

ಉಡುಪಿ: ಹೊಟೇಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಭಾರೀ ನಷ್ಟ ಉಂಟಾದ ಘಟನೆ ಉಡುಪಿಯ ಮಲ್ಪೇ ಬೀಚ್ ಬಳಿ ಹೊಟೇಲ್‌ನಲ್ಲಿ ನಡೆದಿದೆ.
ಸಚಿನ್ ಅವರ ಮಾಲಕತ್ವದ ಅಮ್ಮ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ನಡೆದಿದೆ ಎನ್ನಲಾಗಿದೆ. ಐದಾರು ಫ್ರಿಡ್ಜ್, ಗ್ರೈಂಡರ್, ಪಾತ್ರೆ, ದಿನಸಿ ಬೆಂಕಿಗಾಹುತಿಯಾಗಿದ್ದು, ಸುಮಾರು 15 ಲಕ್ಷ ರೂಪಾಯಿ ವೆಚ್ಚದ ವಸ್ತುಗಳು ಸುಟ್ಟು ಕರಕಲಾಗಿದೆ ಎನ್ನಲಾಗಿದೆ.
ಹೋಟೆಲ್ ಬಂದ್ ಮಾಡಿ ಹೋದ ನಂತರ ಫ್ರಿಡ್ಜ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ. ಅಗ್ನಿಶಾಮಕ ದಳದಿಂದ ಬೆಂಕಿ ಹರಡದಂತೆ ರಕ್ಷಣಾ ಕಾರ್ಯ ನಡೆಸಿದರು.