ಅಪ್ಪು ಬಗ್ಗೆ ಆಡಿದ ಆ ಒಂದು ಮಾತು ದರ್ಶನ್ಗೆ ಮುಳುವಾಗಿದ್ದು, ದರ್ಶನ್ ಈ ಹಿಂದೆ ಅಪ್ಪುಗೆ ಅಪಮಾನವಾಗುವಂತೆ ಮಾತನಾಡಿದ್ದರು. ಸತ್ತ ಮೇಲೆ ಅಪ್ಪುವನ್ನು ಅಭಿಮಾನಿಗಳು ಮೆರೆಸ್ತಿದ್ದಾರೆ, ನನ್ನನ್ನು ಜೀವಂತವಾಗಿರುವಾಗಲೇ ಮೆರೆಸ್ತಿದ್ದಾರೆ ಎಂದಿದ್ದರು. ಆಗಲೇ ಜನರು ವಿಜಯನಗರಕ್ಕೆ ದರ್ಶನ್ ಸಿನಿಮಾ ರಿಲೀಸ್ಗೆ ಬಿಡಲ್ಲ ಎಂದಿದ್ದರು. ನಿನ್ನೆ ಹೊಸಪೇಟೆಗೆ ಬಂದಾಗ ದರ್ಶನ್ ಮೇಲೆ ಕೆಂಡಾಮಂಡಲರಾಗಿದ್ದಾರೆ.
ದರ್ಶನ್ ಬರುವ ಸುದ್ದಿ ತಿಳಿದು ಜನರು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ದರ್ಶನ್ ಓಡಿಸಲೆಂದೇ ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ವಾಲ್ಮೀಕಿ ಸರ್ಕಲ್ನಲ್ಲಿ ಜಮಾಯಿಸಿ ದರ್ಶನ್ ವಿರುದ್ಧ ಧಿಕ್ಕಾರ ಕೂಗಿದ್ರು, ಜನರು
ದರ್ಶನ್ ಬ್ಯಾನರ್ಗಳನ್ನು ಹರಿದು ಕಿತ್ತೆಸೆದಿದ್ಧಾರೆ. ದರ್ಶನ್ ಬಂದಿದ್ದ ವಾಹನದ ಮೇಲೆ ಕಲ್ಲು ತೂರಿದ್ದಾರೆ. ಜನರು
ಚಪ್ಪಲಿ ಎಸೆದು ವಾಲ್ಮೀಕಿ ಸರ್ಕಲ್ನಿಂದ ದರ್ಶನ್ರನ್ನು ಓಡಿಸಿದ್ದಾರೆ. ಚಪ್ಪಲಿ ಎಸೆಯುತ್ತಿದ್ದಂತೆ ದರ್ಶನ್ ವಾಲ್ಮೀಕಿ ಸರ್ಕಲ್ನಿಂದ ಕಾಲ್ಕಿತ್ತಿದ್ದಾರೆ.ಡಿ ಬಾಸ್ ಅಪ್ಪು ಮಾತ್ರವಲ್ಲ ಅಭಿಮಾನಿಗಳನ್ನೂ ಅವಮಾನಿಸಿದ್ದು, ಅಭಿಮಾನಿ ಕಾಲು ಮುರಿದ್ರೂ ನೋಡಲು ಬರಲಿಲ್ಲ ಎಂಬ ಕಾರಣಕ್ಕೆ ದರ್ಶನ್ ಮೇಲೆ ಜನರು ಆಕ್ರೋಶ ಹಾರ ಹಾಕಿದ್ದಾರೆ. ದರ್ಶನ್ ಅಭಿಮಾನಿ ಸಿನಿಮಾ ಪ್ರಮೋಷನ್ಗೆ ಬಂದಿದ್ದರು. ಆತನ ಕಾಲಿನ ಮೇಲೆ ಪ್ರಮೋಷನ್ ಲಾರಿ ಹರಿದಿತ್ತು, ಅಭಿಮಾನಿಗೆ ಸಿನಿಮಾ ಪ್ರಚಾರ ಕಾರ್ಯಕ್ರಮದ ಲಾರಿ ಹರಿದು ಗಂಭೀರ ಗಾಯವಾಗಿದೆ. ಲಾರಿ ಹರಿದ ಘಟನೆ ಹೊಸಪೇಟೆಯ ವಾಲ್ಮೀಕಿ ವೃತ್ತದಲ್ಲಿ ಸಂಭವಿಸಿದ್ದು, ಆಯೋಜಕರು ಲಾರಿಯನ್ನೇ ವೇದಿಕೆಯಾಗಿ ಪರಿವರ್ತಿಸಿದ್ದರು ಎಂಬ ಕಾರಣಕ್ಕಾಗಿ ಜನ ಸಿಟ್ಟಿಗೆದ್ದಿದ್ದಾರೆ. ಪ್ರಚಾರದ ವೇಳೆ ಲಾರಿ ತಿರುವು ಪಡೆಯುತ್ತಿದ್ದಾಗ ಯುವಕನ ಕಾಲಿನ ಮೇಲೆ ಹರಿದಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಇಷ್ಟಾದರೂ ಅಭಿಮಾನಿಯನ್ನು ನೋಡಲು ಹೋಗದ ದರ್ಶನ್ ಪ್ರಮೋಷನ್ಗಾಗಿ ವಾಲ್ಮೀಕಿ ವೃತ್ತದ ಬಳಿಗೆ ಬಂದಿದ್ದ ಘಟನೆಯಿಂದಲೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.