ಎಲ್ಲೆಡೆ ಚುನಾವಣೆ ಕಾವು ಹೆಚ್ಚಾಗುತ್ತಾ ಇದೆ. ಇತ್ತ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಗಳೂರು ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಯಕ್ಷಗಾನ, ಕಂಬಳ, ಹಸಿರು, ಸಾಂಪ್ರದಾಯಿಕ, ಸಖಿ, ಯುವ ಹಾಗೂ ವಿಶೇಷ ಚೇತನ ಥೀಮ್ ಆಧಾರಿತ ಮತಗಟ್ಟೆಗಳು ಸಜ್ಜಾಗಿದೆ.
ತಾಲೂಕಿನ 202 ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ, 203 ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 18 ಮತಗಟ್ಟೆಗಳನ್ನು ಬಣ್ಣ ಬಣ್ಣದ ಚಿತ್ತಾರದ ಮೂಲಕ ಶೃಂಗಾರಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಳಾಯಿಬೆಟ್ಟು ಉತ್ತರ ಭಾಗ (ಮ.ಸಂಖ್ಯೆ 227), ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಕಲ್ ಮಂಗಳೂರು ಉತ್ತರ (ಮ.ಸಂಖ್ಯೆ 120), ಪಡುಪೆರಾರ್ ಗ್ರಾಮ ಪಂಚಾಯತ್ ಕಚೇರಿ ಪಡುಪೆರಾರ್ (ಮ.ಸಂಖ್ಯೆ 181), ಸರಕಾರಿ ಪದವಿ ಪೂರ್ವ ಕಾಲೇಜು ಗುರುಪುರ (ಮ.ಸಂಖ್ಯೆ 166), ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪೆದಮಲೆ ನೀರುಮಾರ್ಗ (ಮ.ಸಂಖ್ಯೆ 240) , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುಚ್ಚೂರು (ಮ.ಸಂಖ್ಯೆ 186), ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉರ್ದು ಹಿರಿಯ ಪ್ರಾಥಮಿಕ ಶಾಲೆ ಗಂಜಿಮಠ (ಮ.ಸಂಖ್ಯೆ 213) , ಸರಕಾರಿ ಪ್ರೌಢ ಶಾಲೆ ಮುತ್ತೂರು (ಮ.ಸಂಖ್ಯೆ 208) , ಅನುದಾನಿತ ಪೊಂಪೈ ಹಿರಿಯ ಪ್ರಾಥಮಿಕ ಶಾಲೆ ಕಂದಾವರ (ಮ.ಸಂಖ್ಯೆ 170), ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಣ್ಣಗುಡ್ಡೆ (ಮ.ಸಂಖ್ಯೆ 76), ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು (ಮ.ಸಂಖ್ಯೆ 73), ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕುಲಶೇಖರ (ಮ.ಸಂಖ್ಯೆ 39), ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ (ಮ.ಸಂಖ್ಯೆ 150), ಕಪಿತಾನಿಯೋ ಹಿರಿಯ ಪ್ರಾಥಮಿಕ ಶಾಲೆ ಕಂಕನಾಡಿ (ಮ.ಸಂಖ್ಯೆ 186) , ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಬಲ್ಮಠ (ಮ.ಸಂಖ್ಯೆ 132) ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ಬಂದರ್ (ಮ.ಸಂಖ್ಯೆ 123) , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರೌಢಶಾಲೆ ಅತ್ತಾವರ (ಮ.ಸಂಖ್ಯೆ 143) , ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಂಕನಾಡಿ (ಮ.ಸಂಖ್ಯೆ 136) ಹೀಗೆ ಆಯ್ದ ಮತಗಟ್ಟೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕರ ಉಸ್ತುವಾರಿಯಲ್ಲಿ ಥೀಮ್ ಪ್ರಕಾರ ತಾಲೂಕಿನ ಚಿತ್ರಕಲಾ ಶಾಲಾ ಶಿಕ್ಷಕರು ಎರಡು ತಂಡವಾಗಿ ಬಣ್ಣ ಬಣ್ಣದ ಚಿತ್ತರಾ ಬಿಡಿಸಿದ್ದಾರೆ. ಮಂಜುನಾಥ ನಾಯ್ಕ್ ಅವರ ತಂಡದಲ್ಲಿ ಸುಧೀರ್ ಕುಮಾರ್, ರಾಜೇಶ್ವರಿ, ಅಂಬಿಕಾ ಹೆಚ್.ಆರ್, ಜಯಂತಿ, ಜಾರ್ಜ್, ಅಶೋಕ್ ಲಮಾಣಿ, ದಿನೇಶ್ ಶೆಟ್ಟಿಗಾರ್, ವೆಂಕಟರಮಣ ಕಾಮತ್, ಶೇಖರ್ ಕೊಟ್ಯಾನ್ ಶಿಕ್ಷಕರಿದ್ದು ಬಿ ಎಂ ರಫೀಕ್ ಅವರ ತಂಡದಲ್ಲಿ ವಿದ್ಯಾಲಕ್ಷ್ಮಿ, ಹರೀಶ್, ರಾಜೇಶ್, ಶಾಲಿನಿ, ಲಲಿತಾ, ಸುಚೇತಾ ಹಾಗೂ ಪೂರ್ಣೇಶ್ ಇದ್ದು, ಇವರುಗಳು ಮಾದರಿ ಮತಗಟ್ಟೆಯ ಗೋಡೆಗಳಿಗೆ ಬಣ್ಣ ಬಳಿದು ಹೊಸ ರೂಪ ನೀಡಿದ್ದಾರೆ.
10 ಸಖಿ ಮತಗಟ್ಟೆಯಲ್ಲಿ ಗುಲಾಬಿ ಬಣ್ಣದಿಂದ ಬಣ್ಣ ಬಳೆಯಲಾಗಿದ್ದು, ಇನ್ನು ಮತದಾನದ ದಿನ ಮಹಿಳೆಯರೇ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೇ ಅವರಿಗೂ ಸಹ ತಾಲೂಕು ಸ್ವೀಪ್ ವತಿಯಿಂದ ಗುಲಾಬಿ ಬಣ್ಣದ ಸೀರೆಯನ್ನು ವಿತರಿಸಲಾಗುತ್ತದೆ. ಹಾಗೆಯೇ ವಿಶೇಷ ಚೇತನ ಮತಗಟ್ಟೆಯಲ್ಲೂ ವಿಶೇಷ ಚೇತನ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದು, ಅವರನ್ನು ಮನೆಯಿಂದ ಮತಗಟ್ಟೆಯ ವರೆಗೆ ತಲುಪಿಸುವ ಜವಬ್ದಾರಿ ತಾಲೂಕು ಪಂಚಾಯತ್ ನೋಡಿಕೊಳ್ಳುತ್ತಿದೆ. ಉಳಿದಂತೆ ಯಕ್ಷಗಾನ 1, ಕಂಬಳ 1, ಸಾಂಪ್ರದಾಯಿಕ ಶೈಲಿ 2, ಯುವ ಥೀಮ್ ನ 2 ಸೇರಿದಂತೆ ಒಟ್ಟು 18 ಮತಗಟ್ಟೆಗಳು ಮತದಾನದ ವೇಳೆ ರಂಗು ರಂಗಾಗಿ ಮತದಾರರನ್ನು ತನ್ನತ್ತ ಸೆಳೆಯಲಿದೆ.
ಅನಿಸಿಕೆ:
ಮಾನ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರು ಮತಗಟ್ಟೆಗಳನ್ನು ಪೈಂಟಿಂಗ್ ಮಾಡಲು ನಿರ್ದೇಶಿಸಿದ್ದರು. ಅದರಂತೆ ನಾವು ಇಲಾಖೆಗೆ ಸಂಬಂಧಪಟ್ಟ ಚಿತ್ರಕಲಾ ಶಿಕ್ಷಕರನ್ನು ಕರೆಸಿ ಅವರ ಜತೆ ಸಭೆ ನಡೆಸಿ ಅವರಿಂದ ಈ ಕಾರ್ಯವನ್ನು ಮಾಡಿಸಿದ್ದೇವೆ. ಇದರಿಂದ ಮನದಾನದ ದಿನ ಮತದಾರರಿಗೆ ನೋಡಲು ಸುಂದರ ವಾತಾವರಣ ಕಲ್ಪಿಸಿದಂತಾಗುತ್ತದೆ. ಅವರ ಮನಸ್ಸಿಗೆ ಹಿತವೆನಿಸುತ್ತದೆ.
ಶ್ರೀ ಕೆ.ಸಿ ಅಪ್ಪಣ್ಣ
ಕಾರ್ಯನಿರ್ವಾಹಕ ಅಧಿಕಾರಿ
ಮಂಗಳೂರು ತಾಲೂಕು ಪಂಚಾಯತ್