





ವೇಣೂರು, ಮೇ 13: ಇಲ್ಲಿಯ ಕೆಳಗಿನಪೇಟೆಯ ಮಸೀದಿ ಸಂಪರ್ಕ ರಸ್ತೆಗೆ ವಾಣಿಜ್ಯ ಸಂಕೀರ್ಣದ ಕೊಳಚೆ ನೀರು ಹರಿದಾಡಿ ದುರ್ನಾತ ಬೀರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.
ಸಾರ್ವಜನಿಕ ಸಂಪರ್ಕ ರಸ್ತೆಯ ಬದಿಯಲ್ಲಿ ಇರುವ ಜೆ.ಎಂ. ಟವರ್ ಕಾಂಪ್ಲೆಕ್ಸ್‌ನಿಂದ ಕೊಳಚೆ ನೀರು ರಸ್ತೆಗೆ ಬರುತ್ತಿದ್ದು, ವೇಣೂರು ಗ್ರಾ.ಪಂ. ಸದಸ್ಯರಾದ ಅನೂಪ್ ಜೆ. ಪಾಯಸ್ ಹಾಗೂ ಪಂ. ಸಿಬ್ಬಂದಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ದುರಸ್ತಿ ಮಾಡುವ ಭರವಸೆಯನ್ನು ಕಟ್ಟಡ ಮಾಲಿಕರು ನೀಡಿದ್ದಾರೆ.