ಮಂಗಳೂರು: ಇಂದಿನಿಂದ 3 ದಿನ ರೈಲು ಸಂಚಾರ ಸೇವೆಗಳಲ್ಲಿ ಬದಲಾವಣೆ

ಮಂಗಳೂರು: ಪಾಲಕ್ಕಾಡ್ ವಿಭಾಗದ ವಿವಿಧ ಸ್ಥಳಗಳಲ್ಲಿ ಟ್ರ್ಯಾಕ್ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಎ.9ರಿಂದ 11ರ ತನಕ ರೈಲು ಸಂಚಾರ ಸೇವೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಹರ್ಝತ್ ನಿಝಾಮುದ್ದೀನ್ ಜಂಕ್ಷನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ್ ಸೂಪರ್ ಫಾಸ್ಟ್ ಎಕ್ಸ್‌ ಪ್ರೆಸ್‌(ರೈಲು ಸಂಖ್ಯೆ 12618 ) ಪ್ರಯಾಣವು ಎ.9ರಂದು ಹರ್ಝತ್ ನಿಝಾಮುದ್ದೀನ್ ಜಂಕ್ಷನ್‌ನಿಂದ 50 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ. ಹರ್ಝತ್ ನಿಝಾಮುದ್ದೀನ್ ಜಂಕ್ಷನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ್ ಸೂಪರ್‌ಫಾಸ್ಟ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 12618) ಎಪ್ರಿಲ್ 10ರಂದು ಹರ್ಝತ್ ನಿಝಾಮುದ್ದೀನ್ ಜಂಕ್ಷನ್‌ ನಿಂದ 40 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ. ಮಂಗಳೂರು ಸೆಂಟ್ರಲ್-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪ‌ರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22638 ) ಪ್ರಯಾಣ 10ರಂದು ಮಂಗಳೂರು ಸೆಂಟ್ರಲ್‌ನಿಂದ ಪ್ರಾರಂಭವಾಗಲಿದ್ದು, ಮಾರ್ಗದಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ. ಚಂಡೀಗಢ-ಕೊಚುವೇಲಿ ವೆಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12218 ) ಎ.10ರಂದು ಚಂಡೀಗಢದಿಂದ ಪ್ರಾರಂಭವಾಗಲಿದ್ದು, 20 ನಿಮಿಷ ತಡವಾಗಿ ಹೊರಡಲಿದೆ. ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪ‌ರ್ ಫಾಸ್ಟ್ ಎಕ್ಸ್‌ಪ್ರೆಸ್‌ ( ರೈಲು ಸಂಖ್ಯೆ. 22637) ಎಪ್ರಿಲ್ 11ರಂದು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 40 ನಿಮಿಷ ತಡವಾಗಿ ಸಂಚರಿಸಲಿದೆ. ಮಂಗಳೂರು ಸೆಂಟ್ರಲ್-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ( ರೈಲು ಸಂಖ್ಯೆ. 22638 ) ಎ.11 ರಂದು ಮಂಗಳೂರು ಸೆಂಟ್ರಲ್‌ನಿಂದ 35 ನಿಮಿಷಗಳ ತಡವಾಗಿ ಹೊರಡಲಿದೆ. ತಿರುವನಂತಪುರಂ ಸೆಂಟ್ರಲ್-ಹರ್ಝತ್ ನಿಝಾಮುದ್ದೀನ್ ಜಂಕ್ಷನ್ ರಾಜಧಾನಿ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ 12431) ಎಪ್ರಿಲ್ 11 ಮತ್ತು 12ರಂದು ತಿರುವನಂತಪುರಂ ಸೆಂಟ್ರಲ್‌ನಿಂದ 30 ನಿಮಿಷಗಳ ತಡವಾಗಿ ಹೊರಡಲಿದೆ. ಹರ್ಝತ್ ನಿಝಾಮುದ್ದೀನ್ ಜಂಕ್ಷನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ್ ಸೂಪರ್‌ಫಾಸ್ಟ್ ಎಕ್ಸ್‌ ಪ್ರೆಸ್ (ರೈಲು ಸಂಖ್ಯೆ 12618 ) ಎ.11ರಂದು ಹರ್ಝತ್ ನಿಝಾಮುದ್ದೀನ್ ಜಂಕ್ಷನ್‌ನಿಂದ 40 ನಿಮಿಷ ತಡವಾಗಲಿದೆ. ಮಂಗಳೂರು ಸೆಂಟ್ರಲ್-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22638 ) ಎ.12ರಂದು ಮಂಗಳೂರು ಸೆಂಟ್ರಲ್‌ನಿಂದ 20 ನಿಮಿಷಗಳ ತಡವಾಗಿ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.