


ಹೊಸಂಗಡಿ, ಎ. 28: ಇಲ್ಲಿಯ ಬಡಕೋಡಿಯಿಂದ ಕಾಶಿಪಟ್ಣ ಸಂಪರ್ಕ ರಸ್ತೆಯ ಬದಿಯಲ್ಲಿ ಅಪಾಯಕಾರಿ ವಿದ್ಯುತ್ ಕಂಬವೊಂದು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಸ್ಥಳಾಂತರಿಸುವ ಅಗತ್ಯವಿದೆ.

ರಸ್ತೆ ಅಗಲೀಕರಣದ ವೇಳೆ ವಿದ್ಯುತ್ ಕಂಬ ಸ್ಥಳಾಂತರ ಮಾಡಿಲ್ಲ. ಈಗಾಗಿ ರಸ್ತೆಯ ಡಾಮಾರಿಗೆ ತಾಗಿಕೊಂಡೇ ಕಂಬ ಇದ್ದು, ರಾತ್ರಿವೇಳೆಯಲ್ಲಂತೂ ತುಂಬಾ ಅಪಾಯ ತದ್ದೊಡ್ಡಿದೆ. ಅಲ್ಲದೆ ಬುಡದಲ್ಲಿ ಪೊದೆ ಆವರಿಸಿ ಸುಗಮ ಸಂಚಾರಕ್ಕೆ ಅಡಚಣೆ ಆಗಿದ್ದು, ಮೆಸ್ಕಾಂ ಇಲಾಖೆ ಶೀಘ್ರ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ವೇಣೂರು ಮೆಸ್ಕಾಂ ಜೆ.ಇ. ಗಣೇಶ್ ನಾಯ್ಕ್ ಅವರನ್ನು ಮಾತನಾಡಿಸಿದ್ದು, ಸ್ಥಳಪರಿಶೀಲಿಸಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.