May 22, 2026
WhatsApp Image 2026-05-22 at 2.16.47 PM

ಹಲವು ದಿನಗಳಿಂದ ನಾಪತ್ತೆಯಾಗಿದ್ದ ಕಾರ್ಕಳದ ವ್ಯಕ್ತಿಯೊಬ್ಬರು ಉಡುಪಿಯ ವಿದ್ಯೋದಯ ಶಾಲೆಯ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಸ್ವಸ್ಥನಾಗಿ ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದ ಅಪರಿಚಿತನನ್ನು ಗಮನಿಸಿದ 112 ತುರ್ತು ಸಹಾಯವಾಣಿ  ಪೊಲೀಸರು, ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.

ತಕ್ಷಣ ನೆರವಿಗೆ ಬಂದ ಒಳಕಾಡು ಅವರು ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.ವಿಚಾರಣೆಯಲ್ಲಿ ರಕ್ಷಿಸಲ್ಪಟ್ಟ ವ್ಯಕ್ತಿ ಕಾರ್ಕಳದ ನಿವಾಸಿ ದಯಾನಂದ್ ನಾಯಕ್ ಎಂದು ತಿಳಿದು ಬಂದಿದೆ.

ದಯಾನಂದ್ ನಾಯಕ್  ಅವರು ದೊಡ್ಡಣಗುಡ್ಡೆಯಿಂದ ಕಾಣೆಯಾಗಿರುವ ಬಗ್ಗೆ ಮಣಿಪಾಲ ಪೋಲಿಸ್ ಠಾಣೆಯ‌ಲ್ಲಿ ದೂರು ದಾಖಲಾಗಿತ್ತು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಎಂದು ತಿಳಿದುಬಂದಿತು.

ತುರ್ತು ಸಹಾಯವಾಣಿಯ ಹೆಡ್ ಕಾನ್ಸ್ಟೇಬಲ್ ಗಣೇಶ್ ಡಿ, ಅವಿನಾಶ್ ಸಹಕರಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.