
ಬ್ರಹ್ಮಾವರ: ದೇವಸ್ಥಾನಗಳಿಗೆ ಹೋಗುವ ದಾರಿಯಲ್ಲಿ ಗೋಮಾಂಸ ಎಸೆದಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
2 ದಿನದ ಹಿಂದೆ ಬ್ರಹ್ಮಾವರ ಹೊರವಲಯ ಬೈಕಾಡ್ತಿ ದೇವಸ್ಥಾನದ ಬಳಿ ಗೋವಿನ ರುಂಡ ಕಂಡು ಬಂದಿದ್ದು, ಶುಕ್ರವಾರ ಬೈಕಾಡಿಯ ಕಾಮೇಶ್ವರ ದೇವಸ್ಥಾನದ ಮಾರ್ಗದಲ್ಲಿ ಕರುವಿನ ಶವ ಪತ್ತೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಘಟನೆಯ ಸ್ಥಳಕ್ಕೆ ಭಜರಂಗದಳ ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದು, ಬಳಿಕ ಬ್ರಹ್ಮಾವರ ಆರಕ್ಷಕ ಠಾಣಾಧಿಕಾರಿ ಸಿಬ್ಬಂದಿಯವರೊಂದಿಗೆ ಆಗಮಿಸಿದರು.
ಪಶು ವೈದ್ಯಾಧಿಕಾರಿ ಡಾ. ಉದಯ ಕುಮಾರ್ ಶೆಟ್ಟಿ ಗೋವಿನ ಶವ ಪರಿಶೀಲನೆ ಮಾಡಿದರು. ಹಿಂದೂ ಪರ ಸಂಘಟನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ 2 ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡುವಂತೆ ಮನವಿ ಮಾಡಿದರು. ಮತ್ತು ಇಂತಹ ಘಟನೆ ಮತ್ತೆ ಮರುಕಳಿಸಿದರೆ ಹಿಂದೂ ಪರ ಸಂಘಟನೆ ಪ್ರತಿಭಟನೆ ಮಾಡಲಿದೆ ಎಂದರು.
ಇತ್ತೀಚೆಗಷ್ಟೇ ರಸ್ತೆಗೆ ಅಡ್ಡಲಾಗಿ ಗಾಡಿ ಇರಿಸಿದ ವಿಷಯದಲ್ಲಿ 2 ಕೋಮಿನ ಮಧ್ಯದಲ್ಲಿ ಗಲಾಟೆಯಾಗಿ ಪ್ರಕರಣ ಠಾಣೆ ಮೆಟ್ಟಿಲೇರಿ ಐಜಿಪಿ, ಎಸ್ಪಿ ಮತ್ತಿತರ ಹಿರಿಯ ಅಧಿಕಾರಿಗಳು ಬಂದು ಕೊನೆಗೆ ಎರಡು ಗುಂಪುಗಳ ಸದಸ್ಯರ ಬಂಧನ ಬಿಡುಗಡೆಯೊಂದಿಗೆ ಅಂತ್ಯಗೊಂಡಿತ್ತು.
