ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಒಡಂಬಡಿಕೆ ಆನ್‌ಜಾಬ್ ಟ್ರೈನಿಂಗ್‌ನಲ್ಲಿ ರಾಜ್ಯದ ಗಮನ ಸೆಳೆಯುತ್ತಿರುವ ವೇಣೂರು SDM ಐಟಿಐ !

ವೇಣೂರು, ಎ. 25: ದೊಡ್ಡ ದೊಡ್ಡ ಕೈಗಾರಿಕಾ ಯಂತ್ರಗಳ ಕೆಲಸ ಕಾರ್ಯವನ್ನು ನೋಡಿ ತಮಗೂ ಮುಂದಿನ ದಿನಗಳಲ್ಲಿ ಇಂತಹ ಕೈಗಾರಿಕೋದ್ಯಮಗಳಲ್ಲಿ ನೌಕರಿ ಗಿಟ್ಟಿಸಬೇಕೆಂಬ ಹಂಬಲ ಮೂಡುವುದು ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಮಾಮೂಲಿ.


ಇದಕ್ಕೆ ಪೂರಕ ಎಂಬಂತೆ ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಆನ್‌ಜಾಬ್ ಟ್ರೈನಿಂಗ್ ಎನ್ನುವ ಯೋಜನೆಯನ್ನು ಸರಕಾರ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆನ್‌ಜಾಬ್ ಟ್ರೈನಿಂಗ್ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ ಎಷ್ಟು ಐಟಿಐಗಳು ನಿಯಮನುಸಾರ ಕಡ್ಡಾಯವಾಗಿ ಆನ್‌ಜಾಬ್ ಟ್ರೈನಿಂಗ್‌ಗಾಗಿ ವಿದ್ಯಾರ್ಥಿಗಳನ್ನು ಕಂಪೆನಿ, ವರ್ಕ್‌ಶಾಪ್‌ಗಳಿಗೆ ಕಳುಹಿಸಿಸುತ್ತಾರೆಯೋ ಅನ್ನುವುದು ಗೊತ್ತಿಲ್ಲ. ಆದರೆ ವೇಣೂರು ಸನಿಹದ ಗೋಳಿಯಂಗಡಿಯಲ್ಲಿರುವ ಶ್ರೀ ಮಂಜುನಾಥೇಶ್ವರ ಕೈಗಾರಿಕ ತರಬೇತಿ ಸಂಸ್ಥೆಯು ಸ್ಥಳೀಯ ವರ್ಕ್‌ಶಾಪ್‌ಗಳಿಗೆ ಮಾತ್ರವಲ್ಲದೆ ಬೆಂಗಳೂರಿನ ವಿವಿಧ ಕಂಪೆನಿಗಳಿಗೂ ಆನ್‌ಜಾಬ್ ಟ್ರೈನಿಂಗ್‌ಗಾಗಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದು, ಕೈಗಾರಿಕೋದ್ಯಮಿಗಳಿಗೆ ನುರಿತ ತಂತ್ರಜ್ಞರನ್ನು ಸಿದ್ಧಗೊಳಿಸುತ್ತಿದೆ.

ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಒಡಂಬಡಿಕೆ
ಹೌದು, ವೇಣೂರು ಎಸ್‌ಡಿಎಂ ಕೈಗಾರಿಕಾ ತರಬೇತಿ ಸಂಸ್ಥೆಯು ಬಾಸ್, ಟೊಯೊಟಾ, ಪ್ಲೈಡರ್ ಎಲೆಕ್ಟ್ರಿಕ್ ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಒಡಂಬಡಿಕೆ ಹೊಂದಿದ್ದು, ವಿದ್ಯಾರ್ಥಿಗಳಿಗೆ ಇಂತಹ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ತರಬೇತಿ ಅವಧಿಯಲ್ಲೇ ಪ್ರಾಕ್ಟಿಕಲ್ ತರಬೇತಿ ಪಡೆಯಲು ಅವಕಾಶ ದೊರೆಯುವಂತೆ ಮಾಡಿರುವುದು ವೇಣೂರು ಐಟಿಐ ರಾಜ್ಯದಲ್ಲಿ ಗುರುತ್ತಿಸಿಕೊಳ್ಳಲು ಕಾರಣ.

ನೂತನ ತಂತ್ರಜ್ಞಾನಗಳನ್ನು ಅರಿತು ಕೊಳ್ಳಲು ಅವಕಾಶ
ವೈದ್ಯಕೀಯ ಪದವಿ ಪಡೆದ ಕೂಡಲೇ ಇಂಟರ್ನ್ಸ್ ಶಿಫ್ ನಡೆಸುವಂತೆ ಐಟಿಐಗಳಲ್ಲಿ  ತರಬೇತಿ ಪಡೆಯುವ ಕೊನೆಯ ಹಂತದಲ್ಲಿ ತಮ್ಮ ವೃತ್ತಿಗನುಸಾರವಾಗಿ ವಿವಿಧ ಕಂಪನೆಗಳಲ್ಲಿ, ಕಾರ್ಯಾಗಾರಗಳಲ್ಲಿ ಕಿರು ಅವಧಿಯ ತರಬೇತಿಗೆ ನಿಯೋಜನೆ ಗೊಳಿಸಲಾಗುತ್ತಿದೆ. ಆ ಮುಖೇನ ಕೈಗಾರಿಕಾ ಸ್ಥಾವರಗಳ ದೈನಂದಿನ ಚಟುವಟಿಕೆಗಳು, ನಿಯಮಗಳು ಮತ್ತು ನೂತನ ತಂತ್ರಜ್ಞಾನವನ್ನು ಅರಿತು ಕೊಳ್ಳಲು ಈ ಐಟಿಐ  ವಿದ್ಯಾರ್ಥಿಗಳಿಗೆ ಅವಕಾಶ ನೀಡಿದಂತಾಗಿದೆ.

ಕೌಶಲ್ಯಭಿವೃದ್ಧಿಯಲ್ಲಿ ಹೊಸ ಮೈಲುಗಲ್ಲು
ಐ.ಟಿ.ಐ. ಗಳಲ್ಲಿ ಒಂದು ವರ್ಷದ, ಎರಡು ವರ್ಷದ ತರಬೇತಿಯ ಕೊನೆಯ ಎರಡು ತಿಂಗಳ ಅವಧಿಯಲ್ಲಿ ನೀಡುವ ಈ ನೂತನ ಪದ್ಧತಿಯ ತರಬೇತಿಯು ಯುವಜನತೆಯ ಕೌಶಲ್ಯಭಿವೃದ್ಧಿಯಲ್ಲಿ ಒಂದು ಮೈಲುಗಲ್ಲಾಗಿ ಪರಿಣಮಿಸುವುದು ನಿಜ. ಒಟ್ಟಿನಲ್ಲಿ ಹೇಳುವುದಾದರೆ ಇಂದಿನ ಯುವ  ಜನತೆಗೆ ತನ್ನ ಸುಪ್ತ ಮನಸ್ಸಿನಲ್ಲಿ ಹುದುಗಿರುವ ದಿವ್ಯ ಪ್ರತಿಭೆಯನ್ನು ಹೊರ ಸೆಳೆದು ತಮ್ಮ ಭವಿಷ್ಯತ್ತನ್ನು ರೂಪಿಸುವಲ್ಲಿ  ಐಟಿಐಗಳಲ್ಲಿ  ಅಳವಡಿಸಿರುವ ಈ ನೂತನ ಪದ್ಧತಿಯು ಅತ್ಯಂತ ಪರಿಣಾಮಕಾರಿಯೆನಿಸಲಿದೆ.
ಪ್ರತಿಕ್ರಿಯಿಸಿ: ruralnewsxpress@gmail.com

——————————————–

ದೊಡ್ಡ ದೊಡ್ಡ ಕಂಪೆನಿಗಳಿಲ್ಲಿ ಆನ್‌ಜಾಬ್ ಟ್ರೈನಿಂಗ್ ಪಡೆಯಲು ಸಹಕಾರಿ
ಬಹಳ ದುಬಾರಿಯೆನಿಸಿರುವ ಉನ್ನತ ತಂತ್ರಜ್ಞಾನದ ಉಪಕರಣಗಳು ಸಾಮಾನ್ಯವಾಗಿ ತರಬೇತಿಂii ಸಮಯದಲ್ಲಿ ದೊರಕುವುದು ಕಷ್ಟ ಸಾಧ್ಯ. ಆದರೆ ನಮ್ಮ ಸಂಸ್ಥೆಯು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಒಡಂಬಡಿಕೆ ಹೊಂದಿರುವ ಕಾರಣ ಇಲ್ಲಿನ ವಿದ್ಯಾರ್ಥಿಗಳಿಗೆ ದೊಡ್ಡ ದೊಡ್ಡ ಕಂಪೆನಿಗಳಿಲ್ಲಿ ಆನ್‌ಜಾಬ್ ಟ್ರೈನಿಂಗ್ ಪಡೆಯಲು ಸಹಕಾರಿ ಆಗಿದೆ.  ಕೈಗಾರಿಕಾ ಸ್ಥಾವರಗಳಲ್ಲಿಯೇ ನೀಡಲಾಗುವ ಈ ಕಿರು ಅವಧಿಯ ತರಬೇತಿಯಿಂದಾಗಿ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಯ ಜತೆಗೆ ಆಯಾ ಕ್ಷೇತ್ರದ ಒಳಗುಟ್ಟನ್ನು ಅರಿತು ಮನೋಬಲವೂ ವೃದ್ಧಿಯಾಗುತ್ತದೆ ಮತ್ತು ಆ ಮುಖೇನ ಕೈಗಾರಿಕೆಗಳಲ್ಲಿ ನೇಮಕಾತಿ ನಡೆಸುವವರಿಗೆ ಈ ವಿದ್ಯಾರ್ಥಿಗಳ ಗುಣಮಟ್ಟವನ್ನು ತಿಳಿದುಕೊಳ್ಳುವಲ್ಲಿ ಸಹಾಯವಾಗುತ್ತದೆ. ಧರ್ಮಸ್ಥಳದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಮುನ್ನಡೆಯುತ್ತಿದೆ.


– ವಿಶ್ವೇಶ್ವರಪ್ರಸಾದ್ ಕೆ.ಆರ್.
ಪ್ರಾಚಾರ್ಯರು, ಶ್ರೀ ಧ.ಮಂ. ಕೈಗಾರಿಕ ತರಬೇತಿ ಸಂಸ್ಥೆ ವೇಣೂರು

ಪ್ರಾಕ್ಟಿಕಲ್ ತರಬೇತಿಯ ಅಗತ್ಯವಿಲ್ಲ ಅನ್ನುವ ಮಟ್ಟಿಗೆ ಕಾರ್ಯದಲ್ಲಿ ನೈಪುಣ್ಯತೆ ಹೊಂದಿದ್ದರು!
ವೇಣೂರು ಐಟಿಐನಿಂದ ತರಬೇತಿಗಾಗಿ ಎರಡು ಬ್ಯಾಚ್‌ನಲ್ಲಿ ವಿದ್ಯಾರ್ಥಿಗಳು ಬಂದಿದ್ದರು. ಆದರೆ ಅವರು ತರಬೇತಿ ಪಡೆಯುವ ವಿದ್ಯಾರ್ಥಿಗಳಂತೆ ಕಂಡಿಲ್ಲ. ಯಂತ್ರೋಪಕರಣಗಳ ಬಳಕೆಯನ್ನು ಬಹಳ ಅಚ್ಚುಟ್ಟಾಗಿ  ಕಲಿತುಕೊಂಡಿದ್ದರು. ಇವರಿಗೆ ಪ್ರಾಕ್ಟಿಕಲ್ ತರಬೇತಿಯ ಅಗತ್ಯವಿಲ್ಲ ಅನ್ನುವ ಮಟ್ಟಿಗೆ ಕಾರ್ಯದಲ್ಲಿ ನೈಪುಣ್ಯತೆ ಹೊಂದಿದ್ದರು. ವೇಣೂರು ಎಸ್‌ಡಿಎಂ ಐಟಿಐನ ತರಬೇತಿ ಅಧಿಕಾರಿಗಳನ್ನು ಮೆಚ್ಚಲೇಬೇಕು.
– ಜಾನ್ ಡಿ ಸೋಜ, ಮಾಲಕರು ಜೋವಿನ್ ವುಡ್ ಆಂಡ್ ಇಂಜಿನಿಯರಿಂಗ್ ವರ್ಕ್ಸ್
ಹಿರಿಯ ವಿದ್ಯಾರ್ಥಿ, ಎಸ್‌ಡಿಎಂ ಐಟಿಐ ವೇಣೂರು

Check Also

ರೈಲಿನಲ್ಲಿ ಯುವಕನನ್ನು ಬಾತ್​ರೂಮ್​ ಒಳಗಡೆ ಎಳೆದೊಯ್ದು ಲಾಕ್​ ಮಾಡಿಕೊಂಡ ಮಂಗಳಮುಖಿ!

ಕೆಲವು ಮಂಗಳಮುಖಿಯರು ರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ. ಯಾರೂ ಕೆಲಸ ಕೊಡುವುದಿಲ್ಲ ಅಂತಾ ಬದುಕಲು ಬೇರೆ ದಾರಿ ಇಲ್ಲದೆ …

Leave a Reply

Your email address will not be published. Required fields are marked *

You cannot copy content of this page.