
ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಹರಕೆ ಸೀರೆ ಅರ್ಪಿಸುವ ಭಕ್ತಾದಿಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಈ ನಿಯಮ ಕಡ್ಡಾಯವಾಗಿ ನಾಳೆಯಿಂದಲೇ (̄2026 ಜ.01) ಜಾರಿಗೆ ಬರಲಿದೆ.
ಹೌದು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೆ ಒಳಪಟ್ಟ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ತಾಯಿಗೆ ಅರ್ಪಿಸುವ ಹರಕೆಯ ಸೀರೆ 18 ಮೊಳದ್ದಾಗಿರಬೇಕು. ಅದಕ್ಕಿಂತ ಕಡಿಮೆ ಮೊಳದ ಸೀರೆಯನ್ನು ಸ್ವೀಕರಿಸಲಾಗುವುದಿಲ್ಲ ಎಂಬುದನ್ನು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳ್ಯ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. 2026 ರ ಜ. 01 ರಿಂದ ಈ ನಿಯಮ ಕಡ್ಡಾಯವಾಗಿರುತ್ತದೆ ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
