March 12, 2026
WhatsApp Image 2024-03-26 at 5.54.54 PM
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಈ ಘಟನೆ ಇಂದು ಸಂಭವಿಸಿದೆ.
ಮೃತ ಯುವಕರು ಹೊಸಾಳ ಗ್ರಾಮದ  ಶ್ರೀಶ (21) ಹಾಗೂ ಪ್ರಶಾಂತ್ ಪೂಜಾರಿ (30) ಎಂದು ತಿಳಿಯಲಾಗಿದೆ.
ಇವರು ಇಂದು (ಮಂಗಳವಾರ) ಬೆಳಿಗ್ಗೆ ಮೀನು ಹಿಡಿಯಲೆಂದು   ನಾಗರಮಠದ ಸೀತಾ ನದಿಗೆ  ಹೋಗಿದ್ದು ಮೀನಿಗೆ ಬಲೆ ಹಾಕುವಾಗ  ನೀರಿನ ಸೆಳೆತಕ್ಕೆ  ಸಿಲುಕಿ ಇಬ್ಬರು ಯುವಕರು ನೀರು ಪಾಲಾಗಿರುತ್ತಾರೆ.
ಯುವಕರು ನೀರಿನಲ್ಲಿ ಮುಳುಗುತ್ತಿರುವುದನ್ನು ಸ್ಥಳೀಯರೊಬ್ಬರು ನೋಡಿ ಅವರ ರಕ್ಷಣೆಗೆ ಧಾವಿಸಿದ್ದರೂ  ನೀರಿನ ಸೆಳೆತ ಜೋರಾಗಿದ್ದರಿಂದ ಯುವಕರು ನೀರು ಪಾಲಾದರು ಎಂದು ಹೇಳಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಈಜು ತಜ್ಞ ಈಶ್ವರ್ ಮಲ್ಪೆ  ಹಾಗೂ ಸ್ಥಳೀಯರು ಬಂದು ಕಾರ್ಯಾಚರಣೆ ನಡೆಸಿದ್ದಾರೆ. ಶ್ರೀಶ ಹಾಗೂ ಪ್ರಶಾಂತ್ ಪೂಜಾರಿಯ ಶವ ಹೊಳೆಯಲ್ಲಿ ದೊರೆತಿದ್ದು  ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಮೃತದೇಹವನ್ನು ಬ್ರಹ್ಮಾವರ ಶವಾಗಾರಕ್ಕೆ ಸಾಗಿಸಿರುತ್ತಾರೆ.
ಸ್ಥಳಕ್ಕೆ ಬ್ರಹ್ಮಾವರ  ತಹಶೀಲ್ದಾರ್  ಶ್ರೀಕಾಂತ್ ಹೆಗ್ಡೆ ಹಾಗೂ  ಬ್ರಹ್ಮಾವರ ಠಾಣಾಧಿಕಾರಿ  ಮಧು ಬಿಇ ಭೇಟಿ ನೀಡಿ ಪರಿಶೀಲಿಸಿಲನೆ ನಡೆಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.