ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೋರ್ವ 48 ವರ್ಷಗಳಿಂದ ಮಾಡುತ್ತಿದ್ದ ಕೆಲಸವನ್ನು ಏನೆಂದು ಅರಿತುಕೊಂಡರೆ ನಿಮಗೆ ತಲೆ ಸುತ್ತು ಬರುವುದು ಖಂಡಿತ. ಏಕೆಂದರೆ ಸತ್ತ ಹೆಂಡತಿಯ ಮೇಲೆ ಈಗಲೂ ಈ ವ್ಯಕ್ತಿ ದ್ವೇಷ ಕಾರುತ್ತಿದ್ದಾನೆ ಎಂದರೆ ಭಯವಾಗುತ್ತದೆ.
43 ವರ್ಷದ ಮೈಕಲ್ ಆಂಡ್ರ್ಯೂಮರ್ಫಿ ಎಂಬವರ ತಾಯಿಯ ಸಮಾಧಿ ಬಳಿ ಪ್ರತೀ ದಿನ ಮೂತ್ರ ಕಾಣಿಸುತ್ತಿತ್ತು. ಮೊದಲಿಗೆ ಪ್ರಾಣಿಗಳಿಂದ ಆಗಿರುವ ಗಲೀಜು ಎಂದು ಅಂದುಕೊಂಡ ಮಗ ಸುಮ್ಮನಾಗಿದ್ದ. ಆದರೆ ಆ ಬಳಿಕ ಏನೋ ತಪ್ಪಾಗಿದೆ ಎಂದು ಭಾವಿಸಿ ಸ್ಮಶಾನದಲ್ಲಿ ಕ್ಯಾಮರಾ ಅಳವಡಿಸಲು ನಿರ್ಧರಿಸಿ, ಸ್ಮಶಾನ ಕಾಯುವವರ ಬಳಿ ಅನುಮತಿ ಪಡೆದುಕೊಂಡಿದ್ದಾರೆ. ಬಳಿಕ ಅಲ್ಲೇ ಸುತ್ತಮುತ್ತ ಇರುವ ಮರಗಳಲ್ಲಿ ಕ್ಯಾಮರವನ್ನು ಇರಿಸಲಾಗಿದೆ.
ಮರುದಿನ ಸೆರೆಯಾದ ದೃಶ್ಯಗಳನ್ನು ನೋಡಿದಾಗ ಯಾರೋ ಒಬ್ಬ ವ್ಯಕ್ತಿ ಸಮಾಧಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂತು. ಈ ಕುರಿತು ತನಿಖೆ ನಡೆಸಿದ ಬಳಿಕ ಬೆಳಕಿಗೆ ಬಂದದ್ದು ಮಾತ್ರ ಆಘಾತಕಾರಿ ಸಂಗತಿ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಸತ್ತ ಮಹಿಳೆಯ ಮಾಜಿ ಪತಿ.
ಮೈಕೆಲ್ ಆಂಡ್ರ್ಯೂ ಮರ್ಫಿ ಅವರ ತಾಯಿ ಟೊರೆಲ್ಲೊ (66) 2017 ರಲ್ಲಿ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಇವರ ಮೃತದೇಹವನ್ನು ನ್ಯೂಯಾರ್ಕ್ ನ ಆರೆಂಜ್‌ಟೌನ್‌ನಲ್ಲಿರುವ ಟಪ್ಪನ್ ರಿಫಾರ್ಮ್ಡ್ ಚರ್ಚ್‌ನಲ್ಲಿರುವ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದೆ.
ಈ ವಿಚಾರದ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಸಹ ಅವರು ದೂರನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ನಮಗೆ ಸರಿಯಾದ ಸಾಕ್ಷ್ಯವಿಲ್ಲ ಎಂದು ಹೇಳಿದ್ದಾರೆ ಅಂತಾ ಮರ್ಫಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಬಳಿಕ ಸ್ಮಶಾನದಲ್ಲಿ ಮರ್ಫಿ ಮತ್ತು ಅವರ ಸಹೋದರಿ ಕಾದುಕುಳಿತು ಆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುವುದನ್ನು ಫೋಟೋ ತೆಗೆದಿದ್ದಾರೆ. ಇದೀಗ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಇನ್ನೊಂದೆಡೆ ಆ ವ್ಯಕ್ತಿ ಟೊರೆಲ್ಲೊ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಬಿಟ್ಟುಹೋಗಿದ್ದಾನೆ. ನನ್ನ ಸಹೋದರಿಯ ಜೊತೆ ಜೈವಿಕ ಸಂಬಂಧವನ್ನು ಆತ ಹೊಂದಿಲ್ಲ ಎಂದು ಮರ್ಫಿ ಸ್ಪಷ್ಟನೆ ನೀಡಿದ್ದಾನೆ.
ಇನ್ನು ಆ ವ್ಯಕ್ತಿಗೆ ತನ್ನ ಹೆಂಡತಿ ಮೇಲೆ ಅನೇಕ ವರ್ಷಗಳಿಂದ ಸೇಡು ಇತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಆತನ ಮುಂಜಾನೆ 6 ಗಂಟೆ ಸುಮಾರಿಗೆ ಸ್ಮಶಾನಕ್ಕೆ ಬಂದು ಸಮಾಧಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಎನ್ನಲಾಗಿದೆ.