ತಾಜಾ ಸುದ್ದಿ

ಪುತ್ತೂರು: ಅಡಿಕೆ ಕೊಯ್ಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಪುತ್ತೂರು: ಅಡಿಕೆ ಕೊಯ್ಯುವ ವೇಳೆ ಮರದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಬೆಟ್ಟಂಪಾಡಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ನಿಡ್ನಳ್ಳಿ ಗ್ರಾಮದ ತಂಬುತ್ತಡ್ಕ ನಿವಾಸಿ ಸಯ್ಯದ್ (45) ಎಂದು ಗುರುತಿಸಲಾಗಿದೆ. ಬೆಟ್ಟಂಪಾಡಿ ಸಮೀಪದ ಕೃಷಿಕರೋರ್ವರ ಮನೆಗೆ ಸಯ್ಯದ್ ಅಡಿಕೆ ಕೊಯ್ಯಲು ತೆರಳಿದ್ದರು. ಈ ವೇಳೆ ಅಡಿಕೆ ಕೊಯ್ಯುವಾಗ ಕಾಲು ಜಾರಿ ಮರದಿಂದ ಕೆಳಗೆ ಬಿದ್ದ ಇವರನ್ನು, ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ತಲುಪುವ ವೇಳೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Read More »

ರಾಜ್ಯದ ಜನರೇ ಗಮನಿಸಿ: ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ ಯೋಜನೆಯ ಹೈಲೆಟ್ಸ್ ಇಲ್ಲಿದೆ

ಬೆಂಗಳೂರು : ರಾಜ್ಯ ಸರ್ಕಾರವು ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳನ್ನು ಹೊಸದಾಗಿ ಬಿಡುಗಡೆ ಮಾಡಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳನ್ನು, ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಎಂದು ಮರುನಾಮಕರಣ ಮಾಡ ಮಾಡಲಾಗಿದ್ದು, ಇದನ್ನು ಸಿಎಂ ಸಿದ್ದರಾಮಯ್ಯ ಅವರು ಮೊನ್ನೆ ಬಿಡುಗಡೆ ಮಾಡಿದರು.   ಯೋಜನೆಯ ಹೈಲೆಟ್ಸ್ * ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್ ಗೆ ನೂತನ ಹೆಲ್ತ್ ಕಾರ್ಡ್ ಗಳನ್ನ ಸಂಯೋಜನೆಗೊಳಿಸಲಾಗಿದ್ದು, …

Read More »

ಸುರತ್ಕಲ್ : ನಾಪತ್ತೆಯಾಗಿದ್ದ ಭಿನ್ನಕೋಮಿನ ಜೋಡಿ ವಿವಾಹ?

ಸುರತ್ಕಲ್:  ನಾಪತ್ತೆಯಾಗಿದ್ದ ಭಿನ್ನಕೋಮಿನ ಜೋಡಿ ವಿವಾಹವಾಗಿದ್ದಾರೆ ಎನ್ನುವ ಪೋಟೋ ವೈರಲ್ ಆಗಿದ್ದು ಇದರ ನಿಖರತೆ ಇನ್ನಷ್ಟೇ ತಿಳಿದುಬರಬೇಕಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಬ್ಲಾಕ್ ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಹಾಗೂ 3ನೇ ಬ್ಲಾಕ್ ಆಶ್ರಯ ಕಾಲೋನಿ ನಿವಾಸಿ ಆಯೇಷಾ (19) ಡಿ.1 ರಂದು ನಾಪತ್ತೆಯಾಗಿದ್ದರು. ಇವರಿಬ್ಬರು ವಿವಾಹವಾಗಿದ್ದಾರೆ ಎನ್ನುವ ಪೋಟೋವನ್ನು ಅವರ ಮಿತ್ರರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಅಯೇಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಿಸಿಕೊಂಡಿದ್ದಾರೆ. ನಾಪತ್ತೆಯಾದ ದಿನ ಆಯೇಷಾ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. …

Read More »

ಬಂಟ್ವಾಳ: ವ್ಯಕ್ತಿ ಹಾಗೂ ಆತನ ಸ್ನೇಹಿತನಿಗೆ ತಂಡದಿಂದ ರಾಡಿನಿಂದ ಹಲ್ಲೆ..!

ಬಂಟ್ವಾಳ: ಪ್ರಕರಣವೊಂದರ ಮಾತುಕತೆಯ ಬಗ್ಗೆ ತಕರಾರು ಎತ್ತಿ ವ್ಯಕ್ತಿಯೊಬ್ಬರಿಗೆ ಹಾಗೂ ಆತನ ಸ್ನೇಹಿತನಿಗೆ ತಂಡವೊಂದು ಪಂಚ್ ಹಾಗೂ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ ಪ್ರಕರಣ ಕಾವಳಮುಡೂರು ಗ್ರಾಮದ ಕಾವಳಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ. ಕಾವಳಪಡೂರು ನಿವಾಸಿ ಮಹಮ್ಮದ್ ಶಮೀಮ್ (30) ಅವರು ಗುರುವಾರ ಬೆಳಿಗ್ಗೆ ತನ್ನ ನೆರೆಕರೆಯವರಾದ ಮಹಮ್ಮದ್ ಜುಬೈರ್, ಮಹಮ್ಮದ್ ಹನೀಫ್, ಮಹಮ್ಮದ್ ಫಯಾಜ್, ಮಹಮ್ಮದ್ ಶರೀಫ್ ಎಂಬವರೊಂದಿಗೆ ಕಾವಳಮುಡೂರು ಗ್ರಾಮದ ಕಾವಳಕಟ್ಟೆ ಬಸ್ ನಿಲ್ದಾಣದ ಬಳಿಯಿದ್ದಾಗ, ಆರೋಪಿಗಳಾದ ಪರಿಚಯಸ್ಥ ಮಹಮ್ಮದ್ ಫಜೀಮ್, ಮಹಮ್ಮದ್ ಇಮ್ರಾನ್, ಇರ್ಪಾನ್ ಬೊಂಬಿಕ್ಕು, ಹಂಝ ಆಲಂಗಾಲು, …

Read More »

ಶಾಲೆಗೆ ಹೋಗಲು ತಾಯಿ ಬೈದರು ಎಂದು ಚಲಿಸುವ ರೈಲಿನ ಮುಂದೆ ಹಾರಿ ಬಾಲಕಿ ಆತ್ಮಹತ್ಯೆ..!

ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಾಯಿ ತನ್ನನ್ನು ನಿಂದಿಸಿದಳು ಎಂದು ಮನನೊಂದು ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಆತ್ಯಹತ್ಯೆಗೆ ಶರಣಾದ 13 ವರ್ಷ ವಯಸ್ಸಿನ ಬಾಲಕಿಯನ್ನು ಖುಷಿ ಶರ್ಮಾ ಎಂದು ಗುರುತಿಸಲಾಗಿದ್ದು, ಆಕೆಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಇದರಿಂದ ಕುಪಿತಗೊಂಡ ಆಕೆಯ ತಾಯಿ ಮಗಳು ಶಾಲೆಗೆ ಹೋಗುವಂತೆ ಒತ್ತಾಯಿಸಿ, ಗದರಿಸಿದ್ದಾರೆ. ತದನಂತರ ಕಪಾಳಮೋಕ್ಷ ಕೂಡ ಮಾಡಿದ್ದಾರೆ. ಇದರಿಂದ ತೀವ್ರ ಮನನೊಂದ ಶರ್ಮಾ ಅವರ ಪುತ್ರಿ ಖುಷಿ, ಶಾಲೆಗೆ ಹೋಗುವ ಬದಲು …

Read More »

BIG NEWS: ವಿಧಾನಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ‘ಸಿಎಂ ಆಸನ’ದ ಮೇಲೆ ಕುಳಿತು ಮಹಾ ಯಡವಟ್ಟು

ಬೆಳಗಾವಿ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡೋದಕ್ಕೆ ವಿಧಾನಸಭೆಯ ಸದನಕ್ಕೆ ತೆರಳಿದ್ದಂತ ಮೂಡುಗೆರೆ ಶಾಸಕಿ ನಯನಾ ಮೋಟಮ್ಮ ಮಹಾ ಯಡವಟ್ಟು ಮಾಡಿದ್ದಾರೆ. ಅದೇ ಮುಖ್ಯಮಂತ್ರಿಗಾಗಿ ಇರುವಂತ ಆಸನದಲ್ಲಿ ಕುಳಿತಿದ್ದು ಆಗಿದೆ. ಹೌದು ಅಚಾನಕ್ಕಾಗಿ ಸಿಎಂ ಆಸನದ ಮೇಲೆ ಕುಳಿತು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಹಾ ಯಡವಟ್ಟು ಮಾಡಿದ್ದಾರೆ. ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಗಾಗಿ ತೆರಳಿದ್ದಾಗ ಈ ಯಡವಟ್ಟು ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಮಾತನಾಡುತ್ತಿದ್ದ ವೇಳೆಯಲ್ಲಿ ಅಚಾನಕ್ ಆಗಿ ಸಿಎಂ ಆಸನದ ಮೇಲೆ ಕುಳಿತುಕೊಂಡಿದ್ದಾರೆ. ಕೂಡಲೇ ಇದನ್ನ …

Read More »

ಮುಲ್ಕಿ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಲಾರಿ- ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸರೆ

ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೆದ್ದಾರಿಯ ಡಿವೈಡರ್ ಮೇಲೆ ಹತ್ತಿ ಪಾದಚಾರಿ ಮಾರ್ಗದ ಪಕ್ಕದಲ್ಲಿನ ವಾಹನಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಮೂವರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಿಂದ ಸ್ಕೂಟರ್ ಸವಾರ ಉತ್ತರ ಕರ್ನಾಟಕ ಮೂಲದ ಬಪ್ಪನಾಡು ಬಳಿ ರೆಸಿಡೆನ್ಸಿಯೊಂದರ ವಾಚ್ ಮ್ಯಾನ್ ಸಂಗಪ್ಪ(57) ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದಂತೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗೀತಾ …

Read More »

ಬಂಟ್ವಾಳ : ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ ಸವಾರ ಸಾವು

ಬಂಟ್ವಾಳ : ಸ್ಕೂಟರ್‌ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪಲ್ಲಮಜಲು ಕ್ರಾಸ್ ಎಂಬಲ್ಲಿ ನಡೆದಿದೆ. ಡಿಸೆಂಬರ್ 6 ರಂದು ಸಂಜೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪಲ್ಲಮಜಲು ಕ್ರಾಸ್ ಎಂಬಲ್ಲಿ ಸ್ಕೂಟರ್‌ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್‌ ಸವಾರ ನಾರಾಯಣರವರು ಸ್ಕೂಟರ್‌ ಸಮೇತ ರಸ್ತೆಗೆ ಎಸೆಯಲ್ಪಟು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುವನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿದಾಗ …

Read More »

ಬಂಟ್ವಾಳ : ಗೇಟ್‌ ಮುರಿದು ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಯತ್ನಗೈದ ತಂಡ

ಬಂಟ್ವಾಳ: ಮನೆಯಂಗಳಕ್ಕೆ ಪ್ರವೇಶಿಸಿದ ನಾಲೈದು ಮಂದಿಯ ಗುಂಪು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಗಾಂದೋಡಿ ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ. ಸುಮ್ಮಿ ಯಾನೆ ಸುಮಿತ್ ಆಳ್ವ ಮತ್ತು ಸಹಚರರು ಸೇರಿ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಮಂಗಳೂರು ತಾಲೂಕು ಬಳ್ಳಾಲಭಾಗ್ ಶಿರ್ವ ವಿಸ್ತಾ ಅಪಾರ್ಟ್ ಮೆಂಟ್ ನಿವಾಸಿ ಎಂ ಚಂದ್ರ ಶೆಟ್ಟಿ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ತನ್ನ ಹೆಂಡತಿಗೆ ಸಂಬಂದಿಸಿದ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗಾಂದೋಡಿ …

Read More »

ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಶವ ಪತ್ತೆ : ಮುಖಕ್ಕೆ ಪ್ಲಾಸ್ಟಿಕ್ ಬಿಗಿದು, ಕೈ ಕಟ್ಟಿದ ಸ್ಥಿತಿಯಲ್ಲಿ ಪತ್ತೆ

ಮೈಸೂರಿನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು, ಮಾನಸಗಂಗೋತ್ರಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನಲ್ಲಿ ಈ ಘಟನೆ ಸಂಭವಿಸಿದೆ. ಹೈದರಾಬಾದ್ ಮೂಲದ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಅಕ್ಷಜ್ (18) ಶವ ಪತ್ತೆಯಾಗಿದೆ.   ಮೃತ ಅಕ್ಷಜ್ ಮುಖಕ್ಕೆ ಪ್ಲಾಸ್ಟಿಕ್ ಕವರ್ ಬಿಗಿಯಲಾಗಿದೆ. ಕೈಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಅಕ್ಷಯ ಶವ ಪತ್ತೆಯಾಗಿದೆ. ಮೃತನನ್ನು ಹೈದರಾಬಾದ್ ಮೂಲದ ಪ್ರಥಮ ಬಿ ಎಸ್ ಸಿ ವಿದ್ಯಾರ್ಥಿ ಅಕ್ಷಜ್ (18) ಎಂದು ಹೇಳಲಾಗುತ್ತಿದೆ. ಮುಖಕ್ಕೆ ಪ್ಲಾಸ್ಟಿಕ್ ಬಿಗಿಯಲಾಗಿದ್ದು ಹಾಗೂ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ …

Read More »

You cannot copy content of this page.