿದೆ.

ಏನಿದು Android POS Machine ?
ಬಸ್ ಕಂಡಕ್ಟರ್‌ಗಳಲ್ಲಿ, ಪಿಗ್ನಿ ಸಂಗ್ರಹಕರಲ್ಲಿರುವ ಯಂತ್ರದಂತೆ ಕಂಡು ಬರುವ Android POS Machine   ಸಂಪೂರ್ಣ ಡಿಜೀಟಲೀಕರಣ ಆಗಿದೆ. ಸಂಪೂರ್ಣ ಟಚ್ Android ಮೊಬೈಲ್‌ನಂತೆ ಡಿಪ್ಲೆ ಹೊಂದಿದೆ. ತೆರಿಗೆ ಪಾವತಿದಾರರು ನಿಮ್ಮ ರೂಪೆ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡನ್ನು ಪಂಚಾಯತ್‌ನ ಬಿಲ್ ಕಲೆಕ್ಟರ್‌ನಲ್ಲಿ ನೀಡಬೇಕು. ಬಸ್‌ಗಳಲ್ಲಿ ಕಂಡಕ್ಟರ್‌ಗಳು ಚಲೋ ಕಾರ್ಡ್‌ನ್ನು ಉಪಯೋಗಿಸಿದಂತೆ ಅವರು ನಮ್ಮ ಎಟಿಎಂನಿಂದ ತೆರಿಗೆಯನ್ನು ವಸೂಲಿ ಮಾಡುತ್ತಾರೆ. ಅಲ್ಲದೆ ಫೋನ್‌ಪೇ, ಗೂಗಲ್ ಪೇನಲ್ಲಿ ಕ್ಯೂಆರ್ ಕೋಡ್ ಸ್ಕಾನರ್ ಮೂಲಕವೂ ಹಣ ಪಾವತಿಗೆ ಅವಕಾಶ ಇದೆ. ಆದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿರಬೇಕು ಅಷ್ಟೆ.

ಸಮಸ್ಯೆಗಳೇನೇನು ಗೊತ್ತಾ….?
ಎಕ್ಸಿಸ್ ಬ್ಯಾಂಕ್ ಸಂಪರ್ಕದಲ್ಲಿರುವ ಈ ಯಂತ್ರದಲ್ಲಿ ತೆರಿಗೆ ವಸೂಲಿ ಮಾಡಲು ಇಂಟರ್‌ನೆಟ್ ಬೇಕು. ಇಂಟರ್‌ನೆಟ್ ಕೈಕೊಟ್ಟರೆ ತೆರಿಗೆ ಪಾವತಿಯೂ ಸಾಧ್ಯವಾಗದು. ಇದು ತೆರಿಗೆ ಪಾವತಿಸಲೆಂದು ಪಂಚಾಯತ್‌ಗೆ ಬರುವ ತೆರಿಗೆದಾರರಿಗೆ ಅಲೆದಾಡುವ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಹೆಚ್ಚು. (ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸರ್ವರ್, ಇಂಟರ್‌ನೆಟ್ ಸಮಸ್ಯೆ ಎಂದು ಗ್ರಾಹಕರನ್ನು ವಾಪಾಸು ಕಳುಹಿಸುವಂತೆ) ಅಲ್ಲದೆ ಪಂಚಾಯತ್ ಆಡಳಿತದ ತೆರಿಗೆ ವಸೂಲಿಯ ನಿಗಧಿತ ಗುರಿ ತಲುಪಲು ಇದು ಸವಾಲು ಆಗುವ ಸಾಧ್ಯತೆಯೂ ಇದೆ. ಅದಕ್ಕಿಂತಲೂ ಮುಖ್ಯವಾಗಿ ನಿಮ್ಮಲಿ ಪಾವತಿ ಕಾರ್ಡ್‌ಗಳು ಅಥವಾ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಇಲ್ಲಾ ಎಂದಾದರೆ ತೆರಿಗೆ ಪಾವತಿಯೂ ಸಾಧ್ಯವಾಗದು. ಇದು ವಯಸ್ಕರು, ಅನಸ್ತರಸ್ಥ ಹಿರಿಯ ಮಹಿಳೆಯರಿಗೆ ಸವಾಲಾಗಿದೆ. ತೆರಿಗೆ ಪಾವತಿ ರಶೀದಿ ಸರಕಾರದ ಹೆಚ್ಚಿನ ಯೋಜನೆಗಳನ್ನು ಪಡೆದುಕೊಳ್ಳಲು ಅಗತ್ಯದ ದಾಖಲೆ ಆಗಿದ್ದು, Android POS Machine ನಲ್ಲಿ ಬಸ್ ಟಿಕೆಟ್‌ನಂತೆ ಬರುವ ತೆರಿಗೆ ಪಾವತಿಯ ಚಿಕ್ಕ ರಶೀದಿ ಕಾರ್ಬನ್ ಥರ್ಮಲ್ ಇಮೇಜ್ ಪ್ರಿಂಟ್‌ನಿಂದ ಅಕ್ಷರಗಳು ಹೆಚ್ಚು ಸಮಯ ಉಳಿಯುವುದಿಲ್ಲ. ಒಟ್ಟಿನಲ್ಲಿ ಡಿಜಿಟಲೀಕರಣ ವ್ಯವಸ್ಥೆಗೆ ಬದಲಾಯಿಸುವಾಗ ಸಾಕಷ್ಟು ಸಾಧಕ ಬಾಧಕಗಳನ್ನು ಪರಿಶೀಲಿಸುವುದು ಸೂಕ್ತವಲ್ಲವೇ?

—————————————–

ಕ್ಯಾಶ್ ಪೇಮೆಂಟ್‌ಗೂ ಅವಕಾಶಕ್ಕೆ ಇಲಾಖೆಯನ್ನು ಕೇಳಿಕೊಳ್ಳಲಾಗಿದೆ
ಸರಕಾರದ ಹೊಸ ತೆರಿಗೆ ನೀತಿಯಂತೆ 1-4-2022ರಿಂದಲೇ   Android POS Machine   ಜಾರಿಗೆ ಬಂದಿದೆ. ಆದರೆ ಕಾರ್ಯಯೋಜನೆಗೆ ಬರಲು ಸಮಯವಕಾಶ ಪಡೆದುಕೊಂಡಿದ್ದು, ಇನ್ನೂ ಸರಿಯಾಗಿ  ಅಪ್‌ಡೇಟ್ ಆಗಿಲ್ಲ. ಯಂತ್ರದಲ್ಲಿ ಸದ್ಯಕ್ಕೆ ರೂಪೆ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡನ್ನು ಬಳಸಿ ಹಣ ಪಾವತಿ ಮಾಡಲು ಅವಕಾಶ ಇದೆ. ಗ್ರಾಮಸ್ಥರ ಹಿತದೃಷ್ಟಿಯಿಂದ ಕ್ಯಾಶ್ ಪೇಮೆಂಟ್‌ನ ಅಗತ್ಯತೆಯನ್ನು ಮನಗಂಡು ಕ್ಯಾಶ್ ಪೇಮೆಂಟ್‌ಗೂ ಯಂತ್ರದಲ್ಲಿ ಆಯ್ಕೆಯನ್ನು ಅಳವಡಿಸುವಂತೆ ಇಲಾಖೆಯನ್ನು ಕೇಳಿಕೊಂಡಿದ್ದೇವೆ. ಸದ್ಯದಲ್ಲೇ ಅವಕಾಶ ಬರುವ ನಿರೀಕ್ಷೆ ಇದೆ.

– ನಾಗೇಶ್ ಎಂ.
Panchayath Devolopment Officer
ಗ್ರಾಮ ಪಂಚಾಯತು ವೇಣೂರು.

Check Also

ವಿದ್ಯಾರ್ಥಿನಿ ತಲೆ ಕಡಿದು ಹತ್ಯೆ ಮಾಡಿದ್ದ ಆರೋಪಿ ಅರೆಸ್ಟ್

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್​ಎಸ್​ಎಲ್​ಸಿ ಫಲಿತಾಂಶ …

Leave a Reply

Your email address will not be published. Required fields are marked *

You cannot copy content of this page.