
ಉಡುಪಿ ಜಿಲ್ಲೆಯ ಹೆಜಮಾಡಿ ಬ್ರಹ್ಮಬೈದರ್ಕಳ ಗರಡಿಯ ನೇಮೋತ್ಸವ ವೇಳೆ ವೃದ್ಧೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಮಹಿಳೆಯರ ತಂಡವೊOದು ಎಗರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಡಿ. 24ರಂದು ಹೆಜಮಾಡಿಯ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕೆ ಹೆಜಮಾಡಿ ನಿವಾಸಿ ಕಮಲ ಅವರು ಆಗಮಿಸಿದ್ದರು. ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಗಮನಿಸಿದ ಮೂವರು ಕಳ್ಳಿಯರು ಅವರ ಸುತ್ತವೇ ಸುತ್ತುತಿದ್ದರು.
ಜನದಟ್ಟಣೆಯಾಗುತ್ತಿದ್ದಂತೆ ಮಹಿಳೆಯರು ಸುತ್ತುವರಿದು, ಚಿನ್ನದ ಸರ ಎಗರಿಸಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಅಪಹರಿಸಿ ಮಹಿಳೆಯರು ಗರಡಿಯಿಂದ ಹೊರ ನಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ದೃಶ್ಯಗಳು ವೈರಲ್ ಆಗಿದ್ದು, ವಿಡಿಯೋ ಆಧರಿಸಿ ಕಳ್ಳಿಯರ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
