

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಂಕೇಶ್ವರದಲ್ಲಿ ರೈಲು ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಇಂದು ಸಂಭವಿಸಿದೆ. ಮೃತ ಯುವಕನನ್ನು ಸಂತೋಷ್ (28 ) ಎಂದು ಗುರುತಿಸಲಾಗಿದೆ.
ಇವರು ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದಿದ್ದು ,ದೇಹವು ಛಿದ್ರಗೊಂಡಿದೆ. ಯುವಕನ ಮೃತದೇಹವನ್ನು ಸ್ಥಳೀಯ ಸರಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.