
ಕಾಸರಗೋಡು: ಮಂಜೇಶ್ವರ ತಾಲೂಕಿನ ಮಣಿಯಂಪಾರೆ ಎಂಬಲ್ಲಿ ರಸ್ತೆ ಮೇಲೆ ನಿಯಂತ್ರಣ ತಪ್ಪಿದ ಕಾರೊಂದು ಮಧ್ಯದಲ್ಲಿ ನಿಂತಿದ್ದ ಎರಡು ಗೋವಿಗೆ ಡಿಕ್ಕಿ ಹೊಡೆದು ಅಪಘಾತದಲ್ಲಿ ಎರಡೂ ಗೋವುಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದುರ್ಘಟನೆ 9.11.2025 ರಂದು ಸಂಭವಿಸಿದೆ.
ಈ ಪ್ರದೇಶವು ಜನಸಂಚಾರವೂ ಜೊತೆಗೆ ಅನ್ಯಮತೀಯರ ಬಹುಲಿತ್ಯ ಹೊಂದಿರುವ ಪ್ರದೇಶವಾಗಿತ್ತು.
ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆ ದಾರಿಗೆ ಬರುತ್ತಿದ್ದ ವಿಟ್ಲ ಹಿಂದು ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ತಕ್ಷಣ ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿದರು.
ಸ್ಥಳೀಯರು ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ಇಂತಹ ಅಪಘಾತಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
