ಮಂಗಳೂರು: ಮೋತಿ ಮಹಲ್ ಹೋಟೆಲ್ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿ ಮೃತದೇಹ ಪತ್ತೆ 

ಮಂಗಳೂರು: ನಗರದ ಪ್ರತಿಷ್ಠಿತ ಹೊಟೇಲ್ ನ ಈಜು ಕೊಳದಲ್ಲಿ ಮೃತ ದೇಹ ಪತ್ತೆಯಾಗಿದೆ. ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ‌ ಬ್ಯಾಂಕ್‌ ಅಧಿಕಾರಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿ ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್ ನಾಯರ್ ಎಂದು ತಿಳಿದುಬಂದಿದೆ.

ಯೂನಿಯನ್ ಬ್ಯಾಂಕ್ ಅಧಿಕಾರಿಯಾದ ಗೋಪು ಆರ್ ನಾಯರ್ ಅವರು ನಿನ್ನೆ ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು. ಬ್ಯಾಂಕ್ ಅಧಿಕಾರಿ ನಿನ್ನೆ ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಹೋಗಿದ್ದರು. ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Check Also

ನಾಪತ್ತೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಶವವಾಗಿ ಪತ್ತೆ..!!!!

ಶಿವಮೊಗ್ಗ: ಆಗುಂಬೆಯಲ್ಲಿ ನಾಪತ್ತೆ ಆಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ತೀರ್ಥಹಳ್ಳಿ ತಾಲೂಕಿನ ಹಸಿಮನೆ ಗ್ರಾಮದ ಪೂಜಾ AK (24) ಅವರ …

Leave a Reply

Your email address will not be published. Required fields are marked *

You cannot copy content of this page.