ಕುಲಶೇಖರ ಬ್ರಹ್ಮಕಲಶ ವೈಭವ ಕ್ಷೇತ್ರದಲ್ಲಿ ಇಂದು ಸಂಜೆ ಧಾರ್ಮಿಕಸಭೆ: ಯತಿವರ್ಯರಿಂದ ಆಶೀರ್ವಚನ

ಕುಲಶೇಖರ, ಮೇ 15: ಮೇ 14ರಿಂದ 25ರವರೆಗೆ ಜರಗುತ್ತಿರುವ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಇಂದು ಸಂಜೆ 6 ಗಂಟೆಯಿಂದ ನಡೆಯಿರುವ ಪ್ರಥಮ ದಿನದ ಧಾರ್ಮಿಕಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಬೆಳಿಗ್ಗೆ ಕ್ಷೇತ್ರದಲ್ಲಿ ಭಜನೆ, ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ಬೃಹತ್ ಶ್ರಮದಾನ ನಡೆಯಿತು. ಮಧ್ಯಾಹ್ನ 2-30ರಿಂದ 4 ಗಂಟೆಯವರೆಗೆ ಎಡಪದವು ಶ್ರೀರಾಮ ಮಕ್ಕಳ ಕುಣಿತಾ ಭಜನ ತಂಡದಿಂದ ಭಜನೆ ಬಳಿಕ ಶಿಲ್ಪಿಗಳಿಂದ ದೇವಾಲಯ ಪ್ರತಿಗ್ರಹ ನಡೆಯಲಿದೆ.

ಸಂಜೆ 4-30ರಿಂದ ನಡೆಯಲಿರುವ ಪ್ರಥಮ ದಿನದ ಧಾರ್ಮಿಕಸಭೆಯಲ್ಲಿ ಕುಡುಪು ಅನಂತಪದ್ಮನಾಭ ದೇವಸ್ಥಾನದ ತಂತ್ರಿ ಕೃಷ್ಣರಾಜ ತಂತ್ರಿಗಳು, ವಾಮಂಜೂರಿನ ಶ್ರೀಹರಿ ಉಪಾಧ್ಯಾಯ ಉಪಸ್ಥಿತಿ ಇರಲಿದ್ದಾರೆ. ಮಂಗಳೂರಿನ ನ್ಯಾಯವಾದಿ ಉದಯಾನಂದ ಎ. ಅಧ್ಯಕ್ಷತೆ ವಹಿಸಲಿದ್ದಾರೆ. ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರಾದ ವಾಸುದೇವಾ ಮೂಲ್ಯ, ಮುಂಬೈ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂತೋಷ ಜಿ. ಶೆಟ್ಟಿ, ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾಕ್, ಮಂಗಳೂರಿನ ಜ್ಯೋತಿಷಿ ಅನಂತಕೃಷ್ಣ ಭಟ್, ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಕುಲಶೇಖರ ಹಾಲು ಒಕ್ಕೂಟದ ಆಡಳಿತ ನಿರ್ದೇಶಕರುಗಳಾದ ಕೃಷ್ಣರಾಜ್, ಡಿ. ಅಶೋಕ್, ಬದಿಯಡ್ಕ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಾನದ ಗೋಪಾಲಕೃಷ್ಣ ಕುಲಾಲ್ ವಾಂತಿಜಾಲು, ಕೊಂಗೂರುಮಠ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಅನಂತ ಭಟ್ ಬಿ.ಇ., ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಶಿವಾನಂದ ಕನಡ, ಬೊಲ್ಪುಗುಡ್ಡೆ ಶ್ರೀ ಚಂಡಚಾಮುಂಡೇಶ್ವರಿ ಭಜನ ಮಂದಿರದ ಆಡಳಿತ ಮೊಕ್ತೇಸರ ಚಂದ್ರಶೇಖರ್, ಮಂದಾರಬೈಲು ಶ್ರೀ ದುರ್ಗಾಪರಮೇಶ್ವರಿ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ದೇವಾಡಿಗ, ಶ್ರೀ ಕ್ಷೇತ್ರ ಶಿವಪದವು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರೋಹಿದಾಸ್, ಅಲೇರ ಶ್ರೀ ಸತ್ಯಸಾರಮಣಿ ಮೂಲ ದೈವಸ್ಥಾನದ ಅಧ್ಯಕ್ಷ ಶಿವರಾಜ್ ಪಿ.ಬಿ, ಕುಲಶೇಖರ ಸುಬ್ರಹ್ಮಣ್ಯ ಭಜನ ಮಂಡಳಿಯ ಅಧ್ಯಕ್ಷ ಅವಿನಾಶ್ ಬಂಗೇರ, ಕಾಸರಗೋಡಿನ ದೈವಜ್ಞರಾದ ವಿ. ಸುಬ್ರಹ್ಮಣ್ಯ ಭಟ್, ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ, ಮಂಗಳೂರಿನ ಇಂಜಿನಿಯರ್ ಜಿ. ನರೇಂದ್ರ ಪ್ರಭು, ಶಿಲ್ಪಿ ಎಸ್. ಹರೀಶ್ ರಾಯಿ, ದಾರುಶಿಲ್ಪಿ ಸುಂದರ ಆಚಾರಿ ಕೋಟೆಕಾರು, ಸಿವಿಲ್ ಗುತ್ತಿಗೆದಾರ ಹೊನ್ನಪ್ಪ ಕುಲಾಲ್, ಮಾಣಿ ಗುರುದೀಪ ಎಲೆಕ್ಟ್ರಿಕಲ್ಸ್‌ನ ಗುರುರಾಜ್ ಎಸ್. ಮೂಲ್ಯ, ಉದ್ಯಮಿ ಯಶವಂತ್ ಎಂ., ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಕಾರ್ಕಳ ಗೋಪುರಶಿಲ್ಪಿಯ ಎಸ್. ದೊರೆಸ್ವಾಮಿ, ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಶೇಖರ ಪಿ. ಮೂಲ್ಯ, ಮಂಗಳೂರು ಶ್ರೀದೇವಿ ದೇವಸ್ಥಾನದ ಅಧ್ಯಕ್ಷ ಪ್ರಸಾದ್ ಸಿದ್ದಕಟ್ಟೆ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಸೇವಾ ದಳಪತಿ ಕಿರಣ್ ಅಟ್ಲೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್ ತಿಳಿಸಿದ್ದಾರೆ.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.