May 26, 2025
graha

ಪ್ರತಿ ತಿಂಗಳು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತದೆ. ಗ್ರಹಗಳ ರಾಶಿ ಬದಲಾವಣೆಯಾದಂತೆ ಅದು ನಮ್ಮ ಮೇಲೆ ಖಂಡಿತ ಪರಿಣಾಮವನ್ನು ಬೀರುತ್ತದೆ. ಕೆಲವೊಂದು ಸಲ ಧನಾತ್ಮಕ ಪರಿಣಾಮ ಬೀರಿದರೆ ಇನ್ನೂ ಕೆಲವು ಸಲ ಋಣಾತ್ಮಕ ಪರಿಣಾಮ ಬೀರುತ್ತದೆ. ಇನ್ನೂ ಮೇ ತಿಂಗಳಿನಲ್ಲಿ ನಾಲ್ಕು ಗ್ರಹಗಳು ತಮ್ಮ ರಾಶಿಯನ್ನು ಬದಲಾವಣೆ ಮಾಡಲಿದ್ದು, ಇದರಿಂದ ಕೆಲ ರಾಶಿಗಳು ಆರ್ಥಿಕ ಲಾಭವನ್ನು ಪಡೆಯಲಿದೆ. ಹಾಗಾದ್ರೆ ಆ ರಾಶಿಗಳು ಯಾವುದು ಅನ್ನೋದನ್ನು ನೋಡೋಣ.

ಮೇನಲ್ಲಿ ನಾಲ್ಕು ಗ್ರಹಗಳ ಸಂಚಾರ 

: ಮೇ 15, 2023 ರಂದು ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ ಮೇ 10, 2023 ರಂದು ಕರ್ಕಾಕಟ ರಾಶಿಯಲ್ಲಿ ಮಂಗಳನ ಸಂಚಾರ ಮೇ 15, 2023 ರಂದು ಮೇಷ ರಾಶಿಯಲ್ಲಿ ಬುಧ ಸಂಚಾರ ಮೇ 2, 2023 ರಂದು ಮಿಥುನ ರಾಶಿಯಲ್ಲಿ ಶುಕ್ರ ಸಂಚಾರ

ಈ 5 ರಾಶಿಗಳಿಗೆ ಆರ್ಥಿಕ ಲಾಭವಾಗಲಿದೆ 

: ಸಿಂಹ ರಾಶಿ 

ಗ್ರಹಗಳ ಸಂಚಾರದಿಂದ ಸಿಂಹ ರಾಶಿಯವರು ಈ ಬಾರಿ ಉತ್ತಮ ಫಲವನ್ನು ನಿರೀಕ್ಷೇ ಮಾಡಬಹುದು. ಸಿಂಹ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ. ನೀವು ಸರ್ಕಾರಿ ಉದ್ಯೊಗದಲ್ಲಿದ್ದರೆ ಬಡ್ತಿ ಪಡೆಯುತ್ತೀರಿ. ಇನ್ನೂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೇಗಳಲ್ಲಿ ಯಶಸ್ಸು ಸಿಗುತ್ತದೆ. ಇನ್ನೂ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗಲಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ.

ವೃಶ್ವಿಕ ರಾಶಿ 

ವೃಷಭ ರಾಶಿಯವರಿಗೆ ಗ್ರಹಗಳ ಸಂಚಾರ ಶುಭ ಫಲವನ್ನು ಹೊತ್ತು ತರಲಿದೆ. ಕ್ರೀಡಾ ಪಟುಗಳಿಗೆ ಇದು ಉತ್ತಮ ಸಮಯ. ನೀವು ಬಯಸಿದ್ದೆಲ್ಲಾ ನಿಮಗೆ ಸಿಗಲಿದೆ. ಇನ್ನೂ ಉದ್ಯೋಗದ ವಿಚಾರಕ್ಕೆ ಬರೋದಾದರೆ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜೊತೆಗೆ ನಿಮ್ಮ ಸಂಬಂಧ ಉತ್ತಮವಾಗಲಿದೆ. ನೀವು ಕೆಲಸದಲ್ಲಿ ಪ್ರಗತಿಯನ್ನು ಸಾಧಿಸಲಿದ್ದೀರಿ.

ಮಿಥುನ ರಾಶಿ 

ಮಿಥುನ ರಾಶಿಯವರು ಗ್ರಹಗಳ ಸಂಚಾರದಿಂದ ಉತ್ತಮ ಫಲವನ್ನೇ ನಿರೀಕ್ಷೇ ಮಾಡಬಹುದು. ನಿಮ್ಮ ಜಮೀನಿಗೆ ಸಂಬಂಧಿಸಿದ ವ್ಯಾಜ್ಯಗಳೆಲ್ಲಾ ಬಗೆ ಹರಿಯಲಿದೆ. ಗೆಲುವು ನಿಮ್ಮದಾಗಲಿದೆ. ಈ ಸಮಯದಲ್ಲಿ ನಿಮ್ಮ ಹಣಕ್ಕೆ ಸಮಸ್ಯೆ ಉಂಟಾಗಬಹುದು. ಹಣ ಎಲ್ಲಾದರೂ ಸಿಲುಕಿ ಹಾಕಿಕೊಳ್ಳು ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶ ನಿರೀಕ್ಷೇ ಮಾಡುತ್ತೀರಿ. ನೀವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಆದರೆ ಇದರಿಂದ ಲಾಭ ಪಡೆಯುತ್ತೀರಿ. 

ಮಕರ ರಾಶಿ 

ಗ್ರಹಗಳ ಬದಲಾವಣೆಯೂ ಮಕರ ರಾಶಿಯವರಿಗೆ ಶುಭ ಫಲಗಳನ್ನೇ ಹೊತ್ತು ತರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಕರ ರಾಶಿಯವರು ಪ್ರಗತಿಯನ್ನು ಕಾಣುತ್ತಾರೆ. ಇನ್ನೂ ವಿದೇಶಕ್ಕೆ ಹೋಗುವವರಾದರೆ ವ್ಯವಹರಿಸುವಾಗ ಜಾಗರೂಕತೆಯಿಂದ ಇರಬೇಕು. ವ್ಯಾಪಾರದಲ್ಲಿ ಲಾಭ ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಲಿದೆ. ಈ ಬಾರಿ ನಿಮ್ಮ ಕೈಯಲ್ಲಿ ಹಣ ಉಳಿಯುತ್ತದೆ. ಇನ್ನೂ ಉದ್ಯೋಗಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಯಿಂದ ಪ್ರಶಂಸೆ ಪಡೆಯುತ್ತೀರಿ.

ಮೀನ ರಾಶಿ 

ಮೀನ ರಾಶಿಯವರಿಗೆ ಗ್ರಹಗಳ ಬದಲಾವಣೆ ಲಾಭದಾಯಕವಾಗಿರಲಿದೆ. ಈ ಸಂದರ್ಭದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಾಗೂ ಆರ್ಥಿಕ ಲಾಭವಾಗಲಿದೆ. ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ವೃತ್ತಿ ಜೀವನದಲ್ಲಿ ಅಭಿವೃದ್ಧಿ ಸಾಧಿಸುತ್ತೀರಿ. ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಪಡೆಯುತ್ತೀರಿ, ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>