ಹೈದರಾಬಾದ್: ಬಹುಭಾಷಾ ಹಿರಿಯ ನಟಿ ಜಮುನಾ (86) ಶುಕ್ರವಾರ (ಜ.27 ರಂದು) ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನಾ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ನಟಿಯ ಹಿನ್ನೆಲೆ: ಜಮುನಾ ನಟಿ ಹಾಗೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ತನ್ನ 16ನೇ ವಯಸ್ಸಿನಲ್ಲಿ ʼ ಪುಟ್ಟಿಲುʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, 1955 ರಲ್ಲಿ ರಿಲೀಸ್ ಆದ ಎಲ್.ವಿ.ಪ್ರಸಾದ್ ಅವರ ʼಮಿಸ್ಸಮ್ಮʼ ಸಿನಿಮಾದಿಂದ ಹೆಚ್ಚು ಖ್ಯಾತಿಗಳಿಸಿದರು. ಕನ್ನಡ, ತಮಿಳು ಚಿತ್ರದಲ್ಲೂ ನಟಿಸಿ ಖ್ಯಾತಿಗಳಿಸಿದ್ದಾರೆ.
ಜಮುನಾ 9ನೇ ಲೋಕಸಭೆಯಲ್ಲಿ ಸಂಸದರಾಗಿದ್ದರು ಮತ್ತು ರಾಜಮಂಡ್ರಿಯನ್ನು ಪ್ರತಿನಿಧಿಸಿದ್ದರು.ʼತೆನಾಲಿ ರಾಮಕೃಷ್ಣʼ, ʼಮುದ್ದು ಬಿದ್ದʼ, ʼಗುಂಡಮ್ಮ ಕಥೆʼ, ʼರಾಮುಡು ಭೀಮುಡುʼ ಮತ್ತು ʼಪೂಲ ರಂಗಡುʼ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.ನಟಿಯ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.