January 15, 2025
WhatsApp Image 2024-05-30 at 6.03.22 PM
ಕಾರ್ಕಳ : ಅನುಮತಿ ಪಡೆಯದೇ ರಾತ್ರಿ ಗಂಟೆ 10ರ ಬಳಿಕ ಯಕ್ಷಗಾನ ಪ್ರದರ್ಶನಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜಾರ್ಕಳ ಮುಂಡ್ಲಿ ಎಂಬಲ್ಲಿ ನಡೆದಿದೆ. ಜ. 14ರಂದು ರಾತ್ರಿ ಮುಂಡ್ಲಿ ಗ್ರಾಮದಲ್ಲಿ ಶ್ರೀ ಈಶ್ವರ ಯಕ್ಷಗಾನ ಸಂಘದ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತಿತ್ತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಜೆಕಾರು ಠಾಣಾ ಪೊಲೀಸರು ಧ್ವನಿವರ್ಧಕಕ್ಕೆ ಅನುಮತಿ ಪಡೆದಿಲ್ಲವಾದ್ದರಿಂದ ಯಕ್ಷಗಾನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಪ್ರತಿಕ್ರಿಯಿಸಿದ ಪೊಲೀಸ್ ಉಪನಿರೀಕ್ಷಕ ಶುಭಕರ ಅವರು ನಾವು ಮೇಲಾಧಿಕಾರಿಗಳ ಆದೇಶದಂತೆ ಆಗಮಿಸಿದ್ದೇವೆ. ಧ್ವನಿವರ್ಧಕಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿಲ್ಲವಾದ್ದರಿಂದ ಯಕ್ಷಗಾನ ನಿಲ್ಲಿಸಬೇಕು ಎಂದರು. ಯಾವುದೇ ಗೊಂದಲವಿಲ್ಲದೆ ಸಾಮರಸ್ಯದಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲದೆ ಎಫ್‌ಐಆರ್‌ ಆಗದೇ ಹೇಗೆ ನಿಲ್ಲಿಸುತ್ತೀರಿ ಎಂದು ಗ್ರಾಮಸ್ಥರು ಪೊಲೀಸರನ್ನು ಪ್ರಶ್ನಿಸಿದಾಗ ಎಫ್‌ಐಆರ್‌ ಮಾಡಿಕೊಂಡು ಬರುವುದಾಗಿ ಪೊಲೀಸರು ಸ್ಥಳದಿಂದ ನಿರ್ಗಮಿಸಿದ್ದಾರೆ. ಗ್ರಾಮಸ್ಥರೆಲ್ಲರನ್ನು ಅರೆಸ್ಟ್‌ ಮಾಡಿಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಯಕ್ಷಗಾನ ಮಂಡಳಿಯ ಅಧ್ಯಕ್ಷರನ್ನು ಅರೆಸ್ಟ್‌ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಅರೆಸ್ಟ್‌ ಮಾಡುವುದಾದರೆ ಅಧ್ಯಕ್ಷರೊಂದಿಗೆ ಗ್ರಾಮಸ್ಥರೆಲ್ಲರನ್ನೂ ಅರೆಸ್ಟ್‌ ಮಾಡಿಯೆಂದು ಸವಾಲು ಹಾಕಿದ ಘಟನೆಯೂ ನಡೆದಿದೆ. ದೂರು ದಾಖಲುಘಟನೆ ಸಂಬಂಧಿಸಿದಂತೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನಲ್ಲಿ ಅಜೆಕಾರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಶುಭಕರ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಜಾರ್ಕಳ ಮುಂಡ್ಲಿ ಗ್ರಾಮದ ಗರಡಿ ಬಳಿ ಅನುಮತಿ ರಹಿತವಾಗಿ ಯಕ್ಷಗಾನ ನಡೆಸಲಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಂದ, ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕಕ್ಕೆ ಪರವಾನಿಗೆ ಪಡೆದಿಲ್ಲ. ಶ್ರೀ ಈಶ್ವರ ಯಕ್ಷಗಾನ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಮಹಾಲಕ್ಷ್ಮೀ ಸೌಂಡ್ಸ್ ಮಾಲಕ ಅಪ್ಪು ಅವರು ಸೌಂಡ್‌ ಸಿಸ್ಟಂ ಬಳಸಿ ಅಪರಾಧವೆಸಗಿರುತ್ತಾರೆ ಎಂದು ದಾಖಲಿಸಿಕೊಳ್ಳಲಾಗಿದೆ. ಗೊಂದಲಯಕ್ಷಗಾನ ನಡೆಯುತ್ತಿದ್ದ ಸ್ಥಳಕ್ಕೆ ಸಂಜೆ ಸುಮಾರು 5.30ರ ವೇಳೆ ಪೊಲೀಸರು ಬಂದಿದ್ದ ವೇಳೆ ಯಕ್ಷಗಾನ ಪ್ರದರ್ಶನಕ್ಕೆ ಧ್ವನಿವರ್ಧಕದ ಅನುಮತಿ ಪಡೆದಿಲ್ಲವಾದ್ದರಿಂದ ಗ್ರಾಮಸ್ಥರು ಕಾರ್ಯಕ್ರಮ ನಡೆಸಲು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಗ್ರಾಮದ ಯಕ್ಷಗಾನ ಮಂಡಳಿಯ ಅಧ್ಯಕ್ಷ ಸದಾನಂದ ಶೆಟ್ಟಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟೀಸ್‌ ನೀಡಿರುತ್ತಾರೆ. ಆದರೆ, ಎಫ್‌ಐಆರ್‌ನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಪೊಲೀಸ್‌ ಉಪನಿರೀಕ್ಷಕರು ದೂರು ದಾಖಲಿಸಿರುವುದು ಎಂದಿದೆ. ಹಾಗಾದರೆ ದೂರು ನೀಡಿರುವವರು ಯಾರು..? ಪೊಲೀಸರು ಗ್ರಾಮಸ್ಥರಿಂದ ಆಕ್ಷೇಪ ಎಂದು ನೋಟೀಸ್‌ ಕೊಟ್ಟಿದ್ದೇಕೆ ಎಂದು ಊರಿನವರು ಹೇಳುತ್ತಿದ್ದಾರೆ. ಯಕ್ಷಗಾನ ಮಂಡಳಿ ಅಧ್ಯಕ್ಷರಿಗೆ ನೀಡಿದ ಪೊಲೀಸ್‌ ನೋಟಿಸ್ ಅನುಮತಿಗೆ ಪಿಡಿಓ ವಿಳಂಬಧ್ವನಿವರ್ಧಕ ಬಳಕೆಯ ಅನುಮತಿಗಾಗಿ ಯಕ್ಷಗಾನ ಮಂಡಳಿಯ ಅಧ್ಯಕ್ಷರ ಮುಂದಾಳತ್ವದಲ್ಲಿ ಗ್ರಾಮಸ್ಥರು ಶಿರ್ಲಾಲು ಗ್ರಾಮ ಪಂಚಾಯತ್‌ಗೆ ಜ. 10ರಂದು ಹೋದಾಗ ಪಿಡಿಓ ಇರಲಿಲ್ಲ. ಶನಿವಾರ ಮತ್ತು ಆದಿತ್ಯವಾರ ರಜೆ ಇದ್ದ ಕಾರಣ ಸೋಮವಾರ ಅನುಮತಿ ನೀಡುವುದಾಗಿ ಪಿಡಿಒ ತಿಳಿಸಿರುತ್ತಾರೆ. ಅದೇ ದಿನ ಅಜೆಕಾರು ಪೊಲೀಸ್‌ ಠಾಣೆಗೆ ಅನುಮತಿಗಾಗಿ ಸಮಿತಿ ಅಧ್ಯಕ್ಷ ಸದಾನಂದ ಅವರು ಹೋದಾಗ ಪಿಡಿಓ ಅವರ ಅನುಮತಿ ಪತ್ರ ತಂದುಕೊಡುವಂತೆ ಠಾಣೆಯಲ್ಲಿ ತಿಳಿಸಿರುತ್ತಾರೆ. ಆದರೆ, ಆನ್‌ಲೈನ್‌ ಮೂಲಕ ಪೊಲೀಸ್‌ ಇಲಾಖೆಗೆ ಸೌಂಡ್ಸ್‌ ಬಳಕೆಗೆ ಚಲನ್‌ ಪಾವತಿಯಾಗಿದೆ. ಇನ್ನು ಸೋಮವಾರ ಅನುಮತಿಗಾಗಿ ಪಿಡಿಓ ಅವರನ್ನು ಸಂಪರ್ಕಿಸಿದಾಗ ಅವರು ನಾನು ರಜೆ ಎಂದು ಪ್ರತಿಕ್ರಿಯಿಸಿರುತ್ತಾರೆ. ಪಿಡಿಓ ಅನುಮತಿ ನೀಡುವುದಿಲ್ಲವೆಂದೂ ಹಿಂಬರಹವನ್ನು ನೀಡದೆ ಹಾಗೆಯೇ ಅನುಮತಿಯನ್ನೂ ನೀಡದೆ ಇದ್ದು ಈ ಬಗ್ಗೆ ಗ್ರಾಮಸ್ಥರು ಹಾಗೂ ಯಕ್ಷಗಾನ ಆಯೋಜಕರು ಗೊಂದಲಕ್ಕೀಡಾಗಿದ್ದಾರೆ. ಆದರೂ ಯಕ್ಷಗಾನ ಸಂಪೂರ್ಣವಾಗಿ ಪ್ರದರ್ಶನಗೊಂಡಿದೆ. ಇಲಾಖೆಗೆ ಪಾವತಿಸಿದ ಚಲನ್‌ ಪ್ರತಿ ಸುಪ್ರಿಂ ಕೋರ್ಟ್‌ ಆದೇಶದಂತೆ ರಾತ್ರಿ 10 ಗಂಟೆ ಅನಂತರ ಕಾರ್ಯಕ್ರಮಗಳಲ್ಲಿ ಧನಿವರ್ಧಕ ಬಳಸುವಂತಿಲ್ಲ. ರಾತ್ರಿ ಕಾರ್ಯಕ್ರಮಕ್ಕೆ ಪೊಲೀಸ್‌ ಠಾಣೆಯಿಂದ ಅನುಮತಿ ಪಡೆಯುವುದು ಕೂಡ ಕಡ್ಡಾಯ. ಕೆಲವೊಂದು ಮೇಳದವರು ಮುಂಜಾನೆವರೆಗೆ ಯಕ್ಷಗಾನ ಪ್ರದರ್ಶಿಸುತ್ತರಾದರೂ ಅವರು ಜಿಲ್ಲಾಧಿಕಾರಿಯವರಿಂದ ವಿಶೇಷ ಅನುಮತಿ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯಲ್ಲಿ ರಾತ್ರಿ 10ರ ಬಳಿಕ ಕಾರ್ಯಕ್ರಮ ನಡೆಯುವುದು ಕಂಡುಬಂದಲ್ಲಿ ಎಸ್‌ಪಿ ಡಾ. ಅರುಣ್‌ ಅವರು ಪೊಲೀಸ್‌ ಅಧಿಕಾರಿ, ಸಿಬ್ಬಂದಿ ವಿರುದ್ಧವೇ ಕ್ರಮಕ್ಕೆ ಮುಂದಾಗುತ್ತಾರೆ. ಹೀಗಾಗಿ ಪೊಲೀಸರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.