ತಾಜಾ ಸುದ್ದಿ

BREAKING NEWS: ಭಾರತದ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತ! ಗಂಭೀರ ಗಾಯ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಭ್ ಪಂತ್ ಅವರ ಕಾರು ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ಭಾರಿ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ರೂರ್ಕಿಯ ನರ್ಸನ್ ಗಡಿಯಲ್ಲಿರುವ ಹಮ್ಮದ್ಪುರ್ ಝಾಲ್ ಬಳಿ ಅವರ ಕಾರು ಅಪಘಾತಕ್ಕೀಡಾಯಿತು ಅಂತ ತಿಳಿದು ಬಂದಿದೆ. ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ರಿಷಭ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕಳುಹಿಸಲಾಗಿದೆ ಅಂತ ತಿಳಿದು ಬಂದಿದೆ. ಕಾಲಿಗೆ ಗಾಯ, ಪ್ಲಾಸ್ಟಿಕ್ ಸರ್ಜರಿ : ವೈದ್ಯರ ಪ್ರಕಾರ, ರಿಷಭ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ ಎನ್ನಲಾಗಿದೆ. ಇನ್ನೂ ಘಟನೆ ಮಾಹಿತಿ ಪಡೆದ ನಂತರ, ಪೊಲೀಸ್ …

Read More »

ಪ್ರಧಾನಿ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಹೀರಾ ಬೇನ್ ನಿಧನ: ಇಂದು ಗಾಂಧಿನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ

ಅಹಮದಾಬಾದ್: ಇಲ್ಲಿನ ಯು ಎಸ್ ಮೆಹ್ತಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಹೀರಾ ಬೇನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇಂತಹ ಅವರ ಪಾರ್ಥೀವ ಶರೀರವನ್ನು ಅಹಮದಾಬಾದ್ ನ ಗಾಂಧಿನಗರದಲ್ಲಿರುವಂತ ರುದ್ರ ಭೂಮಿಯಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.   ಈ ಕುರಿತು ಕುಟುಂಬದ ಮೂಲಗಳಿಂದ ಮಾಹಿತಿ ನೀಡಲಾಗಿದ್ದು, ಗುಜರಾತ್ ನ ಅಹಮದಾಬಾದ್ ನಲ್ಲಿರುವಂತ ಗಾಂಧಿನಗರದಲ್ಲಿನ ಸೆಕ್ಟರ್ 30ರ ಸ್ಮಶಾನದಲ್ಲಿ ತಮ್ಮ ತಾಯಿ ಹೀರಾ ಬೇನ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗುವುದಾಗಿ ಹೇಳಿದೆ. ಅಂದಹಾಗೇ ಪುತ್ರ ಪಂಕಜ್ ಮೋದಿಯವರ ಮನೆಯ …

Read More »

ಕೋಟೆಕಾರು ಪಂಚಾಯತ್ ಬಿಲ್ಡಿಂಗ್ ಎದುರುಗಡೆ ಬಸ್ಸು ನಿಲುಗಡೆಗೆ ನಾಗರಿಕರ ಒತ್ತಾಯ

ಕೋಟೆಕಾರು ಬೀರಿ ಉಳ್ಳಾಲ ತಾಲೂಕಿನ ಬೆಳೆಯುತ್ತಿರುವ ಪ್ರದೇಶ ಜನವಸತಿ ಪ್ರದೇಶವಾಗಿರುವ ಇಲ್ಲಿ ಹಲವಾರು ಖ್ಯಾತ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿವೆ. ಮಂಗಳೂರು-ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಪ್ರಮುಖ ಜಂಕ್ಷನ್‌ಗಳಲ್ಲಿ ಕೋಟೆಕಾರು ಬೀರಿ ಜಂಕ್ಷನ್ ಕೂಡಾ ಒಂದು. ಕೋಟೆಕಾರು ಬೀರಿ ಜಂಕ್ಷನ್‌ನಿಂದ ದೇರಳಕಟ್ಟೆಗೆ ಮಾಡೂರು ಮೂಲಕ ರಸ್ತೆ ಸಂಪರ್ಕವಿರುವುದರಿಂದ ಇಲ್ಲಿ ದಿನನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು, ಹಾಗೂ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆ ವಿನ್ಯಾಸದಿಂದಾಗಿ ಕೋಟೆಕಾರು ಬೀರಿ ಜಂಕ್ಷನ್ ಅಪಘಾತ ವಲಯವಾಗಿದೆ. ಇಲ್ಲಿ ಅಪಘಾತದಿಂದಾಗಿ ನೂರಾರು ಜನರು ಮರಣ ಹೊಂದಿರುವುದಲ್ಲದೆ …

Read More »

ಸಾಂತಾ ಕ್ಲಾಸ್ ವೇಷಧರಿಸಿ ಕಾಂತಾರ ಸಿನಿಮಾದಂತೆ ಪಂಜುರ್ಲಿ ದೈವದ ಅಣುಕಿಸುವ ವಿಡಿಯೋ ವೈರಲ್

ಉಡುಪಿ : ಸಾಂತಾ ಕ್ಲಾಸ್ ವೇಷ ಧರಿಸಿ ಕಾಂತಾರ ಸಿನೆಮಾದಲ್ಲಿನ ಪಂಜುರ್ಲಿ ದೈವವನ್ನು ಅಣಿಕಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಕ್ರಿಸ್ಮಸ್ ಹಿನ್ನಲೆಯಲ್ಲಿ ಮನೆಮನೆಗೆ ಸಾಂತಾಕ್ಲಾಸ್ ವೇಷದಲ್ಲಿ ಭೇಟಿ ನೀಡುವ ಸಂದರ್ಭದ ಈ ವಿಡಿಯೋ ಮಾಡಲಾಗಿದ್ದು, ಸಾಂತಾಕ್ಲಾಸ್ ವೇಷಧಾರಿ ಕಾಂತಾರ ಚಲನಚಿತ್ರದಲ್ಲಿನ ದೃಶ್ಯದಂತೆಯೇ ದೈವದ ಅನುಕರಣೆ ಮಾಡಿದ್ದಾನೆ . ಸದ್ಯ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಂತಾಕ್ಲಾಸ್ ವೇಷದಲ್ಲಿ ದೈವ ನಿಂದನೆ ಮಾಡಲಾಗಿದ್ದು, ಕರಾವಳಿಯ ದೈವಾರಾಧನೆ ಕುರಿತ ಯಾವುದೇ ಹಾಸ್ಯ ಸಹಿಸುದಿಲ್ಲಾ, ಇದು ಅಕ್ಷೇಪಾರ್ಹವಾಗಿದ್ದು, …

Read More »

ಮೂರನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಮೃತ್ಯು..!

ಬೆಂಗಳೂರು: ವಿದ್ಯಾರ್ಥಿಯೋರ್ವ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವರದಿಯಾಗಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಪವನ್ (19) ಎಂದು ಗುರುತಿಸಲಾಗಿದೆ. ಈತ ಎಎಸ್ ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಸಂಜೆ ಕಾಲೇಜಿನಿಂದ ಹೆಗ್ಗನಹಳ್ಳಿ ಮನೆಗೆ ಬಂದ ಬಳಿಕ ಈತ ಮನೆಯಲ್ಲಿ ಬ್ಯಾಗ್ ಇಟ್ಟು ಸುಬ್ರಮಣ್ಯನಗರ ಮಿಲ್ಕ್ ಕಾಲೋನಿನ ಬಳಿ ಬಂದಿದ್ದಾನೆ. ನಂತರ ಮಿಲ್ಕ್ ಕಾಲೋನಿ ಮೈದಾನ ಸಮೀಪದ ಕಟ್ಟಡವೊಂದರಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಸುಬ್ರಮಣ್ಯನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ವಿದ್ಯಾರ್ಥಿ …

Read More »

ಲಯನ್ಸ್ ಕ್ಲಬ್ ಮಂಗಳಾದೇವಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ಮಾಜಿ ಯೋಧರಿಗೆ ಸನ್ಮಾನ

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ವಿಜಯ ದಿವಸ್ ಕಾರ್ಯಕ್ರಮ ದ ಅಂಗವಾಗಿ ನಗರದ ಎಪೌಂರಿಯಂ ಕಾಂಪ್ಲೆಕ್ಸ್ ನ ಸಭಾಂಗಣ ದಲ್ಲಿ ದೇಶದ ಮಾಜಿ ಯೋಧರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.ಅವರು ದೇಶದ ಸೈನಿಕರ ಸೇವೆ ಮತ್ತು ಯುವಕ ಯುವತಿಯರಿಗೆ ಅಗ್ನಿಪಥ್ ನ ಬಗ್ಗೆ ವಿಶೇಷ ಮಾಹಿತಿ ಯನ್ನು ನೀಡಿದರು . ನಿವೃತ ಯೋಧರಾದ ಸುಧಾಕರ್ ಕುಲಾಲ್ ಕುಂಪಲ ಇವರು ಕೇಸರಿ ಮಿತ್ರ ವೃಂದ ಹಾಗೂ ಸಂಘ ಶಿಕ್ಷಣ . ಸಮಾಜ ಸೇವೆ ಯಲ್ಲಿ ತೊಡಗಿಸಿ. ಇದೀಗ …

Read More »

ಉಡುಪಿ: ಹೊಸ ವರ್ಷಾಚರಣೆಗೆ ಜಿಲ್ಲೆಯಲ್ಲಿ ಪ್ರತ್ಯೇಕ ಕಾನೂನು ಜಾರಿ

ಉಡುಪಿ: ಹೊಸ ವರ್ಷಾಚರಣೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ. ಕೋವಿಡ್ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆಗಾಗಿ ನಿಯಮ ರೂಪಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಹೆಚ್ಚುವರಿಯಾಗಿ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿದೆ. ಡಿಸೆಂಬರ್ 31ರಿಂದ ಜನವರಿ 1ರ 1 ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಹೊಸ ವರ್ಷದ ಆಚರಣೆ ನಡೆಸುವ ಸಮಯ, ಕಾಠ್ಯಕ್ರಮಗಳ: ಸಂಘಟಕರು ಮತ್ತು ಸಾರ್ವಜನಿಕರು ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿವೆ. ಕೋವಿಡ್ 19ಗೆ ಸಂಬಂಧಪಟ್ಟಂತೆ ನೀಡಲಾದ …

Read More »

ಉಡುಪಿ : ಕಂಠಪೂರ್ತಿ ಕುಡಿದು ಶಾಲೆ ಜಗುಲಿ ಮೇಲೆ ಮಲಗಿದ ಶಿಕ್ಷಕನ ಅಮಾನತು

ಉಡುಪಿ:  ಕೆಲಸದ ಸಮಯದಲ್ಲಿ ಶಾಲಾ ಆವರಣದಲ್ಲಿ ಮದ್ಯಪಾನ ಮಾಡಿ ಮಲಗಿದ್ದ ಪೆರ್ಡೂರು ಸಮೀಪದ ಅಲಂಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ನಾಯಕ್ ಅವರನ್ನು ಅಮಾನತುಗೊಳಿಸಲಾಗಿದೆ. ಬಡ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಮದ್ಯ ಸೇವಿಸಿ ಅಮಲಿನಲ್ಲಿ ತೇಲುತ್ತಾ ಶಾಲೆಯ ಜಗಲಿ ಮೇಲೆ ಸುಖ ನಿದ್ದೆ ಮಾಡಿದ್ದು, ಈ ಘಟನೆಗೆ  ಪೆರ್ಡೂರು ಗ್ರಾ.ಪಂ. ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದರು. ಘಟನೆಯ ಸತ್ಯಾಸತ್ಯತೆಯ ವರದಿ ಪರಿಶೀಲಿಸಿದ ಡಿಡಿಪಿಐ ಗಣಪತಿ ಕೆ. ತಕ್ಷಣದಿಂದಲೇ ಜಾರಿಗೆ …

Read More »

ಉಡುಪಿ: ತಲೆಮರೆಸಿಕೊಂಡಿದ್ದ ಕಮಲಾಕ್ಷಿ ಸಹಕಾರಿ ಸಂಘದ ಅಧ್ಯಕ್ಷ ಅರೆಸ್ಟ್

ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಯಿಂದ 100 ಕೋಟಿಗೂ ಮಿಕ್ಕಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಕ್ಷಿ ಸಹಕಾರಿ ಸಂಘದ ಅಧ್ಯಕ್ಷ ಬಿ.ವಿ.ಲಕ್ಷ್ಮೀನಾರಾಯಣ ಅವರನ್ನು ಉಡುಪಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ಸಮೀಪದ ಮಟಪಾಡಿಯಲ್ಲಿ ಲಕ್ಷ್ಮೀನಾರಾಯಣ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರು ಡಿ.19ರಂದು ಸೊಸೈಟಿಯ ಕಚೇರಿಗೆ ಘೇರಾವ್ ಹಾಕಿದ್ದು, ಗ್ರಾಹಕರಿಗೆ 100 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಹಕಾರಿ ಸಂಘವು ಗ್ರಾಹಕರಿಂದ 100 ಕೋಟಿಗೂ ಹೆಚ್ಚು …

Read More »

ನ್ಯೂ ಇಯರ್‌ ಆಚರಣೆಗೆ ಭರ್ಜರಿ ಸಿದ್ಧತೆ : ಕೋವಿಡ್‌ ಭೀತಿ ನಡುವೆ ಕರಾವಳಿ ತೀರಕ್ಕೆ ವಿದೇಶಿಗರ ದಂಡು

ಕಾರವಾರ: ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಶುರುವಾಗಿದೆ. ಅದರಲ್ಲೂ ಎರಡು ವರ್ಷಗಳ ನಂತರ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವಿದೇಶಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇದರಿಂದ ಕರಾವಳಿ ಭಾಗದ ಪ್ರವಾಸಿತಾಣಗಳಲ್ಲಿ ಕೊರೊನಾ ಭೀತಿ ಎದುರಾಗಿದೆ.ಉತ್ತರ ಕನ್ನಡ ಜಿಲ್ಲೆ ಎಂದಾಕ್ಷಣ ಕಡಲತೀರ, ಪ್ರಕೃತಿ ಸೌಂದರ್ಯ ದೇಶ ವಿದೇಶಿಗರನ್ನು ತನ್ನತ್ತ ಸೆಳೆಯುತ್ತದೆ. ಆದ್ರೆ ಇದೀಗ ಜಿಲ್ಲೆಯ ಜನರಿಗೆ ಪ್ರವಾಸಿಗರೇ ಸಂಕಷ್ಟವಾಗಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಿಗರ ದಂಡು ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಹರಿದುಬರುತ್ತಿದೆ. ಜೊತೆಗೆ ಗೋವಾ ಗಡಿಯಾದ್ದರಿಂದ ವಿದೇಶಿ …

Read More »

You cannot copy content of this page.