






ಶಿರ್ಲಾಲು, ಮೇ 31: ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ ಶಿರ್ಲಾಲು-ಸುಲ್ಕೇರಿಮೊಗ್ರು ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹುರುಂಬಿದೊಟ್ಟು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯ ನಾಯ್ಕ, ಉಪಾಧ್ಯಕ್ಷರಾಗಿ ಸಂಜೀವ ನಾಯ್ಕ, ಕಾರ್ಯದರ್ಶಿಯಾಗಿ ರವಿ ನಾಯ್ಕ, ಜೊತೆ ಕಾರ್ಯದರ್ಶಿಯಾಗಿ ಸುರೇಶ ನಾಯ್ಕ, ಕೋಶಾಧಿಕಾರಿಯಾಗಿ ಪ್ರಭಾಕರ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲ, ಸುನಿಲ್, ಪ್ರಸಾದ್, ದಿನೇಶ, ಶ್ರೀಮತಿ ರೂಪಾ, ಶ್ರೀಮತಿ ಚಂದ್ರಾವತಿ, ಓಬಯ್ಯ, ಚಂದ್ರ ಅವರನ್ನು ಆಯ್ಕೆ ಮಾಡಲಾಯಿತು.
ಸುರೇಶ ಸ್ವಾಗತಿಸಿ, ವಂದಿಸಿದರು. ಗ್ರಾಮದ ಗುರಿಕಾರರಾದ ಚಿನ್ನಯ ನಾಯ್ಕ, ಸಂಜೀವ ನಾಯ್ಕ ಉಪಸ್ಥಿತರಿದ್ದರು. ಉಮೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.