ಸಾಮಾನ್ಯವಾಗಿ ಇವತಿಯರು ಮದುವೆಯಾಗಿ ತಮ್ಮ ಮಾವನ ಮನೆಗೆ ಹೋದ ಮೇಲೆ ಅಲ್ಲಿರುವಂತಹ ಮಾವ ತಂದೆಗೆ ಸಮಾನ ಎಂದು ಹಿರಿಯರು ಹೇಳುತ್ತಾರೆ. ತಮ್ಮ ಮಗ ಹಾಗೂ ಸೊಸೆಯನ್ನು ತಮ್ಮ ಮಕ್ಕಳಂತೆ ಹಲವಾರು ಅತ್ತೆ ಮಾವಂದಿರು ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಘಟನೆ ತುಂಬಾನೇ ವಿಚಿತ್ರವಾಗಿದೆ, ಮಾವನೇ ತನ್ನ ಸೊಸೆಯನ್ನ ಪ್ರೀತಿಸಿ ಮದುವೆಯಾಗಿದ್ದಾರೆ.
ಹೌದು ಉತ್ತರಪ್ರದೇಶದ ಗೋರಕ್ಪುರ್ ಎಂಬ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಾವ ಮತ್ತು ಸೊಸೆಯ ನಡುವೆ ಆ ಪ್ರೀತಿ ಹೇಗೆ ಹುಟ್ಟಿತು ಎಂಬ ಕತೆಯನ್ನು ನಾವು ಹೇಳುತ್ತೇವೆ ಮುಂದೆ ಓದಿ. ಮಾವನ ಹೆಸರು ಕೈಲಾಶ್ ಯಾದವ್ ಎಂದು. ಇವರು ಪೊಲೀಸ್ ಠಾಣೆಯಲ್ಲಿ ವಾಚ್ ಮೆನ್ ಆಗಿ ಕೆಲಸವನ್ನು ಮಾಡುತ್ತಿದ್ದರು. ಇವರಿಗೆ ಸುಮಾರು 70 ವರ್ಷಗಳು ತುಂಬಿದೆ. ಇವರ ಸೊಸೆಗೆ 28 ವರ್ಷಗಳು ಮಾತ್ರ. ಸೊಸೆಯ ಹೆಸರು ಪೂಜಾ ಎಂದು. ಕೈಲಾಶ್ ಅವರಿಗೆ ಮಕ್ಕಳಿದ್ದರೆ ಮೂರನೇ ಮಗನ ಸೊಸೆ ಈ ಪೂಜಾ. ಈ ಮೂರನೇ ಮಗ ಕೆಲವು ವರ್ಷಗಳ ಹಿಂದೆ ಇಹಲೋಕವನ್ನು ತ್ಯಜಿಸಿದ್ದರು. ಹಾಗೆ ಕೈಲಾಶ್ ಅವರ ಪತ್ನಿ ಕೂಡ ಸುಮಾರು 12 ವರ್ಷಗಳ ಹಿಂದೆ ಮೇಲಕ್ಕೆ ಹೋಗಿದ್ದರು. ಪೂಜಾ ತನ್ನ ಗಂಡ ಹೋದಮೇಲೆ ಬೇರೆ ಹುಡುಗನನ್ನ ಮದುವೆಯಾಗುತ್ತಾರೆ. ಆದರೆ ಆ ಹುಡುಗನ ಜೊತೆ ಮತ್ತು ಕುಟುಂಬದವರ ಜೊತೆ ಹೊಂದಾಣಿಕೆ ಆಗದೆ ಮತ್ತೆ ತನ್ನ ಮಾವನ ಮನೆಗೆ ಹಿಂತಿರುಗುತ್ತಾಳೆ.ಸೊಸೆ ಯಾವಾಗ ಮತ್ತೆ ಮಾವನ ಮನೆಗೆ ಹಿಂತಿರುಗಿ ಬರುತ್ತಾಳೋ ಆಗ ಮಾವ ಮತ್ತು ಸೊಸೆಯ ನಡುವೆ ಪ್ರೀತಿ ಹುಟ್ಟಲು ಶುರುವಾಗುತ್ತದೆ. ನಂತರ ಅವರು ಮದುವೆ ಆಗಲು ನಿರ್ಧರಿಸುತ್ತಾರೆ. ಅವರ ಇಬ್ಬರ ಮಧ್ಯ ಬಹಳಷ್ಟು ವಯಸ್ಸಿನ ಅಂತರವಿದ್ದರೂ, ಯಾವುದೇ ಸಮಾಜಕ್ಕೆ ಹೆದರದೆ ಒಂದು ದೇವಸ್ಥಾನಕ್ಕೆ ಹೋಗಿ ಶಾಸ್ತ್ರ ಪ್ರಕಾರ ಮದುವೆಯಾಗುತ್ತಾರೆ. ಈ ಸುದ್ದಿ ಅವರ ಗ್ರಾಮದಲ್ಲಿ ಬಹಳ ದೊಡ್ಡ ಮಟ್ಟದ ಚರ್ಚೆಯಾಗುತ್ತದೆ.
ಇವರಿಬ್ಬರೂ ದೇವಸ್ಥಾನಕ್ಕೆ ಹೋಗಿ ಮದುವೆ ಆಗಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅತ್ತೆ ಹಾಗೂ ಮಾವನ ನಡುವೆ ಸುಮಾರು 42 ವರ್ಷಗಳ ಅಂತರವಿದ್ದರೂ ಕೂಡ ಅವರಿಬ್ಬರು ಪ್ರೀತಿಯಲ್ಲಿ ಬಿದ್ದು ಇಂದು ಮದುವೆಯಾಗಿದ್ದಾರೆ ಇವರಿಬ್ಬರನ್ನು ನೋಡಿ ಅಲ್ಲಿರುವ ಗ್ರಾಮಸ್ಥರು ಟೀಕೆಯನ್ನು ಮಾಡಲು ಪ್ರಾರಂಭಿಸಿದ್ದಾರೆ.
ಈ ಘಟನೆ ತುಂಬಾನೇ ವಿಶೇಷ ಆದಂತಹ ಪ್ರಕರಣ ಆಗಿದೆ. ಏಕೆಂದರೆ ಸಾಮಾನ್ಯವಾಗಿ ಸೊಸೆ ಮತ್ತು ಮಾವನ ನಡುವೆ ತಂದೆ ಮಗಳ ಬಾಂಧವ್ಯ ಇರುತ್ತದೆ. ಆದರೆ ಇಲ್ಲಿ ಅದು ವಿರುದ್ಧವಾಗಿದೆ. ವಿಷಯವನ್ನು ತಿಳಿದ ಮೇಲೆ ಹಲವಾರು ಜನರಿಗೆ ಇದನ್ನ ನಂಬಬೇಕು ಬಿಡಬೇಕು ಎಂಬುದು ತಿಳಿಲಿಲ್ಲ. ಆದರೆ ಅವರ ಫೋಟೋಗಳನ್ನು ಸಮಾಜಕ ಜಾಲತಾಣಗಳಲ್ಲಿ ನೋಡಿದ ಮೇಲೆ ಎಲ್ಲರೂ ಕೂಡ ಹುಬ್ಬೇರಿಸುವಂತೆ ಆಗಿದೆ.