ಉಡುಪಿ -ಅಂಬಾಗಿಲು ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತ- ಬೈಕ್ ಸವಾರ ಸ್ಥಳದಲ್ಲೇ ಸಾವು

ಡುಪಿ: ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ಶುಕ್ರವಾರ ನಡೆದಿದೆ.

ಅಂಬಾಗಿಲು – ಉಡುಪಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಟಿಪ್ಪರ್ ನ ಅಡಿ ಭಾಗಕ್ಕೆ ಬೈಕ್ ಬಿದ್ದಿದೆ. ಮೃತ ಬೈಕ್ ಸವಾರನನ್ನು ಬ್ರಹ್ಮಾವರದ ಮಟಪಾಡಿ ಮೂಲದ ಪ್ರಭಾಕರ ಆಚಾರಿ ಎಂದು ಗುರುತಿಸಲಾಗಿದೆ. ಅವರು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯ ರಸ್ತೆಗೆ ಬರುತಿದ್ದರು. ಬೈಕ್ ನಲ್ಲಿದ್ದ ಸಹಸವಾರ ತೀವ್ರ ರೀತಿಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Check Also

ಸತ್ಯಬೋಧ ಜೋಶಿಗೆ ಕಸಾಪ ಪುರಸ್ಕಾರ..!

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಖ್ಯಾತ ಪತ್ರಕರ್ತ ಎಂಐಸಿ …

Leave a Reply

Your email address will not be published. Required fields are marked *

You cannot copy content of this page.