




ವೇಣೂರು, ಮೇ 31: ಬೇಸಿಗೆ ರಜೆ ಮುಕ್ತಾಯವಾಗಿ ಇಂದು ಎಲ್ಲೆಡೆ ಸರ್ಕಾರಿ ಶಾಲೆಗಳು ಆರಂಭ ಆದವು. ಪರೀಕ್ಷೆ ಬರೆದು ಇಷ್ಟು ದಿನ ಬೀಸಿಗೆ ರಜೆಯಲ್ಲಿದ್ದ ಮಕ್ಕಳು ಇಂದಿನಿಂದ ಶಾಲೆಗೆ ಪಾಟಿಚೀಲ ಹಿಡಿದು ಶಾಲೆಕಡೆಗೆ ಹೆಜ್ಜೆಹಾಕಿದ ದೃಶ್ಯ ಕಂಡು ಬಂತು.

ಶಾಲೆಗಳಲ್ಲೂ ವಿದ್ಯಾರ್ಥಿಗಳನ್ನು ಬರ್ಜರಿಯಾಗಿ ಸ್ವಾಗತಿಸಲಾಯಿತು. ಬಜಿರೆ ಸರಕಾರಿ ಉ.ಪ್ರಾ. ಶಾಲೆಯನ್ನು ಬೆಲೂನು, ಬಣ್ಣದ ಕಾಗದದ ಶೃಂಗಾರದಿಂದ ಕಂಗೊಳಿಸಲಾಗಿತ್ತು. ಬ್ಯಾಂಡ್, ಡಿ.ಜೆ., ಗೊಂಬೆಕುಣಿತ ಮುಂತಾದ
ವೈಭವದ ಮೆರವಣಿಗೆಯಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ರಿಬ್ಬನ್ ತುಂಡರಿಸಿ ಶಾಲೆಗೆ ಪ್ರವೇಶಿಸಿದರು.
ಮಕ್ಕಳಿಗೆ ಪಾನಿಯ ಮತ್ತು ಸಿಹಿತಿಂಡಿ ವಿತರಿಸಲಾಯಿತು. ಬಳಿಕ ನಡೆದ ಶಾಲಾ ಪ್ರಾರಂಭೋತ್ಸವದ ಉದ್ಘಾಟನೆಯನ್ನು ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಂ. ಸದಸ್ಯರಾದ ಅರುಣ್ ಕ್ರಾಸ್ತ, ಲೋಕಯ್ಯ ಪೂಜಾರಿ, ಸುನಿಲ್ ಕುಮಾರ್, ಲೀಲಾವತಿ, ತಾಯಂದಿರ ಸಮಿತಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಸಿಆರ್‌ಪಿ, ಎಸ್‌ಡಿಎಂಸಿ ಉಪಾಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದ ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಕಮಲಾಜಿ ಎಸ್. ಜೈನ್ ಸ್ವಾಗತಿಸಿದರು.