ವಿಟ್ಲ: ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ 99 ಸಾವಿರ ರೂ. ವಶ

ವಿಟ್ಲ: ಅಧಿಕೃತ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ಕೊಂಡುಹೋಗುತ್ತಿದ್ದ ನಗದನ್ನು ವಿಟ್ಲ ಸಮೀಪದ ನೆಲ್ಲಿಕಟ್ಟೆ ಚೆಕ್ ಪೋಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳ ಮೂಲದ ನಿತ್ಯನಿಧಿ ಸಂಗ್ರಾಹಕ ಧನಂಜಯ ಎಂಬವರು ನಗದು ಕೊಂಡು ಹೋಗುತ್ತಿದ್ದ ವೇಳೆ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ಗೋಳ್ತಮಜಲು ಗ್ರಾಪಂ ಪಿಡಿಒ, ಎಸ್.ಎಸ್.ಟಿ.ತಂಡದ ಮುಖ್ಯಸ್ಥ ವಿಜಯಶಂಕರ್ ಆಳ್ವ ಅವರ ತಂಡ ತನಿಖೆ ನಡೆಸಿ, ಸೂಕ್ತ ದಾಖಲೆಗಳಿಲ್ಲದ 99 ಸಾವಿರದ 800 ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧನಂಜಯ ಕೇರಳದಲ್ಲಿ ನಿತ್ಯನಿಧಿ ಸಂಗ್ರಾಹಕರಾಗಿದ್ದು, ನಿತ್ಯನಿಧಿಯ ಹಣ ಹಾಗೂ ಕರ್ನಾಟಕದ ರಾಜ್ಯದ ವಿಟ್ಲದ ಕನ್ಯಾನದಲ್ಲಿರುವ ಆಶ್ರಮಕ್ಕೆ ಬಂದು ಅಲ್ಲಿರುವ ಇಬ್ಬರು ಹಿರಿಯ ನಾಗರಿಕರ ಪಿಂಚಣಿಯ ಹಣವನ್ನು ನೀಡಿ ವಾಪಸ್ ಕೇರಳಕ್ಕೆ ಕೊಂಡು ಹೋಗುವ ವೇಳೆ ಹಣ ಸಿಕ್ಕಿದೆ ಎಂದು ಹೇಳಲಾಗಿದೆ. ಹಣದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಹತ್ತು ದಿನಗಳೊಳಗೆ ಜಿಪಂ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಖ್ಯಸ್ಥರಾಗಿರುವ ಸಿ.ಎಸ್.ಆರ್.ಕಮಿಟಿಗೆ ಸಲ್ಲಿಸಿ ಹಣವನ್ನು ಪಡೆಯಲು ಅವಕಾಶವಿದೆ ಎಂದು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿ ಡಾ. ಉದಯ ಶೆಟ್ಟಿ ಮಾಹಿತಿ ನೀಡಿದ್ದಾರೆ.

Check Also

ಸುರತ್ಕಲ್: ಮನೆ ಮೇಲೆ ‌ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುರತ್ಕಲ್: ಭಾರೀ ಗಾಳಿ ಮಳೆಗೆ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಬಿದ್ದು, ಮನೆಯಲ್ಲಿದ್ದ ಬಾಲಕ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ …

Leave a Reply

Your email address will not be published. Required fields are marked *

You cannot copy content of this page.