ತಾಜಾ ಸುದ್ದಿ

ಜ್ಯೋತಿಷಿ ಮಾತು ನಂಬಿ ನಿಧಿ ಆಸೆಗಾಗಿ ಮನೆಯೊಳಗೆ ಗುಂಡಿ ತೋಡಿದ ಗೃಹಿಣಿ

ಚಾಮರಾಜನಗರ: ನಿಧಿ ಆಸೆಗಾಗಿ ಜ್ಯೋತಿಷಿಯೊಬ್ಬನ ಮಾತು ಕೇಳಿ ಮಹಿಳೆಯೊಬ್ಬರು ಸ್ವಂತ ಮನೆಯಲ್ಲೇ ಗುಂಡಿ ತೋಡಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಹನೂರು ತಾಲೂಕಿನ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯೊಳಗೆ 20 ಅಡಿ ಆಳದ ಗುಂಡಿ ತೋಡಲಾಗಿದೆ. ತಮ್ಮ ಮನೆಯ ವಾಸ್ತು ಸರಿ ಇಲ್ಲ ಎಂದು ಶಾಸ್ತ್ರ ಕೇಳಲು ಹೋಗಿದ್ದ ಭಾಗ್ಯ ಎಂಬ ಗೃಹಿಣಿಗೆ ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ನಂಬಿಸಿದ್ದ ಜ್ಯೋತಿಷಿ, ನಿಧಿ ಸಿಗಲು ಮನೆಯಲ್ಲಿ ವಿಶೇಷ ಪೂಜೆ ಮಾಡಬೇಕೆಂದು ಹೇಳಿ ಮಹಿಳೆಯಿಂದ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದನು. …

Read More »

ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತ್ಯು..!!

ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದದಲ್ಲಿ ವರದಿಯಾಗಿದೆ.ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ರಜನೀಶ್ (18) ಮೃತಪಟ್ಟ ಯುವಕ. ರಜನೀಶ ಕಳೆದ ಹಲವು ಸಮಯದಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, 3 ವಾರದ ಹಿಂದೆ ಉಡುಪಿಯ ಅಜ್ಜರಕಾಡಿನ ಜಿಲ್ಲಾ ಸರಕಾರಿ ಆಸ್ವತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಮರಳಿದ್ದರು. ಇದಾದ 10 ದಿನಗಳ ನಂತರ ಶಸ್ತ್ರ ಚಿಕಿತ್ಸೆಯ ಹೊಲಿಗೆ ತೆಗೆಯಿಸಿ, ವಾಂತಿ ಹಾಗೂ ಜ್ವರಕ್ಕೆ ಔಷಧಿ ಪಡೆದುಕೊಂಡು ಬಂದಿದ್ದರು ಎನ್ನಲಾಗಿದೆ. ಆ.20ರಂದು ಭಾನುವಾರ ಬೆಳಗ್ಗೆ ಏಕಾಏಕಿ ವಾಂತಿ ಜ್ವರ ಉಲ್ಬಣಗೊಂಡ …

Read More »

ಚಂದ್ರಯಾನ – 3 : ಈ 4 ಹಂತಗಳನ್ನು ಪೂರೈಸಿದರೆ ವಿಕ್ರಮ್ ಸಾಫ್ಟ್​ ಲ್ಯಾಂಡಿಂಗ್ ಪಿಕ್ಸ್

ಚಂದ್ರಯಾನ – 3 ಯಶಸ್ಸಿಗೆ ಇಡೀ ದೇಶವೇ ಕಾಯುತ್ತಿದೆ. ಇಂದು ಸಂಜೆ ಚಂದ್ರಯಾನ–3 ಕೊನೆಯ 15 ನಿಮಿಷ ಭಾರೀ ಕುತೂಹಲದಿಂದ ಕೂಡಿದೆ. ಕೊನೆಯ 15 ನಿಮಿಷಗಳಲ್ಲಿ ನಾಲ್ಕು ಹಂತಗಳನ್ನು ಇಸ್ರೋ ಪೂರ್ಣಗೊಳಿಸಲಿದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ನ ನಾಲ್ಕು ಹಂತಗಳು ಹೀಗಿವೆ 1- ರಫ್ ಬ್ರೇಕಿಂಗ್ ಹಂತ 2- ಅಟಿಟ್ಯೂಡ್ ಹೋಲ್ಡ್ ಹಂತ 3- ಫೈನ್ ಬ್ರೇಕಿಂಗ್ ಹಂತ 4- ಟರ್ನಿನಲ್ ಡೀಸೆಂಟ್ ಹಂತ ರಫ್ ಬ್ರೇಕಿಂಗ್ ಹಂತದ ವಿವರ ಲ್ಯಾಂಡರ್ ಸ್ಪೀಡ್, ಎತ್ತರ ಇಳಿಕೆ ನಿಯೋಜಿತ ಸ್ಥಳದಲ್ಲಿ ಲ್ಯಾಂಡಿಂಗ್ ಎತ್ತರವನ್ನು 30 ಕಿಮೀ …

Read More »

ಆ.25ರಿಂದ ಧರ್ಮಸ್ಥಳದಿಂದ ನಾರಾವಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ

ಬೆಳ್ತಂಗಡಿ : ಆಗಸ್ಟ್ 25ರಿಂದ ಧರ್ಮಸ್ಥಳದಿಂದ ನಾರಾವಿಗೆ ಬಸ್ ಸಂಚಾರ ಆರಂಭವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ‌ ಮಾಜಿ ಶಾಸಕ ಕೆ.ವಸಂತ ಬಂಗೇರ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರಕಾರದ ಸಾರಿಗೆ ಸಚಿವರಿಗೆ ಪತ್ರ ಬರೆದು ಬಸ್ ಸಂಚಾರವನ್ನು ಆರಂಭಿಸುವಂತೆ ವಿನಂತಿಸಿದ್ದರು. ಇದೀಗ ಕೆಎಸ್‌ಆರ್‌ಟಿಸಿ ಹೊಸ ಬಸ್ ಸಂಚಾರವನ್ನು ಆರಂಭಿಸಲು ಮುಂದಾಗಿದೆ. ಪ್ರತಿದಿನ ಬೆಳಗ್ಗೆ 6:35ಕ್ಕೆ ಧರ್ಮಸ್ಥಳದಿಂದ ಹೊರಡುವ ಬಸ್ ಉಜಿರೆ-ಬೆಳ್ತಂಗಡಿ- ಗುರುವಾಯನಕೆರೆ ಮಾರ್ಗವಾಗಿ 7:40ಕ್ಕೆ ನಾರಾವಿ ತಲುಪಿ ಅಲ್ಲಿಂದ 7:45 ಕ್ಕೆ ಹೊರಟು 8:55 ಕ್ಕೆ …

Read More »

ಕರಾವಳಿಯ ಮೀನುಗಾರರಿಗೆ ಆರಂಭದಲ್ಲೇ ವಿಘ್ನ- ಅರಬ್ಬಿ ಸಮುದ್ರದಲ್ಲಿ ತೂಫಾನ್ ಆತಂಕ..!

ಉತ್ತರ ಕನ್ನಡ : ಕೈಕೊಟ್ಟ ಮಳೆಯಿಂದ ಕರಾವಳಿ ದಿನೇ ದಿನೆ ಬಿಸಿ ಕಾವಲಿಯಂತಾಗುತ್ತಿದ್ದು ಕೃಷಿಕರನ್ನು, ಜನತೆಯನ್ನು ಈಗಾಗಲೇ ಚಿಂತೆಗೀಡುಮಾಡಿದೆ. ಎಕಾಏಕಿ ಮಾಯವಾದ ಮಳೆಯೇ ಮಧ್ಯೆ ಇದೀಗ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ಬಿರುಗಾಳಿ ಎದ್ದಿದ್ದು ಈ ಬಾರಿಯ ಮೀನುಗಾರಿಕಾ ಋತು ಆರಂಭವಾಗುತ್ತಿರುವ ಸಂದರ್ಭದಲ್ಲೇ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಮೀನುಗಾರರನ್ನು ಈ ಅನಿರೀಕ್ಷಿತ ವಿದ್ಯಮಾನ ಆತಂಕಕ್ಕೀಡು ಮಾಡಿದೆ. ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಭಾರಿ ನಿರೀಕ್ಷೆಗಳೊಂದಿಗೆ ಕಡಲಿಗೆ ಇಳಿದ ಬೋಟುಗಳು ಇದೀಗ ಅರ್ಧದಲ್ಲೇ ಬಂದರಿಗೆ ಮರಳತೊಡಗಿವೆ. ಆಳಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿವೆ. ಬಿರುಗಾಳಿ, ಮಳೆಯಿಂದಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗದ …

Read More »

ಬೆಳ್ತಂಗಡಿ : ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ

ಬೆಳ್ತಂಗಡಿ : ವಿವಾಹಿತ ಮಹಿಳೆಯೊಬ್ಬರು ರಾತ್ರಿಯ ವೇಳೆ ಬಚ್ಚಲು ಮನೆಗೆ ಸ್ನಾನಕ್ಕೆಂದು ಹೋದಾಗ ನೆರೆಮನೆಯ ಯುವಕನೊಬ್ಬ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದ ಘಟನೆ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪಕ್ಕದ ಮನೆಯ ನಿವಾಸಿ ಮನೋಜ್ ಎಂಬಾತನೇ ಅನುಚಿತವಾಗಿ ವರ್ತಿಸಿದ್ದು. ಮಹಿಳೆ ಬೊಬ್ಬೆ ಹೊಡೆದಿದ್ದು ಮನೆಯವರು ಹೊರಬರುವ ವೇಳೆಗೆ ಆರೋಪಿ ಓಡಿ ತಪ್ಪಿಸಿಕೊಂಡಿದ್ದಾನೆ. ಆರೋಪಿ ವಿರುದ್ದ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 448,354,509ಐಪಿಸಿ ಯಂತೆ  ಪ್ರಕರಣ ದಾಖಲಾಗಿದೆ.

Read More »

ಉಡುಪಿ: ಮಾನವ ಕಳ್ಳ ಸಾಗಾಣಿಕೆ ಬಗ್ಗೆ ನಿಗಾ – ಕರಾವಳಿ ಕಾವಲು ಪಡೆ ಎಸ್ಪಿ ಅಬ್ದುಲ್ ಅಹದ್

ಉಡುಪಿ: ಮೀನುಗಾರರ ಉತ್ತಮ ಸಹಕಾರದಿಂದ ಸಮುದ್ರದ ಮಧ್ಯೆ ಉದ್ಭವಿಸಿರುವ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಿದೆ.ಈತನಕ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಕರಾವಳಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಆದರೂ ಆ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಜತೋತ್ಸವ ಸಮಿತಿ ಆಶ್ರಯದಲ್ಲಿ ಪತ್ರಕರ್ತರೊಂದಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕರಾವಳಿ ಪೊಲೀಸ್ ಪಡೆಯಲ್ಲಿ ಟೀಂ ವರ್ಕ್ ಮೂಲಕ ಕೆಲಸ ಮಾಡುತ್ತಿದ್ದು ನಮ್ಮ ಎಲ್ಲ ಸಿಬ್ಬಂದಿ ಮತ್ತು ಮೀನುಗಾರರ …

Read More »

ವಿಟ್ಲ: ವಿಧ್ಯಾರ್ಥಿ ನಿಲಯದಿಂದ ಇಬ್ಬರು ವಿಧ್ಯಾರ್ಥಿಗಳು ನಾಪತ್ತೆ..!

ವಿಟ್ಲ: ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯದಿಂದ ಇಬ್ಬರು ವಿಧ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವಿಧ್ಯಾರ್ಥಿಗಳನ್ನು ದೀಕ್ಷೀತ್(15) ಮತ್ತು ಗಗನ್(14) ಎಂದು ಗುರುತಿಸಲಾಗಿದೆ. ಇವರಿಬ್ಬರು ಅಗಸ್ಟ್ 21ರಂದು ಬೆಳಗ್ಗೆ ಶಾಲೆಗೆಂದು ವಿದ್ಯಾರ್ಥಿ ನಿಲಯದಿಂದ ತೆರಳಿದವರು ಶಾಲೆಗೂ ಹೋಗದೇ ವಾಪಸ್ ವಿದ್ಯಾರ್ಥಿ ನಿಲಯಕ್ಕೂ ಬಾರದೆ ನಾಪತ್ತೆಯಾಗಿದ್ದಾರೆ. ಸಂಜೆ ಇದು ಬೆಳಕಿಗೆ ಬಂದಿದೆ ಎಂದು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಪ್ರಮೀಳಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಕಾಣೆಯಾದ ದೀಕ್ಷೀತ್ ಹಾಗೂ ಗಗನ್ ತಮ್ಮ ಮನೆಗೂ ತೆರಳಲಿಲ್ಲ ಎಂದು ತಿಳಿದುಬಂದಿದೆ. …

Read More »

ಕುಂದಾಪುರದಲ್ಲಿ 640 ವರ್ಷಗಳ ಹಿಂದಿನ ಮೈಲಾರ ವಿಗ್ರಹ ಪತ್ತೆ

ಕುಂದಾಪುರ: ಇಲ್ಲಿನ ಬಸ್ರೂರಿನಲ್ಲಿ ಮೈಲಾರ ದೇವರ ಎರಡು ವಿಗ್ರಹಗಳು ಒಂದೆ ಸ್ಥಳದಲ್ಲಿ ಪತ್ತೆಯಾಗಿದೆ. ಈ ಹಿಂದೆ ದೊರೆತ ಕ್ರಿ.ಶ.1383ರ ಕಾಲಮಾನದ್ದೆನ್ನಲಾದ ಶಾಸನದಂತೆ ಈಗ ದೊರೆತ ಮೈಲಾರ ದೇವರ ವಿಗ್ರಹಗಳು ಸುಮಾರು 640 ವರ್ಷಗಳ ಹಿಂದಿನದ್ದು ಎಂದು ಅಂದಾಜಿಸಲಾಗಿದೆ. ಮೈಲಾರ ದೇವರ ಆರಾಧನೆ ಕರಾವಳಿ ಭಾಗದಲ್ಲಿ ವಿರಳವಾಗಿ ಕಂಡು ಬರುತ್ತದೆ. ಮಂಗಳೂರು ಜಪ್ಪು ಬೊಪ್ಪಾಲ್ ನಲ್ಲಿ ದೊರೆತ ವಿಜಯನಗರ ಶಾಸನದ ಉಲ್ಲೇಖದಂತೆ ಬಡಗ ಮೈಲಾರ ದೇವರಿಗೆ ಅಂದರೆ ಬಡಗ ಭಾಗದ ಮೈಲಾರ ದೇವರು ಇರುವ ಕುರುಹನ್ನು ಶಾಸನದಲ್ಲಿ ನೀಡಿದಂತಾಗಿದೆ. ವಿಗ್ರಹ ಪತ್ತೆಯಾದ ಬಸ್ರೂರು ಬಡಗ ಭಾಗದ(ಉತ್ತರ …

Read More »

ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ: 298 ಮಂದಿಯ ಡಿಎಲ್ ರದ್ದು

ಮಂಗಳೂರು: ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಆ. 6ರಿಂದ 20ರವರೆಗೆ ಸಂಚಾರ ಪೊಲೀಸರು ನಡೆಸಿದ ತಪಾಸಣೆಯ ಸಂದರ್ಭ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ 298 ಮಂದಿ ಚಾಲಕ-ಸವಾರರ ಚಾಲನಾ ಪರವಾನಿಗೆ (ಡಿಎಲ್) ರದ್ದತಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಶಿಫಾರಸು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಮಿತ ವೇಗ ಮತ್ತು ನಿರ್ಲಕ್ಷ್ಯದ 71, ಮದ್ಯಪಾನಗೈದ 20, ಗೂಡ್ಸ್ ವಾಹನಗಳಲ್ಲಿ ಜನರ ಸಾಗಾಟ 42, ವಾಹನ ಸಂಚಾರ/ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿರುವ 4, ಕೆಂಪು ದೀಪ …

Read More »

You cannot copy content of this page.