ವಿಟ್ಲ: ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೋಡಪದವು ಶಾಖೆಯ ಶಟರ್ ತುಂಡರಿಸಿ ದರೋಡೆಗೆ ಯತ್ನಿಸಿದ ಆರೋಪಿಗಳ ಪೈಕಿ ಓರ್ವನನ್ನು ವಾಹನ ಸಹಿತವಾಗಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಾರೆಬೆಟ್ಟು ನಿವಾಸಿ ಟಿ.ಕೆ. ಅಬ್ದುಲ್ ಸಲಾಂ (37) ಬಂಧಿತ ಆರೋಪಿ. ನ. 23ರಂದು ಬೈಕ್ ಹಾಗೂ ಕಾರಿನಲ್ಲಿ ಆಗಮಿಸಿ ವಿಟ್ಲಪಟ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೋಡಪದವು ಶಾಖೆಯ ಮುಖ್ಯ ಶಟರ್ ಅನ್ನು ಗ್ಯಾಸ್ ಕಟ್ಟರ್ ನಿಂದ ತುಂಡರಿಸಿ ದರೋಡೆಗೆ ವಿಫಲಯತ್ನ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ವಿಟ್ಲ ಪೊಲೀಸರ ತಂಡ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಝೈಲೋ ಕಾರು ಬಳಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಅದನ್ನು ವಶಕ್ಕೆ ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.