March 5, 2026
prabhakar naravi

ಬೆಂಗಳೂರು/ನಾರಾವಿ, ಎ.11: ಕರ್ನಾಟಕ ರಾಜ್ಯ ಅಮೇಚೂರು ಸಂಸ್ಥೆ ಬೆಂಗಳೂರು, ಕರ್ನಾಟಕ ರಾಜ್ಯ ತೀರ್ಪುಗಾರರ ಮಂಡಳಿ ಬೆಂಗಳೂರು ಹಾಗೂ ಕಂಠೀರವ ಕ್ರೀಡಾಂಗಣ ಬೆಂಗಳೂರು ಇದರ ವತಿಯಿಂದ ಪ್ರಭಾಕರ್ ನಾರಾವಿ ಅವರನ್ನು ರಾಜ್ಯ ಅಮೆಚೂರ್ ಸಂಸ್ಥೆ ಬೆಂಗಳೂರಿನ ತೀರ್ಪುಗಾರರ ಮಂಡಳಿಯ ರಾಜ್ಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ, ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾಗಿ, ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿಯಾಗಿ, ಪ್ರಸ್ತುತ ನಾರಾವಿ ಉನ್ನತೀಕರಿಸಿದ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಹಾಗೂ ಕಳೆದ ೧೦ ವರ್ಷಗಳಿಂದ ತಾಲೂಕು ಯುವ ಸಬಲೀಕರಣ ಕ್ರೀಡಾ ಇಲಾಖೆಯ ಕ್ರೀಡಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.
23 ವರ್ಷ ಕ್ರೀಡಾತೀರ್ಪುಗಾರಿಕೆಯ ಅನುಭವ ಹಾಗೂ ತಮ್ಮ ಸಂಘಟನಾ ಅನುಭವದ ಮೇರೆಗೆ ರಾಜ್ಯ ಮಟ್ಟದ ತೀರ್ಪುಗಾರರ ಮಂಡಳಿಯ ರಾಜ್ಯ ಸಂಚಾಲಕರಾಗಿ 5 ಜಿಲ್ಲೆಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.