ಅಪಘಾತದ ಹಾಟ್‌ಸ್ಪಾಟ್ ಆಗುತ್ತಿದೆಯೇ ವೇಣೂರು ಚರ್ಚ್ ಬಳಿಯ ಕ್ರಾಸ್!

ವೇಣೂರು, ಎ. 29: ವೇಣೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯ ವೇಣೂರು ಚರ್ಚ್ ಬಳಿಯ ತಿರುವಿನಲ್ಲಿ ಸರಣಿ ರಸ್ತೆ ಅಪಘಾತಗಳು ನಡೆಯುತ್ತಲೇ ಇದ್ದು, ಅಪಘಾತದ ಹಾಟ್‌ಸ್ಪಾಟ್ ಆಗಲಿದೆಯೇ ಅನ್ನುವ ಆತಂಕ ಮೂಡಿದೆ.
ಇಂದು ಶನಿವಾರ ಸಂಜೆ ಈ ತಿರುವಿನಲ್ಲಿ ಟಿಪ್ಪರ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಜಖಂಗೊಂಡಿದೆ.

ಅಪಾಯಕಾರಿ ತಿರುವು
ಇದೊಂದು ಅಪಾಯಕಾರಿ ತಿರುವು ಆಗಿದ್ದು, ಬಹಳ ಹಿಂದಿನಿಂದಲೂ ಇಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ಹೆದ್ದಾರಿ ಅಗಲೀಕರಣದ ವೇಳೆಯೂ ಈ ತಿರುವಿಗೆ ಮುಕ್ತಿ ದೊರೆತ್ತಿಲ್ಲ. ತಿರುವಿನಲ್ಲೇ ಅಡ್ಡವಾಗಿ ಎರಡು ಬೃಹತ್ ಮರಗಳಿದ್ದು, ಈ ಮರಗಳನ್ನು ತೆರವುಗೊಳಿಸಿ ಅಲ್ಪ ಪ್ರಮಾಣದಲ್ಲಾದರೂ ಹೆದ್ದಾರಿಯನ್ನು ನೇರವಾಗಿ ಮಾಡಿದರೆ ಸರಣಿ ಅಪಘಾತ ತಪ್ಪಿಸಬಹುದು ಎನ್ನುತ್ತಾರೆ ಸ್ಥಳೀಯರು.
ವೇಣೂರು ಅರಣ್ಯಾಧಿಕಾರಿ ಭರವಸೆ
ಈ ವೇಣೂರು ಚರ್ಚ್ ಬಳಿಯ ಹೆದ್ದಾರಿಯಿಂದ ಸುಮಾರು 15 ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅನುಮತಿ ಬಂದಿದ್ದು, ತಿಂಗಳೊಳಗೆ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ವೇಣೂರು ವಲಯ ಅರಣ್ಯಾಧಿಕಾರಿ ಮಹೀಮ್ ಎಂ. ಜನ್ನು ಅವರು ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದಾರೆ.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.