March 20, 2026
WhatsApp Image 2024-12-15 at 2.31.04 PM

ಉಡುಪಿ: ಉದ್ಯಾವರ ಬೊಳ್ಜೆ ನಿವಾಸಿ ಆದಿತ್ಯ (24) ಎಂಬವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೆರಂಪಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಹೊನಲುಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಬಳಿಕ ಮನೆಗೆ ಬಂದ ಆದಿತ್ಯ ಅವರು ಮುಂಜಾನೆ 4 ಗಂಟೆಯ ಸುಮಾರಿಗೆ ನೇಣಿಗೆ ಶರಣಾಗಿದ್ದಾರೆ ಎಂದು‌ ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದಿತ್ಯ ಅವರು ಕಳೆದ ವರ್ಷ ಅಪಘಾತದಲ್ಲಿ ನಿಧನರಾಗಿದ್ದ ಸ್ನೇಹಿತ ಸುಕ್ಷಿತ್ ಹೆಸರಿನಲ್ಲಿ ಕ್ರಿಕೆಟ್ ತಂಡವೊಂದನ್ನು ಕಟ್ಟಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.