May 30, 2026
image (39)

ಮುಂಬೈ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಿಸಿಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಇದೀಗ CNG ಮತ್ತು ಪೈಪ್ಡ್ ನೈಸರ್ಗಿಕ ಅನಿಲ ದರ ಏರಿಕೆಯ ಮತ್ತೊಂದು ಬರೆ ಎಳೆಯಲಾಗಿದೆ. ಪ್ರಮುಖ ಸರ್ಕಾರಿ ಅನಿಲ ವಿತರಕ ಸಂಸ್ಥೆಯಾದ ಮಹಾನಗರ ಗ್ಯಾಸ್ ಲಿಮಿಟೆಡ್, ಮುಂಬೈ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ಪರಿಷ್ಕೃತ ದರ ಅನ್ವಯವಾಗಲಿವೆ.

ಹೊಸ ಪರಿಷ್ಕೃತ ದರದ ಅನ್ವಯ, ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದ್ದು, ಮುಂಬೈನಲ್ಲಿ ಈಗ ಸಿಎನ್‌ಜಿ ದರ ಪ್ರತಿ ಕೆಜಿಗೆ 86 ರೂಪಾಯಿಗಳಿಗೆ ತಲುಪಿದೆ. ಇಷ್ಟೇ ಅಲ್ಲದೆ, ಗೃಹ ಬಳಕೆಯ ಪಿಎನ್‌ಜಿ (PNG) ದರವನ್ನು ಕೂಡ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (SCM) 50 ಪೈಸೆಯಷ್ಟು ಹೆಚ್ಚಿಸಲಾಗಿದೆ. ಈ ಹೊಸ ದರಗಳು ಮುಂಬೈ ಸೇರಿದಂತೆ ಥಾಣೆ, ನವಿ ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (MMR) ಇತರ ಭಾಗಗಳಿಗೆ ಅನ್ವಯವಾಗಲಿವೆ.

About The Author

Leave a Reply

Your email address will not be published. Required fields are marked *

You cannot copy content of this page.