

ಬಂಟ್ವಾಳ: ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಮೆನಯಿಂದ ಹೊರಟ ಫರಂಗಿಪೇಟೆಯ ಪಿಯು ವಿದ್ಯಾರ್ಥಿ ದಿಗಂತ್ ನಾಪತ್ತೆಯಾದ ಬಗ್ಗೆ ಫೆ.25 ರಂದು ಬೆಳಕಿಗೆ ಬಂದಿತ್ತು. ಇಷ್ಟು ದಿನಗಳಾದರೂ ಯಾವುದೇ ಸುಳಿವು ಸಿಗದಿರುವುದು ಎಲ್ಲೆಡೆ ಆತಂಕ ಸೃಷ್ಟಿಯಾಗಿದ್ದು, ಈ ಬಗ್ಗೆ ವಿದ್ಯಾರ್ಥಿನಿ ನಾಪತ್ತೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಳೆದ ಶನಿವಾರ ಬಂದ್‌ಗೆ ಕರೆ ನೀಡಿದ್ದವು.
ನಾಪತ್ತೆಯಾದ ದಿಗಂತ್ ಹುಡುಕಾಟಕ್ಕೆ 7 ಪೊಲೀಸ್ ತಂಡ ರಚನೆ ಮಾಡಲಾಗಿದ್ದು, ಈ ಪ್ರಕರಣದ ಬಗ್ಗೆ ಶೂನ್ಯ ವೇಳೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಪ್ರಸ್ತಾಪ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಇದೀಗ ಫರಂಗಿಪೇಟೆಯಿಂದ ನಾಪತ್ತೆಯಾಗಿರುವ ದಿಗಂತ್ ಪತ್ತೆಗಾಗಿ ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ. ಹೈಕೋರ್ಟ್‌ನ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ವಕೀಲರಾದ ಸಚಿನ್ ನಾಯಕ್, ಅಕ್ಷಯ್ ಆಳ್ವ ಹಾಗೂ ಅಖಿಲೇಶ್ವರಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ.
ನಾಪತ್ತೆಯಾಗಿರುವ ದಿಗಂತ್ ತಂದೆಯ ಪರವಾಗಿ ಈ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದ್ದು, ಪೊಲೀಸ್ ತನಿಖೆ ಸರಿಯಾಗಿ ನಡೆಯದ ಬಗ್ಗೆ ವಿಭಾಗೀಯ ಪೀಠದ ಗಮನಕ್ಕೆ ತರಲಾಗಿದೆ.