March 12, 2026
WhatsApp Image 2024-03-23 at 11.48.31 AM

ಕೋಟ: ಟ್ರಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಯಡ್ತಾಡಿ ಸೇತುವೆ ಬಳಿ ಸಂಭವಿಸಿದೆ. ಬಿದ್ಕಲ್‌ಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಿಸುತ್ತಿದ್ದ ಟ್ರಕ್‌ ಹಾಗೂ ಬ್ರಹ್ಮಾವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಚಲಿಸುತ್ತಿದ್ದ ಟ್ರಕ್‌ ನಡುವೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಸಂಭವಿಸಿದ್ದು, ಟ್ರಕ್‌ಗಳು ಜಖಂಗೊಂಡಿವೆ. ಚಾಲಕರು ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ. ಸೇತುವೆಯ ಮೇಲೆ ಅಪಘಾತ ನಡೆದದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬ್ರಹ್ಮಾವರ-ಸಾೖಬ್ರಕಟ್ಟೆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಸಮಸ್ಯೆಯಾಯಿತು. ಅನಂತರ ಕ್ರೇನ್‌, ಜೆಸಿಬಿ ಬಳಸಿ ಟ್ರಕ್‌ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.

About The Author

Leave a Reply

Your email address will not be published. Required fields are marked *

You cannot copy content of this page.