March 4, 2026
gunduri nudi

ಆರಂಬೋಡಿ, ಮೇ 2: ದಿ.ಡೊಂಬಯ್ಯ ಮೂಲ್ಯರ ಸ್ಮರಣಾರ್ಥ ಅವರ ಆತ್ಮಸದ್ಗತಿಗಾಗಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಒಕ್ಕೂಟ (ರಿ.) ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ನುಡಿ ನಮನ ಮತ್ತು ಅನ್ನದಾನ ಕಾರ್ಯಕ್ರಮವು ವೇಣೂರು ಸನಿಹದ ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ಜರುಗಿತು.


ಈ ಸಂದರ್ಭದಲ್ಲಿ ಸುಕುಮಾರ್ ಬಂಟ್ವಾಳ, ಶೇಸಪ್ಪ ಮಾಸ್ತರ್, ವಿಠಲ ಪಲ್ಲಿಕಂಡ, ಕಿಶೋರ್ ಬಂಗೇರ, ಪುನೀತ್ ಕಾಮಾಜೆ, ಕಾರ್ತಿಕ್ ಮಯ್ಯರಬೈಲು, ಸಂತೋಷ್ ಭಂಡಾರಿಬೆಟ್ಟು, ಪ್ರದೀಪ್ ಪಲ್ಲಮಜಲು, ನಿಶಾಲ್ ಕುಲಾಲ್, ಸೌಮ್ಯ ಸುಕುಮಾರ್, ಪದ್ಮನಾಭ ನಾವೂರ ಹಾಗೂ ತುಂಬೆ ಕುಲಾಲ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾದ ನೀಲಪ್ಪ ಸಾಲಿಯಾನ್, ದಿ. ಡೊಂಬಯ್ಯ ಮೂಲ್ಯರ ಮನೆಯವರಾದ ಶಶಿಧರ್ ಸಾಲಿಯಾನ್, ಸುಜಿತ್ ಕುಮಾರ್, ಶ್ರೀಮತಿ ಅಕ್ಷತಾ, ಶ್ರೀಮತಿ ಮನ್ವಿತಾ, ರತನ್, ಉಪಸ್ಥಿತರಿದ್ದರು. ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಅವರು ದಿವಂಗತರ ಆತ್ಮ ಸದ್ಗತಿಗಾಗಿ ಶ್ರೀ ಗುರುರಾಯರಲ್ಲಿ ಪ್ರಾರ್ಥಿಸಿದರೆ, ನಿತೀಶ್ ಕುಲಾಲ್ ಪಲ್ಲಿಕಂಡ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಯುವ ವೇದಿಕೆ ವತಿಯಿಂದ ಆಶ್ರಮವಾಸಿಗಳಿಗೆ ಅಕ್ಕಿ ಮತ್ತು ಶುಚಿತ್ವ ಸಾಮಾಗ್ರಿ ನೀಡಿದರೆ, ದಿವಂಗತರ ಮಕ್ಕಳಿಂದ ಆಶ್ರಮದ ಅಭಿವೃದ್ಧಿಗೆ ರೂ. 5000 ರೂ. ಸಹಾಯಧನ ಹಸ್ತಾಂತರಿಸಲಾಯಿತು.

About The Author

Leave a Reply

Your email address will not be published. Required fields are marked *

You cannot copy content of this page.