ಅರೆಸ್ಟ್ ಮಾಡಿದ್ರೆ ಮಾಡಿ, ಮಂಗಳೂರು ವಿ.ವಿಯಲ್ಲಿ ಗಣೇಶೋತ್ಸವ ಮಾಡಿಯೇ ಸಿದ್ಧ : ಡಾ. ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು ವಿ.ವಿ ಮಂಗಳ ಸಭಾಂಗಣದಲ್ಲಿ  ಸೆಪ್ಟೆಂಬರ್ 19 ರಂದು ಗಣೇಶೋತ್ಸವ ಮಾಡಿಯೇ ಸಿದ್ಧ, ತಾಕತ್ ಇದ್ರೆ ನನ್ನನ್ನ ಅರೆಸ್ಟ್ ಮಾಡಿ ಎಂದು ಆರ್ ಎಸ್ ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತ ಸದಸ್ಯ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಗುಡುಗಿದ್ದಾರೆ.

ಅವರು ಅಸೈಗೋಳಿ ಮೈದಾನದಲ್ಲಿ ಹಮ್ಮಿಕೊಂಡ ಮಂಗಳೂರು ವಿ.ವಿ ಗಣೇಶೋತ್ಸವಕ್ಕೆ ವಿರೋಧ, ಹಾಗೂ ಸ್ಟಾಲಿನ್ ಹೇಳಿಕೆ ಖಂಡಿಸಿ ಸಂಘಪರಿವಾರ ಹಮ್ಮಿಕೊಂಡ ಸಾಮೂಹಿಕ ಭಜನಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹೊರಗಿನವರು ಅಂದರೆ ಯಾರು? ನಾವೆಲ್ಲರೂ ಈ ದೇಶದಲ್ಲಿ ಇರುವವರೇ.ನಾವೆಲ್ಲರೂ ಗಣೇಶನ ಭಕ್ತರೇ ಅಲ್ವಾ? ಹೊರಗಿನವರು ಅಂದ್ರೆ ಯಾರು?ಒಳಗಿರೋರು ಅಂದ್ರೆ ವಿದ್ಯಾರ್ಥಿಗಳು, ಅವರು ಬೇರೆ ಬೇರೆ ಜಾಗದಿಂದ ಬಂದವರು. ಇಡೀ ರಾಜ್ಯದಿಂದ ಅಲ್ಲಿಗೆ ಜನ ಬಂದಿರ್ತಾರೆ, ಇದರಲ್ಲಿ ಹೊರಗಿನವರು ಅಂತ ಇಲ್ಲ. ನಾವೆಲ್ಲರೂ ವಿವಿ ಗಣೇಶೋತ್ಸವಕ್ಕೆ ಬಂದೇ ಬರ್ತೇವೆ, ಅಲ್ಲಿ ಇರ್ತೇವೆ, ಅದರಲ್ಲಿ ಎರಡು ಪ್ರಶ್ನೆ ಇಲ್ಲ. ಬಂದರೆ ಏನು ಮಾಡ್ತಾರೆ, ಅರೆಸ್ಟ್ ಮಾಡ್ತಾರಾ? ನಾನು ಬಂದೇ ಬರ್ತೇನೆ.ನನ್ನನ್ನು ಅರೆಸ್ಟ್ ಮಾಡಿದ್ರೆ ತುಂಬಾ ಸಂತೋಷ, ಅರೆಸ್ಟ್ ಆಗದೇ ತುಂಬಾ ಸಮಯ ಆಯ್ತು.ಅರೆಸ್ಟ್ ಮಾಡಿದರೆ ಮಾಡಲಿ, ಅದರಲ್ಲಿ ನನಗೆ ಗಡಿಬಿಡಿ ಇಲ್ಲ.

ಗಣೇಶನ ಇದಕ್ಕೆ ಯಾರೂ ಬರಬಾರದು ಅನ್ನೋದು ಒಳ್ಳೆಯ ಮಾತಲ್ಲ. ಸ್ಪೀಕರ್ ಹಾಗೆಲ್ಲ ಮಾತನಾಡಲ್ಬಾ ಅಂತ, ಅವರು ಎಲ್ಲರನ್ನ ಒಂದೇ ಕಲ್ಪನೆಯಲ್ಲಿ ಕೊಂಡು ಹೋಗಬೇಕು. ನಮ್ಮದು ಧರ್ಮಾಧರಿತ ದೇಶ, ಜಗತ್ತಿನ ಮೋಸ್ಟ್ ಸೆಕ್ಯುಲರ್ ಹಿಂದು ನಿಮ್ಮ ದೇವರನ್ನ ನೀವು ಪೂಜೆ ಮಾಡಿ, ನಮ್ಮದಕ್ಕೆ ವಿರೋಧ ಬೇಡ. ವಿವಿ ಅನ್ನೋದು ಹಿಂದೂ ಮೆಜಾರಿಟಿ ಇರೋ ಒಂದು ಸಂಸ್ಥೆ. ಅಲ್ಲಿ ದೇವರನ್ನು ಪೂಜೆ ಮಾಡಬಾರದು ಅಂದ್ರೆ ಏನರ್ಥ ? ಸೆಕ್ಯೂಲರ್ ಹೆಸರಿನಿಂದ ಹಿಂದೂಗಳ ಜೀವನಕ್ಕೆ ತೊಂದರೆ ಆಗಿದೆ. ಅವರ ಮಸೀದಿ, ಮನೆಯಲ್ಲಿ ಅಲ್ಲಾನನ್ನೇ ಪೂಜೆ ಮಾಡಲಿ.

ಇದು ರಾಷ್ಟ್ರಧರ್ಮ, ಹಾಗಾಗಿ ಮುಸಲ್ಮಾನರು ಗೌರವ ಕೊಡಲಿ. ಎಲ್ಲರೂ ಒಟ್ಟಿಗೆ ಬದುಕಲು ನಾವು ಪರಸ್ಪರ ಗೌರವಿಸಬೇಕು.ವಿವಿಯಲ್ಲಿ ಅಲ್ಲಾನನ್ನ ಪೂಜೆ ಮಾಡೋದಾದ್ರೆ ಮಾಡಲಿ. ಇವರು ನಿನ್ನೆ ಕಮ್ಯುನಿಸ್ಟರಿಗೆ ಕಾರ್ಯಕ್ರಮ ಮಾಡಲು ವಿವಿಯಲ್ಲಿ ಅವಕಾಶ ಕೊಡ್ತಾರೆ. ಹಿಂದೂ ವಿರೋಧಿ ಮಾತನಾಡುವ ಶಂಸುಲ್ ಇಸ್ಲಾಂಗೆ ಅವಕಾಶ ಕೊಡಲಿಲ್ವಾ? ನಮಗೆ ಈಗ ಸಮಸ್ಯೆ ಬಂದಿರೋದು ಕಾಂಗ್ರೆಸ್ ನಿಂದ. ಕಾಂಗ್ರೆಸ್ ನಮ್ಮನ್ನ ನಿರ್ವೀರ್ಯರನ್ನಾಗಿ, ಹೇಡಿಗಳನ್ನಾಗಿ ಮಾಡಿತು.

ಈಗಲೂ ಪಾಕಿಸ್ತಾನ ಜಿಂದಾಬಾದ್ ಹೇಳುವವರು ಇದಾರೆ. ಅವರಿಗೆ ಕುಮ್ಮಕ್ಕು ಕೊಡೋರು ಇದಾರೆ, ಕಾಂಗ್ರೆಸ್ ಅವರಿಗೆ ಬೆಂಬಲ ಕೊಡ್ತಾ ಇದೆ. ಸ್ಟಾಲಿನ್ ಪುತ್ರ ಉದಯನಿಧಿ ಎಂಬ ಮಂತ್ರಿ ತನ್ನ ಕಂತ್ರಿ ಬುದ್ದಿ ತೋರಿಸಿದ.ಅದರ ಬಗ್ಗೆ ಈ ಕಾಂಗ್ರೆಸ್ ಏನೂ ಮಾತನಾಡಲ್ಲ, ಅದರ ಪರವಾಗಿ ಇವರು ನಿಂತರು. ಇನ್ನೊಬ್ಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇನ್ನೊಬ್ಬ ಗೃಹಮಂತ್ರಿ.ಇಬ್ಬರೂ ಹಿಂದೂ ಧರ್ಮದ ಬಗ್ಗೆ ಮಾತನಾಡ್ತಾರೆ. ಹೆಸರು ಪರಮೇಶ್ವರ್, ಹೆಸರಲ್ಲೇ ಈಶ್ವರ ಇದೆ ಮಾರ್ರೆ.

ಗಣೇಶ ಎಲ್ಲ ಅಡ್ಡಿಗಳ ನಿವಾರಿಸುವ ಮೊಟ್ಟ ಮೊದಲ ದೇವರು.ಅವನು ವಿಘ್ನ ನಿವಾರಕ, ಸರ್ವ ವ್ಯಾಪಿ ಇರೋನು ಗಣೇಶ.ಮುಸ್ಲಿಮರೇ ಇರೋ ಇಂಡೋನೇಷ್ಯಾದ ನೋಟಿನ ಮೇಲೆ ಗಣೇಶನ ಚಿತ್ರ ಇದೆ. ಇಲ್ಲೊಬ್ಬರು ಅಮೀನರಿದ್ದಾರೆ, ಅವರ ಹೆಸರು ಜಯರಾಜ್.  ಮಂಗಳೂರು ವಿವಿ ಉಪಕುಲಪತಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು ನಾವು ಹೊಸತಾಗಿ ವಿವಿಯಲ್ಲಿ ಗಣಪತಿ ಇಡಿ ಅಂತ ಹೇಳ್ತಾ ಇಲ್ಲ. ಮಂಗಳಾ ಆಡಿಟೋರಿಯಂನಲ್ಲೇ ಗಣಪತಿ ಇಟ್ಟರೆ ಇಡೀ ವಿವಿಗೆ ಒಳ್ಳೆದಾಗುತ್ತೆ. ಸ್ವಲ್ಪ ಇದರ ಹಿಂದೆ ನಮ್ಮ ಉಳ್ಳಾಲದ ಶಾಸಕರು ಇದ್ದಾರೆ.ಅವರು ನಮ್ಮ ದೇವಸ್ಥಾನಕ್ಕೆಲ್ಲಾ ಹೋಗ್ತಾರೆ, ನಾಡಿದ್ದು ಗಣೇಶೋತ್ಸವಕ್ಕೂ ಹೋಗ್ತಾರೆ.

ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ :

ಎಲ್ಲಾ ಜನರು ಒಟ್ಟಾಗಿ ದೇಶಕ್ಕೋಸ್ಕರ ಗಣೇಶನ ಆರಾಧನೆ ಮಾಡಿದ್ರು.ಈಗ ಅವರು ಸ್ಪೀಕರ್, ಗಣೇಶನ ಅಲ್ಲೇ ಇಡಿ ಅಂತ ಅವರು ಹೇಳಬೇಕು.ನಾವು ಸೆ.19ರಂದು ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ. ಅದನ್ನ ಯಾರು ಬೇಡ ಅಂದರೂ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಗುತ್ತೆ .ಅದಕ್ಕೆ ವಿವಿಯ ಅಮೀನರು ಹಾಗೂ ರಾಜ್ಯದ ಅಮೀನರಾದ ಸ್ಪೀಕರ್ ಕೂಡ ಬೆಂಬಲ ಕೊಡಬೇಕು

.ಉಳ್ಳಾಲದಲ್ಲಿ ಹಿಂದೂಗಳ ಸಂಖ್ಯೆ ಗೊತ್ತಿಲ್ಲದೇ ಕಡಿಮೆಯಾಗ್ತಿದೆ. ಕಡಿಮೆಯಾದ ಜಾಗಗಳೆಲ್ಲಾ ಪಾಕಿಸ್ತಾನ ಆಗ್ತಾ ಬಂತು.ಹಿಂದೂ ಸಮಾಜದಲ್ಲಿ ರಾಜಕೀಯಕ್ಕೋಸ್ಕರ ಹಿಂದೂ ವಿರೋಧಿಗಳಿಗೆ ಕೆಲವರು ಬೆಂಬಲ ಕೊಡ್ತಾ ಇದಾರೆ. ಮೋದಿ ರಿಪಬ್ಲಿಕ್ ಆಫ್ ಭಾರತ್ ಅಂತ ಮಾಡಲು ಹೋಗಿದ್ದಾರೆ. ಆದರೆ ಇದರ ಬಗ್ಗೆಯೂ ಅಪಸ್ವರ, ಬ್ರಿಟಿಷರು ಅದನ್ನ ಬಿಟ್ಟು ಹೋಗಿದ್ದಾರೆ. ಮೊನ್ನೆ ಇವರು ಭಾರತ್ ಜೋಡೋ ಮಾಡಿದ್ರಲ್ಲ, ಅದು ಇಂಡಿಯಾ ಜೋಡೋನಾ?.ಇವರ ಇಂಡಿಯಾ ಅಂತ ಒಕ್ಕೂಟ ಒದೆ, ಅದರಲ್ಲೂ ಇವರು ಒಟ್ಟಿಗೆ ಇಲ್ಲ .ಭಾರತ್ ಅನ್ನೋದು ನಮ್ಮ ಸ್ವಾಭಿಮಾನಿ, ನಮ್ಮ ನಂಬಿಕೆ.

ಮಂಗಳೂರು ವಿವಿ ಸ್ಟ್ಯಾಂಡರ್ಡ್ ಕಡಿಮೆ ಆಗಿದೆ ಅಂತ ಸ್ಪೀಕರ್ ಖಾದರ್ ಹೇಳಿದ್ದಾರೆ. ಅದಕ್ಕಾಗಿ ಗಣೇಶನ ಕೂರಿಸಿ, ಆಗ ಮತ್ತೆ ಗುಣಮಟ್ಟ ಮೇಲೆ ಬರುತ್ತೆ. ನಮಗೆ ಇನ್ನೂ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಅದಕ್ಕಾಗಿ ಈ ಹೋರಾಟ.ನಮ್ಮತನ ಉಳಿಸುವ ಉದ್ದೇಶದಿಂದ ಈ ಹೋರಾಟ. ಭಯೋತ್ಪಾದಕ ಮುಸಲ್ಮಾನರು, ಮತಾಂತರಿ ಕ್ರಿಶ್ಚಿಯನ್ನರ ಮಧ್ಯೆ ಹಿಂದೂ ಸಮಾಜ ಎದ್ದು ನಿಲ್ಲಬೇಕಿದೆ. ಸಾವರ್ಕರ್ ಗೆ ಶಾಲೆಯಲ್ಲಿ ಜೈಕಾರ ಹಾಕಿದ್ದಕ್ಕೆ ಮಂಚಿಯಲ್ಲಿ ವಿರೋಧ ಮಾಡಿದ್ರು. ಇದಕ್ಕೆ ಗಲಾಟೆ ಮಾಡಿ ಅಲ್ಲಿನ ಶಿಕ್ಷಕಿ ಹತ್ರ ಕ್ಷಮೆ ಕೇಳಿಸಿದ್ರು.ಸಾವರ್ಕರ್ ಕೂದಲಿನಷ್ಟೂ ಬೆಲೆ ಇಲ್ಲದ ಇವರು ಅವರ ಬಗ್ಗೆ ಮಾತನಾಡ್ತಾರೆ ಎಂದು ಭಟ್ ಕಿಡಿ ಕಾರಿದ್ದಾರೆ.

Check Also

ಬಿಜೆಪಿಯ ಉಚ್ಚಾಟನೆಗೆ ನಾನು ತಲೆಬಿಸಿ ಮಾಡಿಕೊಳ್ಳಲ್ಲ : ರಘುಪತಿ ಭಟ್

ಉಡುಪಿ: ಬಿಜೆಪಿಯಿಂದ ನನ್ನನ್ನು ಉಚ್ಛಾಟನೆ ಮಾಡಿರುವುದು ಮಾಧ್ಯಮದ ಮೂಲಕ ತಿಳಿದು ಬೇಸರವಾಯಿತು. ಶಿಸ್ತು ಸಮಿತಿಯಿಂದ ನನಗೆ ಈವರೆಗೆ ಯಾವುದೇ ನೋಟಿಸ್ …

Leave a Reply

Your email address will not be published. Required fields are marked *

You cannot copy content of this page.