March 16, 2026
WhatsApp Image 2024-01-14 at 4.47.17 PM

ಡುಪಿ‌: ಮಣಿಪಾಲದ ಕಟ್ಟಡವೊಂದರ ಹಿಂಭಾಗದ ಖಾಲಿ ಜಾಗದಲ್ಲಿ ರವಿವಾರ ಆಕಸ್ಮಿಕ ಬೆಂಕಿ ದುರಂತ ಸಂಭವಿಸಿದ್ದು, ಅಗ್ನಿಶಾಮಕ ದಳದವರು ಕೂಡಲೇ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಬೆಂಕಿಯ ಕೆನ್ನಾಲಿಗೆಗೆ ಸ್ಥಳದಲ್ಲಿದ್ದ ಕುರುಚಲು ಗಿಡಗಳು ಆಹುತಿಯಾಗಿವೆ.

ಮಧ್ಯಾಹ್ನದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ಖಾಲಿ ಜಾಗದಲ್ಲಿ ಮುಳಿ ಹುಲ್ಲು ಮತ್ತು ಕುರುಚಲು ಗಿಡಗಳು ಮಾತ್ರ ಇದ್ದು, ಅವುಗಳಿಗೆ ಬೆಂಕಿ ತಗುಲಿದ ಪರಿಣಾಮ ಪರಿಸರದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಬಿಸಿಲಿ‌ನ ತಾಪ ಮತ್ತು ಗಾಳಿಯಿಂದಾಗಿ ಬೆಂಕಿ ಬೇಗನೆ ವ್ಯಾಪಿಸಿತ್ತು.ಮಾಹಿತಿ ಲಭಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು.

About The Author

Leave a Reply

Your email address will not be published. Required fields are marked *

You cannot copy content of this page.