March 20, 2026
WhatsApp Image 2024-12-15 at 11.04.58 AM

ಕೋಟ: ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಗೊಬ್ಬರಬೆಟ್ಟು ಬೆಲ್ಲದ ಗಣಪತಿ ದೇವಸ್ಥಾನ ಬಳಿ ನಡೆದಿದೆ.

ಸಾಲಿಗ್ರಾಮದ ಬಡಹೋಳಿ ನಿವಾಸಿ, ಜನತಾ ಫಿಶ್ ಮಿಲ್ ನೌಕರ ಸುರೇಶ್ ಮರಕಾಲ (48) ಮೃತ ಸೈಕಲ್ ಸವಾರ.

ಮೃತರು ಜನತಾ ಫಿಶ್ ಮಿಲ್ ನಲ್ಲಿ ಕೆಲಸ ಮುಗಿಸಿ ಕೋಟದಿಂದ ಸಾಲಿಗ್ರಾಮಕ್ಕೆ ಮನೆಗೆ ಸೈಕಲ್ ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಮುರ್ಡೇಶ್ವರದಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಹಿಂದಿನಿಂದ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.